ಈ ರಾಶಿಯವರ ಇಷ್ಟಾರ್ಥ ಕರುಣಿಸುತ್ತಾಳೆ ದುರ್ಗಾದೇವಿ..!

Published : Aug 01, 2023, 12:51 PM IST

ಹಿಂದೂ ಧರ್ಮದಲ್ಲಿ ದುರ್ಗಾ ದೇವಿಗೆ ಬಹಳ ಪ್ರಮುಖ ಸ್ಥಾನವಿದ್ದು, ದುರ್ಗೆಯು ಶಕ್ತಿ ಮತ್ತು ಧೈರ್ಯದ ಸಂಕೇತ. ದುರ್ಗೆಯನ್ನು ವಿವಿಧ ರೂಪದಲ್ಲಿ ಪೂಜಿಸಲಾಗುತ್ತದೆ. ಜಗನ್ಮಾತೆಯ ಪೂಜೆಯು ಎಲ್ಲ ಇಷ್ಟಾರ್ಥಗಳನ್ನು ಕರುಣಿಸುತ್ತದೆ ಎಂಬುದು ಆಸ್ತಿಕರ ಬಲವಾದ ನಂಬಿಕೆ.

PREV
14
ಈ ರಾಶಿಯವರ ಇಷ್ಟಾರ್ಥ ಕರುಣಿಸುತ್ತಾಳೆ ದುರ್ಗಾದೇವಿ..!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ದುರ್ಗಾ ಮಾತೆ ರಾಶಿಚಕ್ರದ ಎಲ್ಲಾ 12 ರಾಶಿಗಳ ಚಿಹ್ನೆಗಳ ಮೇಲೆ ತನ್ನ ಅನುಗ್ರಹವನ್ನು ಇಟ್ಟುಕೊಳ್ಳುತ್ತಾಳೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಾತೆ ಅಂಬೆಯ ವಿಶೇಷ ಆಶಿರ್ವಾದವಿದೆ. ಆ ರಾಶಿಚಕ್ರ ಚಿಹ್ನೆಗಳ ಬಗ್ಗೆ ತಿಳಿಯಿರಿ. 

24

ಮೇಷ ರಾಶಿಯ ಜನರು ಹುಟ್ಟಿನಿಂದಲೇ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಯಾವ ಕೆಲಸದಲ್ಲಿ ಕೈ ಹಾಕಿದದೂ ಯಶಸ್ಸು ಸಿಗುತ್ತದೆ ಎನ್ನುತ್ತಾರೆ. ನೀವು ಬಹಳಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಜೀವನವು ಸಂತೋಷದಿಂದ ತುಂಬಿರುತ್ತದೆ. ನವರಾತ್ರಿಯಲ್ಲಿ ಈ ರಾಶಿಚಕ್ರ ಚಿಹ್ನೆಗಳ ಜನರು, ತಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯಬಹುದು.

34

ನವರಾತ್ರಿಯಲ್ಲಿ ಮಾತೆ ದುರ್ಗೆಯ ಕೃಪೆಯಿಂದ ಸಿಂಹ ರಾಶಿಯ ಜನರ ಭವಿಷ್ಯವು ಬದಲಾಗುತ್ತದೆ. ಈ ಸಮಯದಲ್ಲಿ ವ್ಯಾಪಾರವು ಉತ್ತಮವಾಗಿರುತ್ತದೆ. ದುರ್ಗೆಯ ಕೃಪೆಯಿಂದ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದ ಸ್ಥಳಗಳಲ್ಲಿ ಪ್ರಗತಿ ಕಾಣಬಹುದು.

44

ತುಲಾ ರಾಶಿಯವರಿಗೆ ದುರ್ಗಾ ಮಾತೆಯ ಆಶೀರ್ವಾದ ಇರುತ್ತದೆ. ಪೂರ್ವಿಕರ ಆಸ್ತಿಯ ಲಾಭವನ್ನು ಪಡೆಯಬಹುದು. ವಿವಾಹಿತರ ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ಕೆಲಸದ ಸ್ಥಳಗಳಲ್ಲಿ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು.

Read more Photos on
click me!

Recommended Stories