ಈ 4 ತಿಂಗಳಲ್ಲಿ ಜನಿಸಿದವರಲ್ಲಿರುತ್ತೆ ಮನಸ್ಸು ಓದುವ ಶಕ್ತಿ; ತಾಳ್ಮೆಯೇ ಇದರ ಗುಟ್ಟು

Published : Sep 18, 2025, 02:59 PM IST

ತಾಳ್ಮೆಯೇ ಇದರ ಗುಟ್ಟು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ತಿಂಗಳು ಅವರ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.  ಈ ತಿಂಗಳಲ್ಲಿ ಜನಿಸಿದವರು ಇತರರ ಮನಸ್ಸನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. 

PREV
15
ವ್ಯಕ್ತಿಯ ವ್ಯಕ್ತಿತ್ವ

ಜನ್ಮ ದಿನಾಂಕ, ಸಮಯ, ತಿಂಗಳು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ತಿಂಗಳಲ್ಲಿ ಜನಿಸಿದವರು ಇತರರ ಮನದಾಳದ ಮಾತನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

25
ಫೆಬ್ರವರಿ

ಫೆಬ್ರವರಿಯಲ್ಲಿ ಜನಿಸಿದವರು ಭಾವನಾತ್ಮಕ ಜೀವಿಗಳಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಾರೆ. ತಮ್ಮೊಂದಿಗಿರುವ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಜನರ ದೇಹ ಭಾಷೆ, ಧ್ವನಿಯ ಏರಿಳಿತ ಮತ್ತು ಮುಖದ ಹಾವಭಾವದ ಮೂಲಕ ಅವರ ಮನಸ್ಸಿನಲ್ಲಿ ಎನಿದೆ ಎಂದು ನಿಖರವಾಗಿ ಊಹಿಸುತ್ತಾರೆ. ಈ ಗುಣ ಇವರಲ್ಲಿ ಸ್ವಾಭಾವಿಕವಾಗಿಯೇ ಬಂದಿರುತ್ತದೆ.

35
ಮೇ

ಮೇ ತಿಂಗಳಲ್ಲಿ ಜನಿಸಿದವರು ಬೇರೆಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ನಿಪುಣರು. ತಾಳ್ಮೆಯಿಂದ ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ. ಒಳ್ಳೆಯ ಕೇಳುಗರಾಗಿರುವ ಇವರು ಎಲ್ಲಾ ಮಾತುಗಳನ್ನು ಆಲಿಸಿ ಅದರಲ್ಲಿರುವ ಆಂತರಿಕ ಅರ್ಥಗಳನ್ನು ತಿಳಿದುಕೊಳ್ಳುತ್ತಾರೆ. ಮೇನಲ್ಲಿ ಜನಿಸಿದವರು ತೀಕ್ಷ್ಣವಾದ ಆಂತರಿಕ ಇಂದ್ರಿಯ ಮತ್ತು ಸೂಕ್ಷ್ಮ ದೃಷ್ಟಿಯನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ!

45
ನವೆಂಬರ್‌

ನವೆಂಬರ್‌ನಲ್ಲಿ ಜನಿಸಿದವರು ಸಹ ಬೇರೆಯವರ ಮನಸ್ಸನ್ನು ಸುಲಭವಾಗಿ ಓದುತ್ತಾರೆ. ಆಳವಾದ ಅಂತಃಪ್ರಜ್ಞೆ ಹೊಂದಿರುವ ಇವರು, ಮನಸ್ಸಿನಲ್ಲಿ ಅಡಗಿರುವ ಆಲೋಚನೆ ಮತ್ತು ಭಾವನೆಗಳನ್ನು ಸುಲಭವಾಗಿ ಪತ್ತೆ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಬೇರೆಯವರ ಭಾವನೆಗಳೊಂದಿಗೆ ಬೆಸೆದುಕೊಂಡು ಅವರ ಮನಸ್ಸಿನ ಮಾತುಗಳಿಂದ ಮಾತನಾಡುವ ವಿಶೇಷ ಶಕ್ತಿಯನ್ನು ಹೊಂದಿರುತ್ತಾರೆ. ಇತರರ ಮನಸ್ಸಿನಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಬಗೆಹರಿಸಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: ಈ ರಾಶಿಗೆ ಅಕ್ಟೋಬರ್‌ನಲ್ಲಿ ಬಂಪರ್ ಲಾಟರಿ, ಹೆಜ್ಜೆ ಹೆಜ್ಜೆಗೂ ದೊಡ್ಡ ಯಶಸ್ಸು

55
ಆಗಸ್ಟ್‌

ಆಗಸ್ಟ್‌ನಲ್ಲಿ ಜನಿಸಿದವರು ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಹಾಗಾಗಿ ಎಲ್ಲರನ್ನು ಅತ್ಯಂತ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಗಮನಿಸುತ್ತಾರೆ. ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ. ಮನಸ್ಸನ್ನು ಆಳವಾಗಿ ಓದುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories