ಈ ವಾರ 5 ಗ್ರಹಗಳ ಅಪರೂಪದ ಸಂಚಾರದಿಂದ ಶಶಿ ರಾಜ್ಯಯೋಗ ಮತ್ತು ಬುಧಾದಿತ್ಯ ರಾಜ್ಯಯೋಗಗಳು ರೂಪುಗೊಳ್ಳುತ್ತಿವೆ. ಈ ವಿಶೇಷ ಯೋಗದಿಂದಾಗಿ 5 ರಾಶಿಯವರ ಜೀವನದಲ್ಲಿ ಗಮನಾರ್ಹವಾದ ಧನಾತ್ಮಕ ಬದಲಾವಣೆಗಳು ಸಂಭವಿಸಲಿವೆ.
ಈ ವಾರ 5 ಗ್ರಹಳು ಏಕಕಾಲದಲ್ಲಿ ಸಾಗುತ್ತಿರುವ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಸೂರ್ಯ ಮತ್ತು ಬುಧ ಕನ್ಯಾ ರಾಶಿ, ಮಂಗಳ ತುಲಾ ರಾಶಿ, ಶುಕ್ರ ಸಿಂಹ ರಾಶಿ ಮೂಲಕ ಸಾಗಿದ್ದಾನೆ. ಚಂದ್ರ ತನ್ನದೇ ಕರ್ಕ ರಾಶಿಯಲ್ಲಿ ಕುಳಿತು ಶಶಿ ರಾಜ್ಯಯೋಗ ರೂಪಿಸಿದ್ರೆ, ಸೂರ್ಯ ಮತ್ತು ಬುಧದ ಸಂಯೋಗದಿಂದ ಬುಧಾದಿತ್ಯ ರಾಜ್ಯಯೋಗ ರೂಪಿಸಿದ್ದಾನೆ. ಈ ವಿಶೇಷ ಯೋಗದಿಂದ ಐದು ರಾಶಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಆ ಐದು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.
26
ಮೇಷ ರಾಶಿ: ಆತ್ಮವಿಶ್ವಾಸ ಹೆಚ್ಚಳ
ಮಂಗಳ ತುಲಾ ರಾಶಿಯಲ್ಲಿದ್ದರೂ ಮೇಷ ರಾಶಿ ಮೇಲೆ ಅತ್ಯಧಿಕ ಪ್ರಭಾವ ಬೀರಲಿದೆ. ಮಂಗಳನ ಪ್ರಭಾವದಿಂದಾಗಿ ಮೇಷ ರಾಶಿಯವರ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನಿಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡೋದರ ಜೊತೆಗೆ ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಳ ಮಾಡುತ್ತದೆ. ಈ ಸಮಯದಲ್ಲಿ ವೃತ್ತಿಜೀವನಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗಲಿದೆ. ಧೃಢ ನಿರ್ಧಾರಗಳಿಂದ ನಿಮ್ಮಲ್ಲಿ ಅದಮ್ಯ ಚೇತನ ಶಕ್ತಿ ರಚನೆಯಾಗಲಿದೆ. ಮಂಗಳನ ಕೃಪೆಯಿಂದಾಗಿ ಮನೆಯಲ್ಲಿ ಶುಭ-ಸಮಾರಂಭಗಳು ನಡೆಯುತ್ತವೆ.
36
ವೃಷಭ ರಾಶಿ: ಭೌತಿಕ ಸೌಕರ್ಯದಲ್ಲಿ ಹೆಚ್ಚಳ, ನೆಮ್ಮದಿಯ ಮನಸ್ಸು
ಈ ವಾರ ಶುಕ್ರ ನಿಮ್ಮ ರಾಶಚಕ್ರದ ನಾಲ್ಕನೇ ಮನೆ ಪ್ರವೇಶಿಸಲಿದ್ದಾನೆ. ಶುಕ್ರ ಸಂಚಾರದಿಂದ ಭೌತಿಕ ಸೌಕರ್ಯಗಳು ಹೆಚ್ಚಾಗಲಿದ್ದು, ಧನಾತ್ಮಕ ಲಾಭಗಳನ್ನು ಕಾಣುತ್ತೀರಿ. ಶುಕ್ರನ ಪ್ರಭಾವದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳಿರುತ್ತವೆ. ಜೀವನದಲ್ಲಿ ಸುಖ, ತೃಪ್ತಿ ಮತ್ತು ನೆಮ್ಮದಿಯ ಭಾವವನ್ನು ಅನುಭವಿಸುತ್ತೀರಿ. ಹಳೆಯ ಒಪ್ಪಂದ ಅಥವಾ ನಿಂತು ಹೋಗಿರುವ ಕೆಲಸಗಳು ಕಾರ್ಯರೂಪಕ್ಕೆ ಬರಲಿವೆ.
ಶುಕ್ರನು ಸಿಂಹ ರಾಶಿಯ ಮೂಲಕ ಸಾಗುತ್ತಿರೋದರಿಂದ ಸಮಾಜದಲ್ಲಿ ಗೌರವ ಹೆಚ್ಚಳವಾಗುತ್ತದೆ. ನೀವು ವಾಸಿಸುವ ಅಥವಾ ಕೆಲಸ ಮಾಡುವ ಪ್ರದೇಶದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತೀರಿ. ಶುಕ್ರನ ಪ್ರಭಾವದಿಂದಾಗಿ ಭೌತಿಕ ಸೌಕರ್ಯಗಳು ಹೆಚ್ಚಾಗಲಿವೆ. ಲವ್ ಮ್ಯಾರೇಜ್ ಆಗಲು ಬಯಸೋರಿಗೆ ಕುಟುಂಬದಿಂದ ಒಪ್ಪಿಗೆ ಸಿಗಲಿದೆ. ಸಾಂಸ್ಕೃತಿಕ ವಿಭಾಗದಲ್ಲಿ (ಕಲೆ, ಸಿನಿಮಾ, ಡ್ಯಾನ್ಸ್) ಕೆಲಸ ಮಾಡೋರಿಗೆ ಯಶಸ್ಸು ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸುತ್ತದೆ.
56
ಕನ್ಯಾ ರಾಶಿ: ವೃತ್ತಿಜೀವನದಲ್ಲಿ ಗಮನಾರ್ಹ ಯಶಸ್ಸು
ಬುಧ ಮತ್ತು ಸೂರ್ಯ ಕನ್ಯಾರಾಶಿಯಲ್ಲಿ ಸಾಗುತ್ತಿದ್ದು, ಬುಧಾದಿತ್ಯ ರಾಜಯೋಗ ರೂಪಿಸುತ್ತಿದ್ದಾರೆ. ಬುಧ ಮತ್ತು ಸೂರ್ಯನ ಪ್ರಭಾವದಿಂದಾಗಿ ವೃತ್ತಿಜೀವನದಲ್ಲಿ ಗಮನಾರ್ಹ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಹೊಸ ಕಲಿಕೆಗೆ ಇದು ಒಳ್ಳೆಯ ಸಮಯವಾಗಲಿದೆ. ಇದರಿಂದ ನಿಮ್ಮ ಆದಾಯವು ಹೆಚ್ಚಳವಾಗುತ್ತದೆ. ನಿಮ್ಮ ಮಾತುಗಳಿಂದ ಜನರನ್ನು ಮೆಚ್ಚಿಸುತ್ತೀರಿ.
ತುಲಾ ರಾಶಿ ಚಕ್ರದಲ್ಲಿ ಮಂಗಳ ಗ್ರಹ ಸಾಗುತ್ತಿದ್ದು, ಇದರ ಪ್ರಭಾವದಿಂದ ಎಲ್ಲಾ ಕೆಲಸಗಳು ಮೇಲೆ ನಿಮ್ಮ ಗಮನ ಕೇಂದ್ರಿಕೃತವಾಗಿರುತ್ತದೆ. ಈ ಶ್ರದ್ಧೆಯಿಂದ ಹೊಸ ಉದ್ಯೋಗವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಈ ಮೂಲಕ ಆದಾಯ ಹೆಚ್ಚಾಗೋದರ ಜೊತೆಗೆ ನಿಮ್ಮ ಬಹುದಿನಗಳ ಆಸೆ ನೆರವೇರುತ್ತವೆ. ಈ ವಾರ ಹೆಚ್ಚಿನ ಮತ್ತು ಹೊಸ ಆದಾಯ ಮೂಲಗಳನ್ನು ಕಂಡುಕೊಳ್ಳುತ್ತೀರಿ. ಇದರಿಂದ ತುಲಾ ರಾಶಿಯುವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.