ಇಂದು 6 ರಾಶಿಚಕ್ರ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ, ಆಹ್ಲಾದಕರ ವಾತಾವರಣದಿಂದ ಮನಸ್ಸು ನಿರಾಳ

Published : Sep 27, 2025, 08:48 AM IST

Zodiac signs financial gain: ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಚಕ್ರದವರಿಗೆ ದಿಢೀರ್ ಆರ್ಥಿಕ ಲಾಭಗಳು ಮತ್ತು ಅನಿರೀಕ್ಷಿತ ಆದಾಯ ಹೆಚ್ಚಳವಾಗಲಿದೆ. ಉದ್ಯೋಗ, ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಯಶಸ್ಸು ಸಿಗಲಿದ್ದು, ಆರ್ಥಿಕ ಸ್ಥಿರತೆ ಹೆಚ್ಚಾಗಲಿದೆ.

PREV
17
ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯದಲ್ಲಿ ಕೆಲವು ರಾಶಿಚಕ್ರದವರಿಗೆ ದಿಢೀರ್ ಆರ್ಥಿಕ ಲಾಭಗಳಾಗಲಿದೆ. ಅನಿರೀಕ್ಷಿತ ಮೂಲಗಳಿಂದ ಆದಾಯ ಹೆಚ್ಚಳವಾಗಲಿದ್ದು, ಇದು ಭವಿಷ್ಯದಲ್ಲಿ ಆರ್ಥಿಕ ಸ್ಥಿರತೆಗೆ ಕಾರಣವಾಗುತ್ತದೆ. ಈ ಮೂಲಕ ಹಂತ ಹಂತವಾಗಿ ಆರ್ಥಿಕ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ. ಖ್ಯಾತ ಜೋತಿಷ್ಯ ತಜ್ಞರಾಗಿರುವ ಫಣಿಕುಮಾರ್ ಈ ಮಾಹಿತಿಯನ್ನು ನೀಡಿದ್ದಾರೆ. ಆ ರಾಶಿ ಚಕ್ರಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

27
ವೃಷಭ ರಾಶಿ

ಈ ರಾಶಿಯವರು ಉದ್ಯೋಗಿಗಳಾಗಿದ್ರೆ ಪ್ರಮೋಷನ್ ಸೇರಿದಂತೆ ಬೋನಸ್ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ವ್ಯಾಪಾರಿಗಳಾಗಿದ್ರೆ ವ್ಯವಹಾರದಲ್ಲಿ ಚೇತರಿಕೆ ಕಂಡು ಬರಲಿದೆ. ಇದೆಲ್ಲದರ ಜೊತೆ ವೃಷಭ ರಾಶಿಯವರಿಗೆ ಇಂದು ಸಂಗಾತಿಯೊಂದಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಸುವರ್ಣವಕಾಶ ಬರಲಿದೆ. ಇದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದ್ದು, ನೆಮ್ಮದಿ ನಿಮ್ಮದಾಗುತ್ತದೆ.

37
ಮಿಥುನ ರಾಶಿ

ಈ ರಾಶಿಯ ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳೋದು ಅವರ ವಿವೇಚನೆಗೆ ಬಿಟ್ಟಿರುತ್ತದೆ. ಈ ಅವಕಾಶಗಳಿಂದ ನಿಮ್ಮ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಾಗುತ್ತದೆ. ಇನ್ನು ವೃತ್ತಿ ಮತ್ತು ವ್ಯವಹಾರದಲ್ಲಿಯೂ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.

47
ಕನ್ಯಾ ರಾಶಿ

ಕನ್ಯಾರಾಶಿಯವರ ಹಣಕಾಸಿನ ಯೋಜನೆಗಳಿಗೆ ಫಲ ಸಿಗುವ ಸಾಧ್ಯತೆಗಳಿದ್ದು, ಇದರಿಂದ ಸಮಾಜದಲ್ಲಿ ಗೌರವ ಹೆಚ್ಚಳವಾಗುತ್ತದೆ. ಹೊಸ ಹೂಡಿಕೆಯಿಂದ ಆರ್ಥಿಕ ಭದ್ರತೆ ಹೆಚ್ಚಳವಾಗುತ್ತದೆ. ಇದೇ ಸಮಯದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿನ ಒತ್ತಡ ಕಡಿಮೆಯಾಗಿ ಲಾಭದ ಪ್ರಮಾಣ ಏರಿಕೆಯಾಗುತ್ತದೆ. ಅಡೆತಡೆಗಳಿಂದ ನಿಂತಿದ್ದ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ.

57
ವೃಶ್ಚಿಕ ರಾಶಿ

ಈ ರಾಶಿಯವರಿಗೆ ಆದಾಯದ ಮೂಲಗಳು ತೃಪ್ತಿಕರವಾಗಿರುತ್ತವೆ ಎಂದು ಹೇಳಬಹುದು. ವ್ಯವಹಾರದಲ್ಲಿ ಹೊಸ ಹೂಡಿಕೆ ಮಾರ್ಗಗಳು ಸಿಗಲಿದ್ದು, ಇವುಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತವೆ. ಇದೆಲ್ಲದರೊಂದಿಗೆ ವೃತ್ತಿಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: 46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ

67
ಮಕರ ರಾಶಿ

ಇಂದಿನ ಭವಿಷ್ಯದ ಪ್ರಕಾರ, ಮಕರ ರಾಶಿಯವರಿಗೆ ಆರ್ಥಿಕ ವ್ಯವಹಾರಗಳು ಆಶಾದಾಯಕವಾಗಿದ್ದು, ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಉದಾಹರಣೆಗೆ ಸಂಬಳ ಮತ್ತು ಭತ್ಯೆ ಹೆಚ್ಚಳವಾಗುವ ಸಾಧ್ಯೆತಗಳಿರುತ್ತವೆ. ಹೊಸ ವಾಹನ ಖರೀದಿಸುವ ಯೋಗವೂ ನಿಮ್ಮದಾಗಲಿದೆ.

ಇದನ್ನೂ ಓದಿ: ಗಂಡನನ್ನು ಚಿನ್ನದಂತೆ ಜೋಪಾನ ಮಾಡುವ ಮಹಿಳೆಯರು ಈ 4 ತಿಂಗಳಲ್ಲೇ ಹುಟ್ಟಿರುತ್ತಾರೆ!

77
ಕುಂಭ ರಾಶಿ

ಈ ರಾಶಿಯ ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಸ್ನೇಹಿತರಿಂದ ಒಳ್ಳೆಯ ವಿಷಯವನ್ನು ಕೇಳುತ್ತೀರಿ. ಕೆಲಸ ಮಾಡುವ ಸ್ಥಳದಲ್ಲಿಯೂ ಆಹ್ಲಾದಕರ ವಾತಾವರಣ ನಿರ್ಮಾಣವಾಗಿ ನಿಮ್ಮ ಕೆಲಸದ ಸಾಮರ್ಥ್ಯ ಹೆಚ್ಚಳವಾಗುತ್ತದೆ. ಇಂದು ಭೂ ಖರೀದಿ ಮತ್ತು ಮಾರಾಟ ಅನುಕೂಲಕರವಾಗಿದೆ. ಇದರಿಂದ ಅನಿರೀಕ್ಷಿತ ಲಾಭ ನಿಮ್ಮದಾಗುತ್ತದೆ.

ಇದನ್ನೂ ಓದಿ: ಮದುವೆ ನಡೆಯುವಾಗ ಮಳೆ ಬಂದರೆ ಒಳ್ಳೆಯ ಶಕುನವೇ? ಕೆಟ್ಟ ಶಕುನವೇ?

Read more Photos on
click me!

Recommended Stories