ಏಕಾದಶಿಯ ದಿನ ತುಳಸಿ ತೆಗೆಯಬೇಡಿ : ಯಾವುದೇ ಏಕಾದಶಿ, ರಾತ್ರಿ, ಭಾನುವಾರ, ಚಂದ್ರಗ್ರಹಣ ಮತ್ತು ಸೂರ್ಯ ಗ್ರಹಣದಲ್ಲಿ ತುಳಸಿ ಎಲೆಗಳನ್ನು ತೆಗೆಯುವುದು ಒಂದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ತುಳಸಿ ಎಲೆಗಳನ್ನು ತೆಗೆಯುವುದು ಪೂಜೆಯ ಫಲವನ್ನು ನೀಡುವುದಿಲ್ಲ ಮತ್ತು ಮನೆಯಲ್ಲಿ ದುರಾದೃಷ್ಟ (Bad effect) ಉಂಟಾಗುತ್ತದೆ ಎಂಬ ನಂಬಿಕೆ. ಅಲ್ಲದೆ ಭಾನುವಾರದಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು ಎಂದು ಸಹ ಹೇಳಲಾಗುತ್ತದೆ.