Navratri: ಒಂಭತ್ತು ದಿನಗಳ ಹಬ್ಬದ ಆಚರಣೆಯ ಹಿಂದಿನ ಇತಿಹಾಸ ತಿಳಿಯಿರಿ

First Published | Oct 4, 2021, 12:00 PM IST

ಇನ್ನೇನು ನವರಾತ್ರಿ ಬಂದೇ ಬಿಟ್ಟಿದೆ. 10 ದಿನಗಳ ಈ ಕಾರ್ಯಕ್ರಮವನ್ನು ಭಾರತದಾದ್ಯಂತ ಬಹಳ ಭವ್ಯತೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ದುರ್ಗಾ ದೇವಿಯನ್ನು (Durga Puja) ಪೂಜಿಸಲಾಗುತ್ತದೆ; ಅವಳು ಶಕ್ತಿಯ ಸಂಕೇತ. ನವರಾತ್ರಿ ಎಂದರೆ "ಒಂಬತ್ತು ರಾತ್ರಿಗಳು"(nine nights), ಇದು ಈ ವರ್ಷದ ಅಕ್ಟೋಬರ್ 7ರಿಂದ ಆರಂಭವಾಗಲಿದೆ.  ಅಕ್ಟೋಬರ್ 15 ರವರೆಗೆ ನಡೆಯಲಿದೆ. ನವರಾತ್ರಿ ಒಂದು ಹಿಂದೂ ಹಬ್ಬವಾಗಿದ್ದು, ರಾಕ್ಷಸ ರಾಜ ಮಹಿಷಾಸುರನನ್ನು ಗೆದ್ದ ದುರ್ಗಾ ದೇವಿಯನ್ನು ಈ ಹಬ್ಬದಲ್ಲಿ ಸ್ಮರಿಸಲಾಗುತ್ತದೆ.

ಹಬ್ಬದ ಇತಿಹಾಸ (History of Navaratri)
ನವರಾತ್ರಿಯ ಬಗ್ಗೆ ಹಲವಾರು ಪುರಾಣ ಕಥೆಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ. ಪುರಾಣಗಳ ಪ್ರಕಾರ, ಬ್ರಹ್ಮದೇವನು ರಾಕ್ಷಸ ರಾಜ ಮಹಿಷಾಸುರನಿಗೆ (Demon Mahisha) ಅಮರತ್ವವನ್ನು ವಾಗ್ದಾನ ಮಾಡಿದನು . ಅಂದರೆ ಕೇವಲ ಒಬ್ಬ ಮಹಿಳೆಯಿಂದ ಮಾತ್ರ ಅವನನ್ನು ಸೋಲಿಸಲು ಅಥವಾ ಸಂಹಾರ ಮಾಡಲು ಸಾಧ್ಯ ಎಂದು ವರ ನೀಡಲಾಗಿತ್ತು.

ಯಾವ ಹೆಣ್ಣು ತನ್ನನ್ನು ಕೊಲ್ಲಲು ಸಾಧ್ಯವೇ ಇಲ್ಲ ಎಂಬ ಭ್ರಮೆಯಲ್ಲಿದ್ದ ಮಹಿಷಾಸುರನು ತ್ರಿಲೋಕಗಳ ಮೇಲೆ ದಾಳಿ ಮಾಡುವುದನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ, ಅವುಗಳೆಂದರೆ ಭೂಮಿ (Earth), ಸ್ವರ್ಗ (Heaven) ಮತ್ತು ನರಕ (Hell). ಆಗ ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಶಿವನ ಶಕ್ತಿಗಳು ಸೇರಿ ದುರ್ಗಾ ದೇವಿಯಾಗಿ ಅವತರಿಸದರು ಎನ್ನಲಾಗಿದೆ. 

Tap to resize

ಇದರ ಪರಿಣಾಮವಾಗಿ ಮಹಿಷಾಸುರ ಮತ್ತು ದೇವಿ ದುರ್ಗಾ ನಡುವೆ 15 ದಿನಗಳ ಕಾಲ ನಡೆದ ಯುದ್ಧದ ಸಮಯದಲ್ಲಿ ರಾಕ್ಷಸ ರಾಜನು ದೇವಿಯನ್ನು ದಾರಿ ತಪ್ಪಿಸಲು ತನ್ನ ಆಕಾರವನ್ನು ಬದಲಾಯಿಸಿದನು. ಆತ ಮಹಿಷನಾಗಿ ಬದಲಾದನು ಎನ್ನಲಾಗಿದೆ. ಯುದ್ದದಲ್ಲಿ (War) ದುರ್ಗಾ ದೇವಿಯು ತನ್ನ ತ್ರಿಶೂಲದಿಂದ ಅವನನ್ನು ಕೊಲ್ಲುತ್ತಾಳೆ. ಮಹಾಲಯದ ದಿನ ಮಹಿಷಾಸುರನನ್ನು ಕೊಲ್ಲಲಾಯಿತು.

ಹಬ್ಬದ ಮಹತ್ವ ಮತ್ತು ಆಚರಣೆ
ದೇವಿಯರಾದ ಶೈಲಪುತ್ರಿ (ದಿನ 1), ಬ್ರಹ್ಮಚಾರಿನಿ (ದಿನ 2), ಚಂದ್ರಘಂಟಾ (ದಿನ 3), ಕೂಷ್ಮಾಂಡ (ದಿನ 4), ಸ್ಕಂದಮಾತಾ (ದಿನ 5), ಕಾತ್ಯಾಯನಿ (ದಿನ 6), ಕಾಲರಾತ್ರಿ (ದಿನ 7), ಮಹಾಗೌರಿ (ದಿನ 8) ಮತ್ತು ಸಿದ್ಧಿದಾತ್ರಿ (ದಿನ 9) ಅವರನ್ನು ಒಂಬತ್ತು ದಿನಗಳ (Nine days)ಅವಧಿಯಲ್ಲಿ ಗೌರವಿಸಲಾಗುತ್ತದೆ.

ಈ ಸಂದರ್ಭದಲ್ಲಿ, ಸಂಬಂಧಿಕರು ಮತ್ತು ಸ್ನೇಹಿತರು ತಮ್ಮ ಸಂಪ್ರದಾಯಗಳನ್ನು ಜೊತೆಯಾಗಿ ಆಚರಿಸಲು ಒಟ್ಟುಗೂಡುತ್ತಾರೆ. ಹಬ್ಬದ ಸಮಯದಲ್ಲಿ, ದಾಂಡಿಯಾವನ್ನು ಗುಜರಾತ್ ನಾದ್ಯಂತ (Dandiya in Gujrat) ಆಡಲಾಗುತ್ತದೆ, ಮತ್ತು ಹೆಚ್ಚಿನ ಜನರು ಉಪವಾಸ ಮಾಡುತ್ತಾರೆ ಮತ್ತು ಪ್ರಾರ್ಥನೆಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ.
 

ಮೈಸೂರು : ಮೈಸೂರಿನ ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವು ಕರುನಾಡ ಹಬ್ಬ (Sate Festival). ಕರ್ನಾಟಕದ ಪ್ರಮುಖ ಹಬ್ಬವಾಗಿದೆ. ನವರಾತ್ರಿಯ ಆ ವೈಭವ, ವಿಜಯ ದಶಮಿ (Vijaya Dashami), ಜಂಬೂ ಸವಾರಿಯನ್ನು (Jambu Savari), ನವರಾತ್ರಿಯ ಅಲಂಕಾರಗೊಳ್ಳುವ ಮೈಸೂರು ಅರಮನೆ (Mysore Palace) , ಮೈಸೂರು ನಗರ, ಶೃಂಗಾರಗೊಂಡ ನಗರ, ವಿವಿಧ ಕಾರ್ಯಕ್ರಮ, ಸಾಂಸ್ಕೃತಿಕ ವೈಭವ ನೋಡಲು ದೇಶ, ವಿದೇಶಗಳಿಂದ ಜನ ಸಾಗರವೇ ಹರಿದು ಬರುತ್ತದೆ. 

ಕೋಲ್ಕತ್ತಾದ ದುರ್ಗಾ ಪೂಜೆ (Durga Puja in Kolkata)  ನವರಾತ್ರಿ ಉತ್ಸವವನ್ನು ಪಶ್ಚಿಮ ಬಂಗಾಳದಲ್ಲಿ ಅದರಲ್ಲೂ ವಿಶೇಷವಾಗಿ ಕೊಲ್ಕತ್ತಾದಲ್ಲಿ ದುರ್ಗಾ ಪೂಜಾ ಎಂಬ ಹೆಸರಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಇದರ ಖ್ಯಾತಿ ಎಷ್ಟಿದೆ ಎಂದರೆ ಭಾರತದಲ್ಲಿ ದುರ್ಗಾ ಪೂಜೆ ಅಥವಾ ನವರಾತ್ರಿ ಎಂದರೆ ಎಲ್ಲರೂ ಮೊದಲಿಗೆ ಕೊಲ್ಕತ್ತಾ ಎಂತಲೆ ಹೇಳುತ್ತಾರೆ. 

ರಾಮ್ ಲೀಲಾವನ್ನು (Ram Leela) ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ, ಮತ್ತು ಒಂಬತ್ತು ದಿನಗಳ ಉತ್ಸವವು ದಸರಾದೊಂದಿಗೆ ಕೊನೆಗೊಳ್ಳುತ್ತದೆ, ಈ ಸಮಯದಲ್ಲಿ ರಾವಣನ ಹುಲ್ಲಿನ ಪ್ರತಿಕೃತಿಗಳನ್ನು ಸುಡಲಾಗುತ್ತದೆ, ಇದು ದುಷ್ಟರ ಮೇಲೆ ಸದ್ಗುಣದ ವಿಜಯವನ್ನು ಸಂಕೇತಿಸುತ್ತದೆ.

ರಾಮ ರಾವಣನ್ನು ಸಂಹರಿಸಿದ ದಿನ : 
ನವರಾತ್ರಿ ರಾಮಾಯಣಕ್ಕೂ ಒಂದು ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತವೆ. ರಾವಣನೆಂಬ ಬಲಶಾಲಿ ರಾಕ್ಷಸನನ್ನು ವಧೆ ಮಾಡಲು ರಾಮನು ಒಂಬತ್ತು ದಿನಗಳ ಕಾಲ ದುರ್ಗೆಯ ಪೂಜೆ ಮಾಡಿ ಆಕೆಯಿಂದ ಶಕ್ತಿ ಹಾಗೂ ಬಲ ಪಡೆದ ಎನ್ನಲಾಗುತ್ತದೆ. 

ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಇದರ ಬಳಿಕ ರಾಮ ವಧಿಸಿದ. ಒಂಬತ್ತು ದಿನ ಕಾಲ ನವರಾತ್ರಿ ಎಂದು ಕರೆಯಲಾಗುವುದು ಮತ್ತು ರಾಮನು ರಾವಣನನ್ನು ಅಂತಿಮ ದಿನ ವಧಿಸಿದ. ಈ ದಿನವನ್ನು ದಸರಾ (Dasara) ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ರಾವಣನಂತಹ ದುಷ್ಟ ರಾಕ್ಷಸನ ಮೇಲೆ ರಾಮನ ಗೆಲುವನ್ನು ತೋರಿಸುತ್ತದೆ ಎಂದು ಸಹ ಹೇಳಲಾಗುತ್ತದೆ. 
 

Latest Videos

click me!