ಶ್ರಾವಣದ ಮೊದಲ ಸೋಮವಾರ ಗಜಕೇಸರಿ ಯೋಗ, ಯಾವ ರಾಶಿಗೆ ಶುಭ?

First Published Jul 16, 2022, 4:53 PM IST

ಶ್ರಾವಣದ ಮೊದಲ ಸೋಮವಾರವು ಜುಲೈ 18, 2022 ರಂದು ಬರುತ್ತದೆ. ಈ ದಿನದಂದು, ಮೀನ ರಾಶಿಯಲ್ಲಿ ಬಹಳ ಮಂಗಳಕರವಾದ ಯೋಗವು ರೂಪುಗೊಳ್ಳುತ್ತಿದೆ, ಇದನ್ನು ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗ ಎಂದು ಕರೆಯಲಾಗುತ್ತೆ.ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಶ್ರಾವಣದ ಮೊದಲ ಸೋಮವಾರ ಈ ಯೋಗ ಮೀನ ರಾಶಿಯಲ್ಲಿ ಮೂಡುತ್ತಿದೆ. ವಿಶೇಷವೆಂದರೆ ಮೀನ ರಾಶಿಯ ಅಧಿಪತಿ ಗುರು. ಗುರು ಮೀನ ರಾಶಿಯಲ್ಲಿ ಮಾತ್ರ ಗೋಚರಿಸುತ್ತೆ. ಗುರುವನ್ನು ದೇವತೆಗಳ ಗುರು ಎಂದು ಪರಿಗಣಿಸಲಾಗುತ್ತೆ. ಅದಕ್ಕಾಗಿಯೇ ಇದನ್ನು ದೇವ ಗುರು ಎಂದು ಸಹ ಕರೆಯಲಾಗುತ್ತೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಮತ್ತು ಚಂದ್ರನ ಸಂಯೋಗ ಸಂಭವಿಸಿದಾಗ ಗಜಕೇಸರಿ ಯೋಗ ರೂಪುಗೊಳ್ಳುತ್ತೆ. ಗುರು ಮತ್ತು ಚಂದ್ರ ಪರಸ್ಪರ ಸಂಬಂಧ ರೂಪಿಸಿದರೆ, ಆಗ ಗಜಕೇಸರಿ ಯೋಗ(Gajakesari yoga) ರೂಪುಗೊಳ್ಳುತ್ತೆ. ಹೀಗಾದಾಗ ಯಾವ, ಯಾವ ರಾಶಿಯವರು ಪ್ರಯೋಜನ ಪಡೆಯಬಹುದು ನೋಡೋಣ.
 

ಕನ್ಯಾ(Virgo) - 
ನಿಮ್ಮದು ಕನ್ಯಾ ರಾಶಿಯಾಗಿದ್ದರೆ, ನಿಮ್ಮ ರಾಶಿಗೆ ಇದರಿಂದ ಶುಭವಾಗುತ್ತೆ. ಗಜಕೇಸರಿ ಯೋಗವು ಕನ್ಯಾ ರಾಶಿಯವರಿಗೆ ಆದಾಯ ಹೆಚ್ಚಿಸುತ್ತೆ. ಈ ಯೋಗದ ಪರಿಣಾಮವು ಜುಲೈ  20ರವರೆಗೆ ಇರುತ್ತೆ. ಇದರಿಂದ ನೀವು ಹಲವು ಶುಭ ಫಲಗಳನ್ನು ಪಡೆಯಬಹುದು.

ಗಜಕೇಸರಿ ಯೋಗದ ಸಮಯದಲ್ಲಿ, ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಬಹುದು. ಅದಕ್ಕಾಗಿ ನೀವು ಶಿವನನ್ನು ಪೂಜಿಸಿ ಮತ್ತು ಶಿವ (Lord Shiva) ಚಾಲೀಸಾವನ್ನು ಪ್ರತಿದಿನ ಪಠಿಸಿ. 

ಧನು ರಾಶಿ -

ಶ್ರಾವಣದ ಮೊದಲ ಸೋಮವಾರದಂದು, ಗಜಕೇಸರಿ ಯೋಗವು ಅನೇಕ ರೀತಿಯಲ್ಲಿ ಶುಭ ಫಲಗಳನ್ನು ತರುತ್ತೆ. ಈ ಸಮಯದಲ್ಲಿ ನೀವು ಹಿರಿಯ ಸ್ಥಾನದಲ್ಲಿ ಕುಳಿತಿರುವ ಜನರ ಸಹಕಾರವನ್ನು ಪಡೆಯುವ ಸಾಧ್ಯತೆ ಇದೆ. ಆಫೀಸ್ನಲ್ಲಿ(Office) ಬಾಸ್ ಮೆಚ್ಚುಗೆಯನ್ನು ಪಡೆಯುವ ಸಾಧ್ಯತೆ ಕೂಡ ಹೆಚ್ಚಾಗಿದೆ.

ಧನು ರಾಶಿಯವರು ಕಟ್ಟಡ, ವಾಹನ (Vehicle) ಇತ್ಯಾದಿಗಳನ್ನು ಖರೀದಿಸಲು ಯೋಜಿಸಬಹುದು. ನೀವು ಹೊಸ ಕಾರ್ಯವನ್ನು ಸಹ ಪ್ರಾರಂಭಿಸಬಹುದು. ಧನು ರಾಶಿಯ ಅಧಿಪತಿಯು ಗುರು. ಆದ್ದರಿಂದ, ಶಿಕ್ಷಣ, ಆಡಳಿತ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಶುಭ ಫಲಗಳು ಇರುತ್ತವೆ.

ಮೀನ ರಾಶಿ-

ಈ ದಿನವು ಮೀನ ರಾಶಿಯವರಿಗೆ ಅತ್ಯಂತ ಅದೃಷ್ಟಶಾಲಿ(Lucky). ಮೀನ ರಾಶಿಯಲ್ಲಿಯೇ ಗಜಕೇಸರಿ ಯೋಗ ಸಂಭವಿಸಲಿದೆ. ಗಜಕೇಸರಿ ಯೋಗದಿಂದಾಗಿ, ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. 

ಆದಾಯದಲ್ಲಿ(Income) ಹೆಚ್ಚಳ ಮತ್ತು ಬಡ್ತಿಯನ್ನು ಸಹ ಪಡೆಯಬಹುದು. ಈ ರಾಶಿಯವರ ಎದುರು ಶತ್ರುಗಳು ಸೋಲುತ್ತಾರೆ. ದೀರ್ಘಕಾಲದ ವಿವಾದ ಕೊನೆಗೊಳ್ಳಬಹುದು. ಆಡಳಿತಾತ್ಮಕ ಹುದ್ದೆಗಳಲ್ಲಿರುವ ಜನರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಶಿವನಿಗೆ ಅಭಿಷೇಕ ಮಾಡೋದರಿಂದ, ಇಷ್ಟಾರ್ಥಗಳು ಈಡೇರುತ್ತವೆ.
 

click me!