ಗುರು ಪೂರ್ಣಿಮಾದಂದು ಈ ವರ್ಷದ ಅತಿ ದೊಡ್ಡ ಸೂಪರ್‌ಮೂನ್ ದರ್ಶನ

First Published | Jul 12, 2022, 4:19 PM IST

ಜುಲೈ 13ರಂದು ಗುರು ಪೌರ್ಣಮಿ. ಈ ದಿನ ರಾತ್ರಿ ಈ ವರ್ಷದಲ್ಲಿ ಹಿಂದೆಂದೂ ಕಾಣದಷ್ಟು ದೊಡ್ಡದಾಗಿ ಚಂದ್ರ ಗೋಚರಿಸಲಿದ್ದಾನೆ. ಚಂದ್ರನ ಈ ಸೂಪರ್‌ಮೂನ್ ಅವತಾರಕ್ಕೆ ಕಾರಣವೇನು?

ವರ್ಷದಲ್ಲಿ ಎರಡರಿಂದ ನಾಲ್ಕು ಬಾರಿ ಸೂಪರ್‌ಮೂನ್ ನೋಡುವ ಅವಕಾಶ ಆಕಾಶಕಾಯ ವೀಕ್ಷಕರಿಗೆ ಸಿಗುತ್ತದೆ. ಕಳೆದ ತಿಂಗಳಷ್ಟೇ ಸ್ಟ್ರಾಬೆರಿ ಸೂಪರ್‌‍ಮೂನ್ ನೋಡಿ ಚಕಿತರಾಗಿದ್ದೆವು. ಈ ತಿಂಗಳು ಗುರು ಪೂರ್ಣಿಮೆಯಂದು ಈ ವರ್ಷದ ಅತೀ ದೊಡ್ಡ ಚಂದ್ರನ ದರ್ಶನ ಮಾಡಬಹುದಾಗಿದೆ. ಹೌದು, ಈ ವರ್ಷದ ಅತಿ ದೊಡ್ಡ ಸೂಪರ್‌ಮೂನ್ ಜುಲೈ 13ರಂದು ಕಾಣಿಸುತ್ತಿದೆ. ಈ ಚಂದ್ರ ದೊಡ್ಡದಾಗಿ ಕಿತ್ತಳೆ ಬಣ್ಣಲ್ಲಿ ಕಂಗೊಳಿಸುವುದನ್ನು ವಿಶ್ವದ ಅನೇಕ ಭಾಗಗಳಿಂದ ನೋಡಿ ಕಣ್ತುಂಬಿಕೊಳ್ಳಬಹುದು. ಇಷ್ಟಕ್ಕೂ ಸೂಪರ್‌‍ಮೂನ್ ಎಂದರೇನು ಗೊತ್ತಾ?

'ಸೂಪರ್‌ಮೂನ್' ಎಂಬ ಪದವನ್ನು ರಿಚರ್ಡ್ ನೊಲ್ಲೆ ಎಂಬ ವಿಜ್ಞಾನಿ 1979 ರಲ್ಲಿ ಸೃಷ್ಟಿಸಿದರು. ಈ ವ್ಯಾಖ್ಯಾನವನ್ನು ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ NASA ಅಳವಡಿಸಿಕೊಂಡಿದೆ.ಚಂದ್ರ ಮತ್ತು ಭೂಮಿಯ ನಡುವಿನ ಸರಾಸರಿ ದೂರ 3 ಲಕ್ಷ ದ 84 ಸಾವಿರ ಕಿಮೀ. ಆದರೆ ಈ ಹುಣ್ಣಿಮೆಗೆ ಚಂದ್ರನು ಭೂಮಿಯಿಂದ ಕೇವಲ 3,57,264 ಕಿಲೋಮೀಟರ್ ದೂರದಲ್ಲಿರಲಿದ್ದಾನೆ. ಇಷ್ಟು ಹತ್ತಿರ ಚಂದ್ರ ಬಂದಾಗ ಆತ ಸಾಮಾನ್ಯ ಹುಣ್ಣಿಮೆಯ ಸಮಯಕ್ಕಿಂತಾ ಶೇ.15ರಷ್ಟು ದೊಡ್ಡದಾಗಿಯೂ, ಪ್ರಕಾಶಮಾನನಾಗಿಯೂ ಕಾಣಿಸುತ್ತಾನೆ. ಇದನ್ನೇ ಸೂಪರ್‌ಮೂನ್ ಎನ್ನುವುದು.

Tap to resize

ಚಂದ್ರನು ಭೂಮಿಗೆ ಪ್ರತಿ ಹುಣ್ಣಿಮೆಯಂದು ಹೆಚ್ಚು ಸಮೀಪಕ್ಕೆ ಬರುತ್ತಾನೆ. ಸೂಪರ್‌ಮೂನ್ ದಿನಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಹತ್ತಿರ ಬರುತ್ತಾನೆ. 
ಸುಮಾರು ಎರಡರಿಂದ ಮೂರು ದಿನಗಳ ಕಾಲ ಈ ಸೂಪರ್‌ಮೂನ್ ವೀಕ್ಷಣೆ ಮಾಡಬಹುದಾಗಿದೆ. ಭಾರತೀಯ ಕಾಲಮಾನದಲ್ಲಿ ಬುಧವಾರ ಮಧ್ಯರಾತ್ರಿ ಪರಿಪೂರ್ಣ ಸೂಪರ್ ಮೂನ್ ದರ್ಶನ ಆಗುತ್ತದೆ. ಈ ಬಾರಿಯ ಸೂಪರ್‌ಮೂನನ್ನು ಬಕ್ ಮೂನ್ ಎಂದು ಕರೆಯಲಾಗುತ್ತದೆ. 

ಬಕ್ ಮೂನ್ ಎನ್ನುವುದೇಕೆ?
ಈ ಬಾರಿಯ ಸೂಪರ್‌ಮೂನನ್ನು ಬಕ್ ಮೂನ್ ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ ಬಕ್ ಎಂದರೆ ಗಂಡು ಜಿಂಕೆ. ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ, ಜಿಂಕೆ ಕೊಂಬುಗಳು ಈ ಅವಧಿಯಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ ಎಂಬ ಕಾರಣಕ್ಕೆ ದೊಡ್ಡದಾಗಿ ಬೆಳೆದ ಚಂದ್ರನಿಗೆ ಸ್ಥಳೀಯ ಅಮೆರಿಕನ್ನರು ಇದೇ ನಾಮಕರಣ ಮಾಡಿದ್ದಾರೆ. ಬೇಸಿಗೆಯ ಆರಂಭದಲ್ಲಿ ಆಗಾಗ್ಗೆ ಗುಡುಗು ಸಹಿತ ಮಳೆ ಬೀಳುವ ಕಾರಣ ಅವರು ಇದನ್ನು ಥಂಡರ್ ಮೂನ್ ಎಂದೂ ಕರೆಯುತ್ತಾರೆ. ಇದಲ್ಲದೆ, ಮೀಡ್ ಮೂನ್, ಹೇ ಮೂನ್ ಎಂದೂ ಕರೆಯಲಾಗುತ್ತದೆ. 

ಪರಿಣಾಮಗಳು
ಸಾಮಾನ್ಯವಾಗಿ ಹುಣ್ಣಿಮೆಯಂದು ಸಮುದ್ರದ ಏರಿಳಿತಗಳು ಹೆಚ್ಚು. ಇನ್ನು ಸೂಪರ್‌ಮೂನ್‌ನಿಂದಾಗಿ ಹೆಚ್ಚಿನ ಮತ್ತು ಕಡಿಮೆ ಸಮುದ್ರದ ಉಬ್ಬರವಿಳಿತಗಳನ್ನು ಕಾಣಬಹುದು. ಈ ಸಮಯದಲ್ಲಿ ಸಮುದ್ರದಲ್ಲಿ ಬಿರುಗಾಳಿಗಳು ಉಲ್ಬಣಗೊಳ್ಳುವ ಕರಾವಳಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಖಗೋಳಶಾಸ್ತ್ರಜ್ಞರು ನಿರೀಕ್ಷಿಸುತ್ತಾರೆ.

Latest Videos

click me!