ಮಲಗಿದಾಗ ಕನಸುಗಳು ಬೀಳುವುದು ಸಾಮಾನ್ಯ. ಹೀಗೆ ಕನಸಿನಲ್ಲಿ ಅರ್ಥವಿರುವುದು, ಇಲ್ಲದ್ದು ಸಾವಿರಾರು ಕಾಣಿಸುತ್ತಿರುತ್ತದೆ. ಆದರೆ, ಕೆಲ ಕನಸುಗಳು ಮಾತ್ರ ನೆನಪಿನಲ್ಲುಳಿಯುತ್ತವೆ. ಅವು ಸಾಮಾನ್ಯ ಕನಸುಗಳಿಗಿಂತ ವಿಭಿನ್ನವಾಗಿ ಕಾಣಿಸುತ್ತವೆ. ಮತ್ತೆ ಕೆಲ ಕನಸುಗಳು ಪದೇ ಪದೆ ಬಿದ್ದು ಅಚ್ಚರಿ ಮೂಡಿಸುತ್ತವೆ. ಇನ್ನೂ ಕೆಲ ಕನಸುಗಳು ದಿಗಿಲಾಗಿಸಿ ಮೈ ಬೆವರಿಸಿ ಎಬ್ಬಿಸುತ್ತವೆ.. ಹೀಗೆ ವಿಶೇಷವಾಗಿ ಕಾಣುವಂಥ ಕನಸುಗಳು ಸುಮ್ಮನೆ ಬರುವುದಿಲ್ಲ, ಅವು ನಮ್ಮ ಮುಂಬರುವ ಸಮಯದ ಬಗ್ಗೆ ಸುಳಿವು ನೀಡುತ್ತವೆ ಎನ್ನುತ್ತದೆ ಜ್ಯೋತಿಷ್ಯ. ಕನಸುಗಳು ಒಳ್ಳೆಯ ಅಥವಾ ಕೆಟ್ಟ ಅರ್ಥಗಳನ್ನು ಹೊಂದಿರಬಹುದು. ಇಂದು ನಾವು ಆ ಮಂಗಳಕರ ಕನಸುಗಳ ಬಗ್ಗೆ ಮಾತನಾಡೋಣ. ಯಾವ ರೀತಿಯ ಕನಸು ಬಿದ್ದರೆ ಶೀಘ್ರದಲ್ಲೇ ಹಣ ಬರುತ್ತದೆ ಎಂಬ ಸೂಚನೆ ಎಂದು ತಿಳಿಯೋಣ.