ಈ ಪರಿಹಾರವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ: ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ಪ್ರತಿದಿನ ಯಾವುದೇ ಸಮಸ್ಯೆ ಇದ್ದರೆ, ಗುರು ಪುಷ್ಯ ನಕ್ಷತ್ರದ ಒಂದು ದಿನ ಮೊದಲು, ಶ್ರೀಗಂಧದ ಮರದ ಬೇರಿಗೆ ಕುಂಕುಮ (Kumkum), ಹಳದಿ ಅಕ್ಕಿ, ನೀರನ್ನು ಅರ್ಪಿಸಿ ಮತ್ತು ಧೂಪ- ದೀಪವನ್ನು ಬೆಳಗಿಸಿ.. ಎರಡನೇ ದಿನ ಅಂದರೆ ಗುರು ಪುಷ್ಯ ನಕ್ಷತ್ರದ ದಿನದಂದು, ಶ್ರೀಗಂಧದ ಮರದ ಸ್ವಲ್ಪ ಕಟ್ಟಿಗೆಯನ್ನು ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರದಲ್ಲಿ ನೇತುಹಾಕಿ. ಇದನ್ನು ಮಾಡೋದರಿಂದ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಮರಳಿ ಬರುತ್ತೆ ಮತ್ತು ಸಕಾರಾತ್ಮಕ ಶಕ್ತಿಯು ಪ್ರಸರಣಗೊಳ್ಳುತ್ತೆ.