Chanakya Niti : ನೀವು ಖುಷಿಯಾಗಿರಿ, ಬೇಜಾರಾಗಿರಿ, ಆದ್ರೆ ಈ ಕೆಲಸ ಅಂತೂ ಮಾಡ್ಲೇ ಬೇಡಿ…

Published : Apr 20, 2023, 06:17 PM IST

ಆಚಾರ್ಯ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಕೆಲವೊಂದು ವಿಷಯಗಳನ್ನು ತಿಳಿಸಿದ್ದಾರೆ. ಅದು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಚಾಣಕ್ಯ ತಿಳಿಸಿರುವಂತೆ ನಮ್ಮ ಜೀವನದಲ್ಲಿ ಒಳ್ಳೆಯದಾಗಲಿ ಅಥವಾ ಕೆಟ್ಟದೇ ಆಗಲಿ, ಯಾವತ್ತೂ ಈ ಮೂರು ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ. ಅದು ಯಾವುದು ತಿಳಿಯೋಣ. 

PREV
18
Chanakya Niti : ನೀವು ಖುಷಿಯಾಗಿರಿ, ಬೇಜಾರಾಗಿರಿ, ಆದ್ರೆ ಈ ಕೆಲಸ ಅಂತೂ ಮಾಡ್ಲೇ ಬೇಡಿ…

ಆಚಾರ್ಯ ಚಾಣಕ್ಯ (Acharya Chanakya) ಜನಪ್ರಿಯ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ತಂತ್ರಜ್ಞ. ಅವರು ಅನೇಕ ವಿಷಯಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ್ದಾರೆ. ಅವರ ಅನುಭವಗಳ ಆಧಾರದ ಮೇಲೆ ಚಾಣಕ್ಯ ನೀತಿಯನ್ನು ಮಾಡಿದ್ದಾರೆ. ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಇಂತಹ ಅನೇಕ ವಿಷಯ ಮತ್ತು ನೀತಿಗಳನ್ನು ಉಲ್ಲೇಖಿಸಿದ್ದಾನೆ.

28

ಜೀವನದ(Life) ಕೆಲವು ನಿಯಮಗಳನ್ನು ಸಹ ಬಹಿರಂಗವಾಗಿ ಹೇಳಲಾಗಿದೆ. ಆಚಾರ್ಯ ಚಾಣಕ್ಯ ಹೇಳುವಂತೆ ವ್ಯಕ್ತಿಯ ಜೀವನದಲ್ಲಿ ಕೆಲವೊಮ್ಮೆ ಸಂತೋಷ ಮತ್ತು ಕೆಲವೊಮ್ಮೆ ದುಃಖವಿರುತ್ತೆ. ಹಾಗಾಗಿ, ಸಂತೋಷವಾಗಿರುವಾಗ ಅದನ್ನು ಹೆಚ್ಚು ವ್ಯಕ್ತಪಡಿಸಬೇಡಿ ಮತ್ತು  ದುಃಖಿತರಾಗಿದ್ದರೂ ಸಹ ಯಾವುದೇ ಭರವಸೆಯನ್ನು ನೀಡಬೇಡಿ.
 

38

ಏಕೆಂದರೆ ಜೀವನದಲ್ಲಿ ಸಂತೋಷ ಮತ್ತು ದುಃಖ (Sadness) ಬರುತ್ತೆ, ಹೋಗುತ್ತೆ, ಆದರೆ ಈ ಸಮಯದಲ್ಲಿ ಮಾಡಿದ ಕೆಲವು ಕೆಲಸಗಳು ಜೀವನದಲ್ಲಿ ಬಹಳ ಆಳವಾದ ಪರಿಣಾಮ ಬೀರುತ್ತವೆ. ಹಾಗಾದರೆ ನಮ್ಮ ಜೀವನದಲ್ಲಿ ಒಳ್ಳೆಯದು ಅಥವಾ ಕೆಟ್ಟ ಸಮಯ ಏನೇ ಬರಲಿ, ಯಾವ ಕೆಲಸವನ್ನು  ಮಾಡಲೇಬಾರದು ಅನ್ನೋದನ್ನು ನೋಡೋಣ. 
 

48

ಸಂತೋಷವಾಗಿರುವಾಗ(Happiness) ಯಾವುದೇ ಭರವಸೆಗಳನ್ನು ನೀಡಬೇಡಿ -
ಆಚಾರ್ಯ ಚಾಣಕ್ಯನು ಹೇಳುವಂತೆ ಒಬ್ಬ ವ್ಯಕ್ತಿಯ ಜೀವನದಲ್ಲಿ  ಸಂತೋಷಕ್ಕೆ ಅವಕಾಶವಿದ್ದರೆ, ಅದನ್ನು ಹೆಚ್ಚು ವ್ಯಕ್ತಪಡಿಸಬಾರದು. ಸಂತೋಷವಾಗಿರುವಾಗ, ನೀವು ಯಾವುದೇ  ವಾಗ್ದಾನವನ್ನು ಸಹ ನೀಡಬೇಡ. ಇದರಿಂದ ಮುಂದೆ ನೀವೇ ನೋವು ಅನುಭವಿಸಬೇಕಾಗಿ ಬರಬಹುದು.
 

58

ಸಂತೋಷದ ಸಂದರ್ಭದಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಯಾಕಂದ್ರೆ ಕೆಲವೊಮ್ಮೆ ಸಂತೋಷವು ಅಂತಹ ಭರವಸೆಯನ್ನು, ವಾಗ್ದಾನವನ್ನು ನೀಡಲು ಪ್ರೇರೇಪಿಸುತ್ತೆ, ಇದರಿಂದಾಗಿ  ನಂತರ ನಷ್ಟವನ್ನು(Loss) ಅನುಭವಿಸಬೇಕಾಗುತ್ತೆ. ಆದುದರಿಂದಾ ಭರವಸೆ ನೀಡುವಾಗ ಯೋಚನೆ ಮಾಡಿ ಭರವಸೆ ನೀಡಿ. 
 

68

ದುಃಖದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳೋದನ್ನು ತಪ್ಪಿಸಿ - 
ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ದುಃಖ ಅಥವಾ ಕೆಟ್ಟ ಸಮಯವಿದ್ದರೆ, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಕೆಟ್ಟ ಸಮಯ ಬಂದಾಗ, ವ್ಯಕ್ತಿಯು ಯೋಚಿಸುವ ಶಕ್ತಿಯನ್ನು(Thinking power) ಕಳೆದುಕೊಳ್ಳುತ್ತಾನೆ. ಹಾಗಾಗಿ, ಈ ಸಮಯದಲ್ಲಿ ತೆಗೆದುಕೊಂಡ ನಿರ್ಧಾರವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ದುಃಖದ ಸಮಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿರೋದು ಉತ್ತಮ.

78

ಕೋಪದಲ್ಲಿ(Angry ಉತ್ತರ ನೀಡೋದು 
ಒಬ್ಬ ವ್ಯಕ್ತಿ ಕೋಪಗೊಂಡಾಗ, ಅವನು ಸರಿ ಮತ್ತು ತಪ್ಪುಗಳ ಪ್ರಜ್ಞೆ ಕಳೆದುಕೊಳ್ಳುತ್ತಾನೆ ಮತ್ತು ಅಂತಹ ಸಂದರ್ಭದಲ್ಲಿ ಕೆಲವು ವಿಷಯಗಳು ಅವನ ನಾಲಿಗೆಯಿಂದ ಹೊರಬರುತ್ತವೆ, ಅದು ಜೀವನದುದ್ದಕ್ಕೂ ಸಂಬಂಧದಲ್ಲಿ ಬಿರುಕು ಉಂಟುಮಾಡುತ್ತೆ.

88

ಜೀವನದ ಯಾವುದೇ ಸಂದರ್ಭದಲ್ಲಿ ಕೋಪಗೊಂಡಾಗ, ವ್ಯಕ್ತಿ ತನ್ನ ಬಾಯಿಯನ್ನು ಲಾಕ್ (Lock) ಮಾಡಬೇಕು. ಉತ್ತಮ ಪರಿಹಾರವೆಂದರೆ ಕೋಪದ ಸಂದರ್ಭದಲ್ಲಿ ಪ್ರತಿಕ್ರಿಯಿಸದಿರೋದು ಮತ್ತು ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ನೀವು ಶಾಂತವಾಗಿಡಲು ಪ್ರಯತ್ನಿಸಿ. ಇದರಿಂದ ಜೀವನ ಉತ್ತಮ ರೀತಿಯಲ್ಲಿ ಸಾಗುತ್ತೆ. 

Read more Photos on
click me!

Recommended Stories