ವರ್ಷದ ಮೊದಲ ಸೂರ್ಯಗ್ರಹಣದಂದು ಈ ಕೆಲಸ ಮಾಡಿದ್ರೆ ಸಾಲ ಭಾರ ಇಳಿಯುತ್ತೆ!

Published : Apr 19, 2023, 05:43 PM IST

ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ ತಿಂಗಳಲ್ಲಿ ಸಂಭವಿಸಲಿದೆ. ಹಾಗಾಗಿ, ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಮತ್ತು ಇತರ ಸಮಸ್ಯೆಗಳನ್ನು ತೊಡೆದುಹಾಕಲು  ಈ ದಿನದಂದು ಕೆಲವು ಜ್ಯೋತಿಷ್ಯ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಅವುಗಳ ಬಗ್ಗೆ ತಿಳಿಯೋಣ.  

PREV
18
ವರ್ಷದ ಮೊದಲ ಸೂರ್ಯಗ್ರಹಣದಂದು ಈ ಕೆಲಸ ಮಾಡಿದ್ರೆ ಸಾಲ ಭಾರ ಇಳಿಯುತ್ತೆ!

ಹಿಂದೂ ಧರ್ಮದಲ್ಲಿ ಗ್ರಹಣಕ್ಕೆ ಹೆಚ್ಚಿನ ಮಹತ್ವವಿದೆ.ಆದ್ದರಿಂದ, ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ವಿಶೇಷ ಸ್ಥಾನ ಹೊಂದಿದೆ. ಗ್ರಹಣ ದಿನದಂದು ತೆಗೆದುಕೊಳ್ಳುವ ಕ್ರಮಗಳು ಎಂದಿಗೂ ವಿಫಲವಾಗೋದಿಲ್ಲ. 2023 ರಲ್ಲಿ, ಮೊದಲ ಸೂರ್ಯಗ್ರಹಣವು (Solar eclipse) ಏಪ್ರಿಲ್ ತಿಂಗಳಲ್ಲಿ ಸಂಭವಿಸಲಿದೆ. ಆ ದಿನ ಏನು ಮಾಡಬೇಕು ಅನ್ನೋದನ್ನು ತಿಳಿಯೋಣ. 

28

ಒಂದೆಡೆ, ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರ ಗುರುವಾರ ಸಂಭವಿಸಿದರೆ, ಮತ್ತೊಂದೆಡೆ, ಕೇವಲ 15 ದಿನಗಳ ನಂತರ ಚಂದ್ರ ಗ್ರಹಣ (Lunar Eclipse) ಸಂಭವಿಸುವ ಸಾಧ್ಯತೆಯಿದೆ. ಜ್ಯೋತಿಷ್ಯರು ಗ್ರಹಣ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಕೆಲವು ವಿಶೇಷ ಕ್ರಮಗಳ ಬಗ್ಗೆ ಏನು ಹೇಳುತ್ತಾರೆ ಎಂದು ತಿಳಿದುಕೊಳ್ಳೋಣ. 

38

ಸೂರ್ಯಗ್ರಹಣ 2023  ಸಾಲ ಪರಿಹಾರಕ್ಕಾಗಿ 
ನೀವು ಸಾಲದಿಂದ ತೊಂದರೆಗೀಡಾಗಿದ್ದರೆ ಮತ್ತು ಲಕ್ಷಾಂತರ ಪ್ರಯತ್ನಗಳ ನಂತರವೂ ಸಾಲದ ಹೊರೆಯನ್ನು ತೊಡೆದುಹಾಕಲು ಸಾಧ್ಯವಾಗದಿದ್ದರೆ, ಸೂರ್ಯಗ್ರಹಣಕ್ಕೆ ಒಂದು ದಿನ ಮುಂಚಿತವಾಗಿ ಲಾಕ್(Lock) ಖರೀದಿಸಿ.

48

ರಾತ್ರಿಯಿಡೀ ಚಂದ್ರನ ಬೆಳಕು ಬೀಳುವ ಸ್ಥಳದಲ್ಲಿ ಬೀಗ ಇರಿಸಿ. ಈಗ ಸೂರ್ಯಗ್ರಹಣದ ದಿನದಂದು, ಆ ಬೀಗವನ್ನು ದೇವಾಲಯಕ್ಕೆ(Temple) ದಾನ ಮಾಡಿ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಇದನ್ನು ಮಾಡೋದರಿಂದ, ಸಾಲದ ಹೊರೆ ಕಡಿಮೆಯಾಗುತ್ತೆ ಮತ್ತು ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಳ್ಳುತ್ತೆ ಎಂದು ವಿವರಿಸಲಾಗಿದೆ.   

58

ಪ್ರಗತಿಗಾಗಿ 
ನೀವು ಸಮರ್ಥರಾಗಿದ್ದರೂ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗದಿದ್ದರೆ, ಸಿಹಿ ಅಕ್ಕಿಯ ಈ ಪರಿಹಾರವು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತೆ.
ನೀವು ಮಾಡಬೇಕಾಗಿರೋದು ಸಿಹಿ ಅನ್ನವನ್ನು ತಯಾರಿಸಿ ಗ್ರಹಣ ಅವಧಿ ಮುಗಿದ ಕೂಡಲೇ ಕಾಗೆಗೆ(Crow) ಆಹಾರ ನೀಡುವುದು. ಇದನ್ನು ಮಾಡೋದರಿಂದ, ಪ್ರಗತಿಯ ಅಡೆತಡೆಯನ್ನು ತೆಗೆದುಹಾಕಲಾಗುತ್ತೆ.

68

ಪ್ರಗತಿಯಲ್ಲಿನ ಅಡಚಣೆಯು ರಾಹುವಿನ ದುಷ್ಪರಿಣಾಮಗಳಿಂದ ಉಂಟಾಗುತ್ತದೆ. ಹಾಗಾಗಿ ಗ್ರಹಣ ಮುಗಿದ ಬಳಿಕ ಕಾಗೆಗಳಿಗೆ ಆಹಾರ (Food) ನೀಡೋದರಿಂದ ರಾಹುವಿನ ಕೆಟ್ಟ ಪರಿಣಾಮ ಕಡಿಮೆಯಾಗುತ್ತೆ, ಇದು ಪ್ರಗತಿಗೆ ದಾರಿ ತೆರೆಯುತ್ತೆ. ಇದನ್ನ ತಪ್ಪದೆ ಮಾಡಿ. 

78

ಹಣ ಪಡೆಯಲು 
ಸೂರ್ಯಗ್ರಹಣದ ದಿನದಂದು, ಹಸಿರು ಏಲಕ್ಕಿ (Green Cardamom) ಅಥವಾ ಲವಂಗದ ತುಂಡನ್ನು ಕೆಂಪು ಬಟ್ಟೆಯಲ್ಲಿ ಇರಿಸಿ ಮತ್ತು ಆ ಬಟ್ಟೆಯಲ್ಲಿ ಐದು ಗಂಟುಗಳನ್ನು ಕಟ್ಟಿ ಮನೆಯ ಸುರಕ್ಷಿತ ಸ್ಥಳದಲ್ಲಿ ಇರಿಸಿ. ಹೀಗೆ ಮಾಡೋದರಿಂದ, ಮನೆಯಲ್ಲಿನ ಹಣದ ಹರಿವನ್ನು ತಡೆಯುವ ದೋಷಗಳನ್ನು ತೆಗೆದುಹಾಕಲಾಗುತ್ತೆ ಮತ್ತು ಆರ್ಥಿಕ ಪರಿಸ್ಥಿತಿ ವೇಗವಾಗಿ ಬದಲಾಗುತ್ತೆ. ಹಣ ಉಳಿಯಲು ಪ್ರಾರಂಭಿಸುತ್ತೆ.

88

ಈ ಪರಿಹಾರದಿಂದ, ತಾಯಿ ಲಕ್ಷ್ಮಿಯ(Goddess Lakshmi) ಕೃಪೆ ಯಾವಾಗಲೂ ಮನೆಯಲ್ಲಿ ಉಳಿಯುತ್ತೆ ಮತ್ತು ಮನೆ ಶಾಶ್ವತವಾಗಿ ಸಂಪತ್ತು ಮತ್ತು ಧಾನ್ಯಗಳಿಂದ ತುಂಬಿರಲಿದೆ. ಇವು ವರ್ಷದ ಮೊದಲ ಸೂರ್ಯ ಗ್ರಹಣದಲ್ಲಿ ಮಾಡೋದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾದ ಕೆಲವು ಪರಿಹಾರಗಳು.
 

Read more Photos on
click me!

Recommended Stories