ಅಂಗೈಯ ಮೇಲೆ ಈ ಗುರುತು ಇದ್ದೋರು ಮುಟ್ಟಿದ ಕೆಲಸಗಳೆಲ್ಲಾ ಯಶಸ್ವಿ

Published : Jun 09, 2022, 04:46 PM IST

ಮನುಷ್ಯನ ಭವಿಷ್ಯವು ಅವನ ಜಾತಕದಲ್ಲಿರುವ ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಕೈ ರೇಖೆಗಳು ಅವನ ಹಣೆಬರಹವನ್ನು ನಿರ್ಧರಿಸುತ್ತವೆ. ಅದೃಷ್ಟದ ರೇಖೆ ಮತ್ತು ಕೈಯಲ್ಲಿರುವ ಸೂರ್ಯ ರೇಖೆ ಅದೃಷ್ಟದ ಸಂಕೇತ ಎನ್ನಲಾಗುತ್ತೆ. ಒಬ್ಬ ವ್ಯಕ್ತಿಯ ಕೈಯಲ್ಲಿರುವ ಸೂರ್ಯ ರೇಖೆಯು ಉತ್ತಮವಾಗಿದ್ದರೆ, ಆಗ ವ್ಯಕ್ತಿಯು ಪ್ರಗತಿ ಹೊಂದುತ್ತಾನೆ ಎಂದರ್ಥ.

PREV
111
ಅಂಗೈಯ ಮೇಲೆ ಈ ಗುರುತು ಇದ್ದೋರು ಮುಟ್ಟಿದ ಕೆಲಸಗಳೆಲ್ಲಾ ಯಶಸ್ವಿ

ಒಬ್ಬ ವಯಕ್ತಿಯ ಕೈಯಲ್ಲಿ ಉತ್ತಮ ಸೂರ್ಯರೇಖೆ(Surya rekha) ಹೊಂದಿದ್ದರೆ, ಆ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿಯ ಯಾವುದೇ ಕೊರತೆ ಉಂಟಾಗೋದಿಲ್ಲ. ತನ್ನ ಕೈಯಲ್ಲಿ ಉತ್ತಮ ಸೂರ್ಯ ರೇಖೆ ಹೊಂದಿರುವ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿಯಾಗುತ್ತಾನೆ. ಆದರೆ ಕೈಯಲ್ಲಿರುವ ಸೂರ್ಯ ರೇಖೆ ಎಲ್ಲಿಂದ ಶುರು ಆಗುತ್ತದೆ ಎಂದು ನೋಡಬೇಕು. ಸೂರ್ಯ ರೇಖೆಯ ಉಗಮವು ಜೀವನದ ಪ್ರಗತಿ ಮತ್ತು ಸಮೃದ್ಧಿಯನ್ನು ನಿರ್ಧರಿಸುತ್ತದೆ.

211

ಹಸ್ತರೇಖ(Palm) ವಿಜ್ಞಾನದ ಪ್ರಕಾರ, ಸೂರ್ಯ ರೇಖೆಯು ಮಣಿಬಂಧದಿಂದ ಅಥವಾ ಅದರ ಬಳಿಯಿಂದ ಪ್ರಾರಂಭವಾಗಿ ವಿಧಿ ರೇಖೆಯನ್ನು ಸಮೀಪಿಸುತ್ತಿದ್ದರೆ ಮತ್ತು ಅದಕ್ಕೆ ಸಮಾನಾಂತರವಾಗಿ ಅದರ ಸ್ಥಳದ ಕಡೆಗೆ ಹೋಗುತ್ತಿದ್ದರೆ, ಅದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. 

311

ಈ ರೀತಿಯ ರೇಖೆಯನ್ನು ಹೊಂದಿರುವ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು(Success) ಪಡೆಯುತ್ತಾನೆ.  ಯಾರ ಕೈಯಲ್ಲಿ ಈ ವಿಶೇಷ ಗೆರೆ ಇರುವುದೋ ಅವರು ಗೌರವವೂ ಸೇರಿದಂತೆ ಸಂಪತ್ತನ್ನು ಪಡೆಯುತ್ತಾರೆ. ಯಾವುದು ಆ ರೇಖೆ ಅನ್ನೋದನ್ನು ತಿಳಿಯಿರಿ.   

411

ತಮ್ಮ ಕೈಯಲ್ಲಿ ಎಕ್ಸ್ ಮಾರ್ಕ್ ಹೊಂದಿರುವ ಜನರು ಯಾವಾಗಲೂ ಡಿಫರೆಂಟ್ ಆಗಿ ಏನನ್ನಾದರೂ ಮಾಡುವುದರಲ್ಲಿ ನಂಬುತ್ತಾರೆ. ಹಾಗಾಗಿ ಅಂತಹ ಜನರು ಕ್ರಿಯೇಟಿವ್(Creative) ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ. ಅವರು ಕಲಾವಿದರಾಗುತ್ತಾರೆ.

511

ಅಂಗೈಯಲ್ಲಿ ಅಂತಹ ಗುರುತು ಇದ್ದಾಗ ಒಬ್ಬ ವ್ಯಕ್ತಿಯು ಸಾಕಷ್ಟು ಪ್ರಭಾವಶಾಲಿಯಾಗಿರುತ್ತಾರೆ(Influencer). ಜನರು ಅವರ ವ್ಯಕ್ತಿತ್ವದಿಂದ ಆಕರ್ಷಿತರಾಗುತ್ತಾರೆ. ಅಂತಹ ಜನರು ಲಕ್ಷಾಂತರ ಜನರ ಗುಂಪಿನಲ್ಲಿಯೂ ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಲು ಸಮರ್ಥರಾಗಿರುತ್ತಾರೆ.

611

ತಮ್ಮ ಕೈಯಲ್ಲಿ X ನ ಗುರುತನ್ನು ಹೊಂದಿರುವವರು ತುಂಬಾ ಅದೃಷ್ಟವಂತರು(Lucky). ಅವರು ಜೀವನದಲ್ಲಿ ಎಲ್ಲವನ್ನೂ ಬಹಳ ಕಡಿಮೆ ಪ್ರಯತ್ನದಿಂದ ಪಡೆಯುತ್ತಾರೆ. ಅವರು ಸಾಕಷ್ಟು ಸಂಪತ್ತನ್ನು ಹೊಂದುತ್ತಾರೆ. ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎನ್ನಲಾಗಿದೆ. 

711

ಒಂದು ಅಧ್ಯಯನದ ಪ್ರಕಾರ,  ಕೈಯಲ್ಲಿ ಎಕ್ಸ್ ಮಾರ್ಕ್(X mark) ಹೊಂದಿರುವ ಜನರು ಯಾವುದೇ ಕೆಲಸವನ್ನು ಮುನ್ನಡೆಸುವಲ್ಲಿ ನಿಪುಣರಾಗಿರುತ್ತಾರೆ. ಅವರು ಬಹಳ ಯೋಚನೆ ಮಾಡಿ ಮಾತನಾಡುತ್ತಾರೆ. ಆದ್ದರಿಂದ ಅಂತಹ ಜನರು ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಾರೆ ಅನ್ನೋದರಲ್ಲಿ ಸಂಶಯವಿಲ್ಲ.

811

ಅಂತಹ ಜನರಿಗೆ ತಮ್ಮ ಟ್ಯಾಲೆಂಟ್ ಅನ್ನು(Talent) ತೋರಿಸುವುದು ತುಂಬಾ ಚೆನ್ನಾಗಿ ಗೊತ್ತು. ಇವರು ಇತರ ಜನರೊಂದಿಗೆ ಬೇಗನೆ ಬೆರೆತು ಮಾತನಾಡುತ್ತಾರೆ ಮತ್ತು ಕ್ಷಣಾರ್ಧದಲ್ಲಿ ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತಾರೆ. ಅಂತಹ ಜನರು ಸಮಾಜದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. 

911

ಕೈಯಲ್ಲಿ(Hand) ಎಕ್ಸ್ ಮಾರ್ಕ್ ಹೊಂದಿರುವವರು ಯಾವಾಗಲೂ ಜನರನ್ನು ಅಚ್ಚರಿಗೊಳಿಸಲು ಒಂದಲ್ಲ ಒಂದು ರೀತಿಯ ಕಾರ್ಯ ನಿರ್ವಹಿಸುತ್ತಾರೆ.. ಅವರು ಸತ್ತ ನಂತರವೂ, ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ.

1011

ಅಂಗೈಯಲ್ಲಿ ಎಕ್ಸ್ ಮಾರ್ಕ್ ಇದ್ದಾಗ, ವ್ಯಕ್ತಿಯು ಎಮೋಷನಲ್ ಆಗಿರುವುದರ ಜೊತೆಗೆ ತುಂಬಾ ಸಂವೇದನಾಶೀಲನಾಗಿರುತ್ತಾನೆ. ಅಂತಹ ಜನರು ತಮ್ಮ ಜೀವನದಲ್ಲಿ ತುಂಬಾ ಪ್ರಾಕ್ಟಿಕಲ್(Practical) ಆಗಿರುತ್ತಾರೆ. ಅವರಿಗೆ ಸಮಸ್ಯೆಗಳನ್ನು ಹೇಗೆ ಎದುರಿಸಬೇಕೆಂದು ತಿಳಿದಿರುತ್ತದೆ.
 

1111

ಈ ರೀತಿಯ ಎಕ್ಸ್ ಮಾರ್ಕ್ ಹೊಂದಿರುವ ಜನರು ಬಿಸಿನೆಸ್ ನಲ್ಲಿ(Business) ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಏಕೆಂದರೆ ಅವರು ಸ್ವಭಾವದಲ್ಲಿ ತುಂಬಾ ಕ್ರಿಯೇಟಿವ್ ಆಗಿರುತ್ತಾರೆ. ಅದಕ್ಕಾಗಿಯೇ ಈ ಬಿಸಿನೆಸ್ ಗಳಲ್ಲಿ ಹೊಸ ಐಡಿಯಾಗಳನ್ನು ಹಾಕುವ ಮೂಲಕ ತಮ್ಮ ಬಿಜಿನೆಸ್ ನಲ್ಲಿ ಯಶಸ್ಸನ್ನು ಪಡೆಯುತ್ತಾರೆ. 

click me!

Recommended Stories