ಹಿಂದೂ ಧರ್ಮದ 16 ವಿಧಿಗಳಲ್ಲಿ ಒಂದು ಕರ್ಣ ಛೇದನ ಸಂಸ್ಕಾರವಾಗಿದ್ದು, ಇದನ್ನು ಕಿವಿ ಚುಚ್ಚುವುದು (Ear Piercing) ಎಂದು ಕರೆಯಲಾಗುತ್ತೆ. ಇದು ಧಾರ್ಮಿಕ ಮಹತ್ವ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕಿವಿಗಳನ್ನು ಚುಚ್ಚುವುದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ, ಶ್ರವಣ ಸಾಮರ್ಥ್ಯ ಮತ್ತು ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸುತ್ತೆ ಎಂದು ಹೇಳಲಾಗುತ್ತೆ. ಇನ್ನೂ ಅನೇಕ ಪ್ರಯೋಜನಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ...
ಕಿವಿ ಚುಚ್ಚುವ ಸಂಪ್ರದಾಯವು ದೇಶದಲ್ಲಿ ಶತಮಾನಗಳಿಂದ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ, ಪ್ರತಿ ಮಗುವಿನ ಕಿವಿ ಚುಚ್ಚಲಾಗುತ್ತೆ ಮತ್ತು ಅದಕ್ಕೆ ವಿಭಿನ್ನ ಮಹತ್ವವಿದೆ. ಬಾಲ್ಯದಲ್ಲಿ ಮಕ್ಕಳ ಕಿವಿಗಳನ್ನು ಚುಚ್ಚಲಾಗುತ್ತೆ. ಕಿವಿಗಳನ್ನು ಕೇವಲ ಫ್ಯಾಷನ್(Fashion) ಅಥವಾ ಸುಂದರವಾಗಿ ಕಾಣಲು ಚುಚ್ಚಲಾಗೋದಿಲ್ಲ, ಬದಲಾಗಿ ಇದು ಮಗುವಿಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ.
ಸಾಮಾನ್ಯವಾಗಿ ಮಗುವಿನ ಕಿವಿಗಳನ್ನು ಐದನೇ ಅಥವಾ ಏಳನೇ ತಿಂಗಳಲ್ಲಿ ಚುಚ್ಚಲಾಗುತ್ತೆ, ಆದರೆ ಜನರು ತಮ್ಮದೇ ಆದ ಪದ್ಧತಿ ಪ್ರಕಾರ ಯಾವುದೇ ಸಮಯದಲ್ಲಿ ಮಗುವಿನ ಕಿವಿ ಚುಚ್ಚಬಹುದು. ಮಗುವಿನ ಕಿವಿಗಳನ್ನು ಚುಚ್ಚಿದ ನಂತರ, ಮಗುವಿಗೆ ಚಿನ್ನ(Gold), ಟೈಟಾನಿಯಂ ಅಥವಾ ನಿಯೋಬಿಯಂ ಕಿವಿಯೋಲೆಗಳನ್ನು ಧರಿಸಬಹುದು, ಅವು ಚರ್ಮಕ್ಕೆ ಪ್ರತಿಕ್ರಿಯಿಸೋದಿಲ್ಲ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.
ಕಣ್ಣಿನ(Eyes) ದೃಷ್ಟಿ ಉತ್ತಮವಾಗಿರುತ್ತೆ
ಕಿವಿಗಳನ್ನು ಚುಚ್ಚುವುದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ ಎಂದು ಹೇಳಲಾಗುತ್ತೆ. ಕಿವಿಯ ಮಧ್ಯ ಭಾಗವು ನಮ್ಮ ಕಣ್ಣುಗಳಿಗೆ ಸಂಪರ್ಕ ಹೊಂದಿದೆ, ಅದರ ಮೇಲಿನ ಒತ್ತಡದಿಂದಾಗಿ, ನಮ್ಮ ಕಣ್ಣುಗಳು ತೀಕ್ಷ್ಣವಾಗುತ್ತವೆ.
ಇದು ಮೆದುಳಿಗೂ(Brain) ಪ್ರಯೋಜನಕಾರಿ.
ಕಿವಿ ಚುಚ್ಚುವುದರಿಂದ ಮೆದುಳು ಸಹ ಬೆಳೆಯುತ್ತೆ ಎಂದು ಹೇಳಲಾಗುತ್ತೆ. ಕಿವಿಯ ಲೋಬ್ ಮೆರಿಡಿಯನ್ ಬಿಂದುವನ್ನು ಹೊಂದಿರುತ್ತೆ, ಇದು ಮೆದುಳಿನ ಬಲ ಮತ್ತು ಎಡ ಬದಿಗಳಿಗೆ ಸಂಪರ್ಕ ಹೊಂದಿದೆ. ಈ ಬಿಂದುವನ್ನು ಚುಚ್ಚುವುದು ಮೆದುಳಿನ ಈ ಭಾಗಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತೆ.
ಹೆಚ್ಚುವ ಶ್ರವಣ(Earing) ಸಾಮರ್ಥ್ಯ
ಕಿವಿಯ ಕೆಳಭಾಗದಲ್ಲಿ ಮಾಸ್ಟರ್ ಸೆನ್ಸರಲ್ ಮತ್ತು ಮಾಸ್ಟರ್ ಸೆರೆಬ್ರಲ್ ಎಂಬ ಹೆಸರಿನ 2 ಕಿವಿ ಲೋಬ್ ಗಳಿವೆ. ಈ ಭಾಗವನ್ನು ಚುಚ್ಚುವುದರಿಂದ ಕೇಳುವ ಸಾಮರ್ಥ್ಯ ಹೆಚ್ಚಾಗುತ್ತೆ. ಸಣ್ಣ ಸಣ್ಣ ಶಬ್ಧಗಳನ್ನು ಸಹ ಕಿವಿ ಕೇಳಿಸಿಕೊಳ್ಳುತ್ತೆ.
ಉತ್ತಮ ಉಸಿರಾಟ (Breathing)
ಕಿವಿಗಳಿಗೆ ಚುಚ್ಚೋದರಿಂದ ಆ ಭಾಗಕ್ಕೆ ಪ್ರೆಶರ್ ಬೀಳುತ್ತೆ. ಕಿವಿಯೋಲೆಯಿಂದಾಗಿ ಆಕ್ಯುಪ್ರೆಷರ್ ಪಾಯಿಂಟ್ ಉಂಟಾಗುತ್ತೆ, ಇದರಿಂದಾಗಿ ಉಸಿರಾಟದ ಆರೋಗ್ಯ ಉತ್ತಮವಾಗಿರುತ್ತೆ, ಇದು ಅಸ್ತಮಾ, ಟಿಬಿಯಂತಹ ರೋಗಗಳಿಂದ ರಕ್ಷಿಸುತ್ತೆ.
ಸಂತಾನೋತ್ಪತ್ತಿ ಅಂಗಗಳನ್ನು ಆರೋಗ್ಯಕರವಾಗಿಸುತ್ತೆ (Healthy)
ಕಿವಿಯ ಲೋಬ್ ಗಳ ನಡುವಿನ ಬಿಂದುವು ಸಂತಾನೋತ್ಪತ್ತಿ ಅಂಗಗಳ ಆರೋಗ್ಯಕ್ಕೆ ಕಾರಣವಾಗಿದೆ, ಆದ್ದರಿಂದ ಕಿವಿಗಳನ್ನು ಚುಚ್ಚುವುದು ಸಂತಾನೋತ್ಪತ್ತಿ ಅಂಗಗಳನ್ನು ಆರೋಗ್ಯಕರವಾಗಿರಿಸುತ್ತೆ.