ಮಾತೆ ದುರ್ಗೆಯನ್ನು ಪೂಜಿಸಿ
ರಾಹು-ಕೇತುಗಳ ಅಶುಭ ಪರಿಣಾಮಗಳಿಂದ ಕೆಲಸಗಳು ಹಾಳಾಗಲು ಪ್ರಾರಂಭಿಸುತ್ತವೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ರಾಹು-ಕೇತುಗಳ ದುಷ್ಪರಿಣಾಮಗಳನ್ನು ತಪ್ಪಿಸಲು ಮಾತೆ ದುರ್ಗೆಯನ್ನು ಪೂಜಿಸಬೇಕು.
ವಾಸುದೇವನ ಮಂತ್ರವನ್ನು ಜಪಿಸಿ
ರಾಹು-ಕೇತುಗಳ ಕಾರಣದಿಂದ ಜಾತಕದಲ್ಲಿ ಕಾಲ ಸರ್ಪ ದೋಷ ಉಂಟಾಗುತ್ತದೆ. ಕಾಲ-ಸರ್ಪದೋಷವನ್ನು ತೊಡೆದುಹಾಕಲು, ಶ್ರೀಕೃಷ್ಣನು ತನ್ನ ಮುಂದೆ ಹಾವಿನ ಮೇಲೆ ನೃತ್ಯ ಮಾಡುತ್ತಿರುವ ಫೋಟೋವನ್ನು ಇಟ್ಟುಕೊಂಡು ಓಂ ನಮಃ ಭಗವತೇ ವಾಸುದೇವಾಯ ಮಂತ್ರವನ್ನು ಜಪಿಸಬೇಕು.
ಸೋಮವಾರ ಉಪವಾಸ ಮಾಡಿ
ರಾಹು-ಕೇತುಗಳ ದುಷ್ಪರಿಣಾಮಗಳನ್ನು ತಪ್ಪಿಸಲು, ಸೋಮವಾರದಂದು ಉಪವಾಸವನ್ನು ಮಾಡುವ ಮೂಲಕ ಶಿವನನ್ನು ಪೂಜಿಸಬೇಕು. ಪುಜೆಯ ಸಮಯದಲ್ಲಿ ಶಿವನಿಗೆ ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಿ ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ
ಕೆಲವು ವಸ್ತುಗಳನ್ನು ದಾನ ಮಾಡಿ
ರಾಹುವಿನ ಅಶುಭ ಪರಿಣಾಮಗಳನ್ನು ತಪ್ಪಿಸಲು ಏಳು ಬಗೆಯ ಧಾನ್ಯಗಳು, ಸಾಸಿವೆ ಮತ್ತು ಕೆಲವು ನಾಣ್ಯಗಳನ್ನು ದಾನ ಮಾಡಬೇಕು. ಕೇತುವಿನ ಸಮಸ್ಯೆಯಿದ್ದರೆ ಬಾಳೆಹಣ್ನು, ಎಳ್ಳು ಮತ್ತು ಕಪ್ಪು ಹೊದಿಕೆಯನ್ನು ದಾನ ಮಾಡಬೇಕು.
ರುದ್ರಾಕ್ಷವನ್ನು ಧರಿಸಿ
ಜಾತಕದಲ್ಲಿ ರಾಹು ಮತ್ತು ಕೇತುಗಳಿಗೆ ಸಂಬಂಧಿಸಿದ ಸಮಸ್ಯೆ ಇದ್ದಾಗ ರುದ್ರಾಕ್ಷವನ್ನು ಧರಿಸಬೇಕು. ಇದರಿಂದ ಈ ಕ್ರೂರ ಗ್ರಹಗಳ ಪ್ರಭಾವದಿಂದ ಪಾರಾಗಬಹುದು.
ಶ್ರೀಗಂಧದ ಧೂಪ ಪೂಜೆಗೆ ಬಳಸಿ
ಶ್ರೀಗಂಧದ ಧೂಪವನ್ನು ಪೂಜೆಗೆ ಬಳಸಬೇಕು. ಶ್ರೀಗಂಧದ ಸುಗಂಧವು ರಾಹು-ಕೇತುಗಳ ದುಷ್ಪರಿಣಾಮಗಳನ್ನು ದೂರವಿಡಲು ಸಹಾಯ ಮಾಡುತ್ತದೆ.