ಶುಕ್ರ ಸಂಚಾರದಿಂದ ರಾಜಯೋಗ ಸೃಷ್ಟಿ; 4 ರಾಶಿಗೆ ಖುಲಾಯಿಸಲಿದ ಅದೃಷ್ಟ

Published : Sep 14, 2025, 10:22 PM IST

ಶುಕ್ರ ಸಂಚಾರದಿಂದ ರಾಜಯೋಗ ಸೃಷ್ಟಿ: ಸೆಪ್ಟೆಂಬರ್ 15 ರಂದು ಶುಕ್ರ ಸಿಂಹ ರಾಶಿಗೆ ಸಂಚರಿಸಲಿದ್ದಾನೆ. ಸೂರ್ಯ-ಶುಕ್ರರ ರಾಜಯೋಗದಿಂದ ರಾಶಿಯವರಿಗೆ ಶುಭ ಫಲಗಳು ದೊರೆಯಲಿವೆ. ಈ ಪ್ರಭಾವಶಾಲಿ ಯೋಗದಿಂದ ಕೆಲವು ರಾಶಿಗಳು ಉತ್ತಮ ಫಲಗಳನ್ನು ಅನುಭವಿಸಲಿವೆ

PREV
16
ಶುಭ ಗ್ರಹ ಶುಕ್ರ

ನವಗ್ರಹಗಳಲ್ಲಿ ಶುಕ್ರನನ್ನು ಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶುಕ್ರನು ಐಶ್ವರ್ಯ, ಸಮೃದ್ಧಿ, ಸಂತೋಷವನ್ನು ನೀಡುವ ಗ್ರಹವಾಗಿದ್ದಾನೆ. ಶುಕ್ರನು ಸೆಪ್ಟೆಂಬರ್ 15 ರಂದು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಸಂಚರಿಸುತ್ತಾನೆ. ಸದ್ಯ ಸಿಂಹ ರಾಶಿಯಲ್ಲಿ ಸೂರ್ಯನಿದ್ದಾನೆ. ಹೀಗಾಗಿ ಸೂರ್ಯ ಮತ್ತು ಶುಕ್ರ ಸೇರಿ ಸಿಂಹ ರಾಶಿಯಲ್ಲಿ ಸೂರ್ಯ-ಶುಕ್ರರ ರಾಜಯೋಗವನ್ನು ಸೃಷ್ಟಿಸುತ್ತಾರೆ. ಈ ಯೋಗವು ಬಹಳ ಪ್ರಭಾವಶಾಲಿ ಯೋವಾಗುತ್ತದೆ. ಈ ಪ್ರಭಾವಶಾಲಿ ಯೋಗದಿಂದ ಕೆಲವು ರಾಶಿಗಳು ಉತ್ತಮ ಫಲಗಳನ್ನು ಅನುಭವಿಸಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

26
ಮೇಷ ರಾಶಿ

ಮೇಷ ರಾಶಿಯವರಿಗೆ ಸೆಪ್ಟೆಂಬರ್ 15 ರಿಂದ ಅದೃಷ್ಟ ಖುಲಾಯಿಸಲಿದೆ. ಸೂರ್ಯ ಮತ್ತು ಶುಕ್ರರ ಸಂಗಮದಿಂದ ಸಿಂಹ ರಾಶಿಯವ ಜೀವನದಲ್ಲಿ ಉತ್ತಮ ಫಲಗಳು ದೊರೆಯಲಿವೆ. ಉದ್ಯೋಗದಿಂದ ಭಾರಿ ಹಣ ಗಳಿಸುವ ಯೋಗವಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸೋದರಿಂದ ಮಾಡಿದ ಸಾಲದಿಂದ ಮುಕ್ತಿ ಸಿಗುತ್ತದೆ. ಸೂರ್ಯ ಮತ್ತು ಶುಕ್ರರ ಸಂಗಮದಿಂದಾಗಿ ಕೌಟುಂಬಿಕ ಸಂಬಂಧಗಳು ಗಟ್ಟಿಯಾಗುತ್ತವೆ. 

ನಿಮ್ಮ ಸಂಗಾತಿಯ ಭಾವನೆ ಅರ್ಥಮಾಡಿಕೊಳ್ಳುತ್ತೀರಿ. ಇದರಿಂದ ಸಾಂಸರಿಕ ಕಲಹಗಳು ದೂರವಾಗಿ ನೆಮ್ಮದಿ ನೆಲೆಸುತ್ತದೆ. ಭೂಮಿ, ಆಸ್ತಿ, ಮನೆ, ವಾಹನ ಖರೀದಿಸುವ ಯೋಗವೂ ಸಹ ಈ ಸಮಯದಲ್ಲಿ ಬರೋ ಸಾಧ್ಯತೆ ಇರುತ್ತದೆ.

36
ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಶುಕ್ರನ ಪ್ರವೇಶವು ಸಿಂಹ ರಾಶಿಯವರಿಗೆ ಬಹಳಷ್ಟು ಒಳ್ಳೆಯದನ್ನು ಮಾಡುತ್ತದೆ. ಸಿಂಹ ರಾಶಿಯ ಅಧಿಪತಿಯಾದ ಸೂರ್ಯ ಈಗಾಗಲೇ ಸಿಂಹ ರಾಶಿಯಲ್ಲಿದ್ದಾನೆ. ಹೀಗಾಗಿ ಸಿಂಹ ರಾಶಿಯವರು ಈ ಪ್ರವೇಶದಿಂದಾಗಿ ಹೆಚ್ಚಿನ ಲಾಭ ಪಡೆಯಲಿದ್ದಾರೆ. ಸೂರ್ಯ-ಶುಕ್ರರ ರಾಜಯೋಗವು ಸಿಂಹ ರಾಶಿಯವರ ಜೀವನದಲ್ಲಿ ಹಲವು ಒಳ್ಳೆಯದನ್ನು ತರುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. 

ಸ್ನೇಹಿತರು ಮತ್ತು ಕುಟುಂಬದವರ ಬೆಂಬಲದಿಂದ ಯಾವುದೇ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮಾರ್ಥ್ಯ ನಿಮ್ಮದಾಗುತ್ತದೆ.ಈ ವೇಳೆ ಕೌಟುಂಬಿಕ ಜೀವನದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ಹೂಡಿಕೆಯಿಂದ ಉತ್ತಮ ಲಾಭ, ವ್ಯಾಪಾರದಲ್ಲಿ ಪ್ರಗತಿ ಸಿಗಲಿದೆ. ಇದೆಲ್ಲದರ ಪರಿಣಾಮದಿಂದ ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ.

46
ತುಲಾ ರಾಶಿ

ತುಲಾ ರಾಶಿಯವರಿಗೆ ಸೂರ್ಯ-ಶುಕ್ರರ ರಾಜಯೋಗ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಲಾಭ ದ್ವಿಗುಣಗೊಳ್ಳುತ್ತದೆ. ನಿಮ್ಮ ವ್ಯವಹಾರವನ್ನು ಹಲವು ಸ್ಥಳಗಳಿಗೆ ವಿಸ್ತರಿಸುವ ಅವಕಾಶ ಲಭ್ಯವಾಗುತ್ತದೆ. ಸಣ್ಣ ಉದ್ಯೋಗ ಮಾಡುತ್ತಿರುವವರು ದೊಡ್ಡ ಮಟ್ಟಕ್ಕೆ ಬದಲಾಯಿಸುವ ಅವಕಾಶಗಳು ನಿಮ್ಮನ್ನು ಅರಸಿಕೊಂಡು ಬರುತ್ತವೆ. ವ್ಯಾಪಾರ ವಿಸ್ತರಣೆಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲೇ ಸಾಲ ಸಿಗುತ್ತದೆ. 

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ಬರಬಹುದು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿ, ಸಂಬಳ ಹೆಚ್ಚಳ ಸಿಗಬಹುದು. ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಉತ್ತಮ ಸಂಬಳದೊಂದಿಗೆ ಕೆಲಸ ಸಿಗುತ್ತದೆ.

56
ಧನು ರಾಶಿ

ಸೂರ್ಯ-ಶುಕ್ರರ ರಾಜಯೋಗವು ಧನು ರಾಶಿಯವರಿಗೆ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ನಿಮ್ಮ ಸಂಪತ್ತು ಹೆಚ್ಚಾಗೋದರ ಜೊತೆ ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ. ಸಾಲದಿಂದ ಮುಕ್ತರಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಹಠಾತ್ ಲಾಭ ನಿಮ್ಮದಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. 

ಈ ವೇಳೆ ಮಕ್ಕಳಿಂದ ಸಂತೋಷದ ಸುದ್ದಿ ಸಿಗಲಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇದರಿಂದ ಆಧ್ಯಾತ್ಮಿಕ ಪ್ರಯಾಣ ಮಾಡುವ ಸಾಧ್ಯತೆಗಳಿರುತ್ತವೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ ನಿಮ್ಮದಾಗುತ್ತದೆ.

ಇದನ್ನೂ ಓದಿ: ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ!

66
Disclaimer

ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: 21ರಂದು ವರ್ಷದ ಕೊನೆಯ ಸೂರ್ಯಗ್ರಹಣ: ಯಾರ ಗ್ರಹಗತಿ ಹೇಗಿದೆ? ನಿಮ್ಮ ರಾಶಿಯ ಮೇಲೆ ಪ್ರಭಾವ ಏನು?

Read more Photos on
click me!

Recommended Stories