ಚತುರ್ಗ್ರಹಿ ಯೋಗ 2025: ಒಂದೇ ಸ್ಥಾನದಲ್ಲಿ 4 ಗ್ರಹಗಳ ಭೇಟಿ: 3 ರಾಶಿಯವರ ಜೀವನದಲ್ಲಿ ಬೀಸಲಿದೆ ಬಿರುಗಾಳಿ

Published : Oct 02, 2025, 01:33 PM IST

Negative yoga in astrology:  ಅಕ್ಟೋಬರ್‌ನಲ್ಲಿ ತುಲಾ ರಾಶಿಯಲ್ಲಿ ಸೂರ್ಯ, ಚಂದ್ರ, ಮಂಗಳ ಮತ್ತು ಬುಧ ಗ್ರಹಗಳ ಸಂಯೋಗದಿಂದ ಚತುರ್ಗ್ರಹಿ ಯೋಗ ಉಂಟಾಗಲಿದೆ. ಈ ಯೋಗವು ವಿಶೇಷವಾಗಿ 3 ರಾಶಿಯವರ ಜೀವನದಲ್ಲಿ ಆರ್ಥಿಕ ಸಂಕಷ್ಟ, ಕೌಟುಂಬಿಕ ಕಲಹ ಹಾಗೂ ಹಲವು ಸವಾಲುಗಳನ್ನು ತರಲಿದೆ.

PREV
15
ಚತುರ್ಗ್ರಹಿ ಯೋಗ

ಈ ವರ್ಷದ ಅಕ್ಟೋಬರ್‌ನಲ್ಲಿ ಅನೇಕ ಗ್ರಹಗಳ ಸ್ಥಾನ ಬದಲಾಗುತ್ತಿದೆ. ಈ ಹಿನ್ನೆಲೆ ಅಕ್ಟೋಬರ್ ತಿಂಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವೆಂದು ಪರಿಗಣಿಸಲಾಗತ್ತಿದೆ. ತುಲಾ ರಾಶಿಯಲ್ಲಿ ಮಂಗಳ, ಬುಧ, ಚಂದ್ರ ಮತ್ತು ಸೂರ್ಯ ಭೇಟಿಯಾಗಲಿವೆ. ಇದನ್ನು ಚತುರ್ಗ್ರಹಿ ಯೋಗ ಎಂದು ಕರೆಯಲಾಗುತ್ತದೆ.

25
ಮೂರು ರಾಶಿ

ನಾಲ್ಕು ಗ್ರಹಗಳು ಒಂದು ರಾಶಿಯಲ್ಲಿ ಭೇಟಿಯಾಗುವ ಚತುರ್ಗ್ರಹಿ ಯೋಗವು ಮೂರು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಮೂರು ರಾಶಿಗಳ ಜೀವನದಲ್ಲಿ ಬಿರುಗಾಳಿ ಏಳಲಿದ್ದು, ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದಿರಬೇಕು. ಈ ಮೂರು ರಾಶಿಗಳು ಯಾವವು ಎಂದು ನೋಡೋಣ ಬನ್ನಿ

35
ಕನ್ಯಾರಾಶಿ

ಚತುರ್ಗ್ರಹಿ ಯೋಗ ಕನ್ಯಾ ರಾಶಿಯವರ ಜೀವನ ಚಕ್ರದವರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ನಕಾರಾತ್ಮಕ ಪರಿಣಾಮದಿಂದ ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರಬಹುದು. 

ಆದಾಯದ ಮೂಲಗಳು ಕ್ಲೋಸ್ ಆಗಿ, ಸಾಲದ ಸುಳಿಯಲ್ಲಿ ಸಿಲುಕಬಹುದು. ಆರ್ಥಿಕ ಇಕ್ಕಟ್ಟಿನಿಂದ ಉಳಿತಾಯದ ಹಣವೂ ಖಾಲಿಯಾಗಲಿದೆ. ವೈವಾಹಿಕ ಜೀವನದಲ್ಲಿಯೂ ಸಮಸ್ಯೆಗಳನ್ನು ಎದುರಾಗಿ ಒತ್ತಡವುಂಟಾಗುತ್ತದೆ.

ಇದನ್ನೂ ಓದಿ: 50 ವರ್ಷಗಳ ಬಳಿಕ ವಿಶೇಷ ಸಂಯೋಗ; 4 ರಾಶಿಯವರಿಗೆ ದಸರಾ ನಂತರ ಅದೃಷ್ಟದ ಬಾಗಿಲು ತೆರೆಯಲಿದೆ!

45
ವೃಶ್ಚಿಕ ರಾಶಿ

ಈ ಚತುರ್ಗ್ರಹಿ ಯೋಗ ವೃಶ್ಚಿಕ ರಾಶಿಯವರಿಗೆ ದುರದೃಷ್ಟಕರ ಫಲಿತಾಂಶ ನೀಡಲಿದೆ. ಚತುರ್ಗ್ರಹಿ ಯೋಗ ನಕಾರಾತ್ಮಕ ಪರಿಣಾಮದಿಂದ ತೀವ್ರ ಆರ್ಥಿಕ ಸಮಸ್ಯೆಗಳುಂಟಾಗಿ ವ್ಯವಹಾರಗಳಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಕುಟುಂಬದಲ್ಲಿ ಕಲಹ, ಮನಸ್ತಾಪ ಉಂಟಾಗಬಹುದು. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಿಂದ ನೆಮ್ಮದಿ ಇಲ್ಲದಂತಾಗುತ್ತದೆ. ಆತ್ಯಾಪ್ತರಿಂದ ನಂಬಿಕೆ ದ್ರೋಹ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಸೂರ್ಯ ಶುಕ್ರ ಸಂಯೋಗ: ದೀಪಾವಳಿ ಸಮೀಪಿಸುತ್ತಿದ್ದಂತೆ 3 ರಾಶಿಯವರ ಜೀವನದಲ್ಲಿ ಲಕ್ಷೀ ದೇವಿಯ ಬೆಳಕು

55
ಮೀನ ರಾಶಿ

ಮೀನ ರಾಶಿಯ ಎಂಟನೇ ಮನೆಯಲ್ಲಿ ಚತುರ್ಗ್ರಹಿ ಯೋಗ ರೂಪುಗಳುತ್ತಿರೋದರು ಈ ರಾಶಿಚಕ್ರದವರು ಹಣಕಾಸಿನ ಸಮಸ್ಯೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುವ ಸನ್ನಿವೇಶಗಳು ಎದುರಾಗಲಿದೆ. ಕೆಲಸ ಕಳೆದುಕೊಳ್ಳಬಹುದು, ನೀಡಿದ ಹಣ ಹಿಂದಿರುಗಿ ಬರದಿರೋದು, ಹೂಡಿಕೆಗಳಲ್ಲಿ ಅತ್ಯಧಿಕ ನಷ್ಟ, ಅಪಘಾತದ ಸಾಧ್ಯತೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. 

ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು ಮತ್ತು ದೂರ ಪ್ರಯಾಣ ತಪ್ಪಿಸಿ. ಆರೋಗ್ಯದ ಬಗ್ಗೆಯೂ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಿ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories