50 ವರ್ಷಗಳ ಬಳಿಕ ವಿಶೇಷ ಸಂಯೋಗ; 4 ರಾಶಿಯವರಿಗೆ ದಸರಾ ನಂತರ ಅದೃಷ್ಟದ ಬಾಗಿಲು ತೆರೆಯಲಿದೆ!

Published : Oct 02, 2025, 08:08 AM IST

Vijayadashami astrology predictions: ವಿಜಯದಶಮಿ ಬಳಿಕ, 50 ವರ್ಷಗಳ ನಂತರ ತುಲಾ ರಾಶಿಯಲ್ಲಿ ಬುಧ ಮತ್ತು ಮಂಗಳನ ಅಪರೂಪದ ಸಂಯೋಗ ನಡೆಯಲಿದೆ. ಈ ಸಂಯೋಗದಿಂದಾಗಿ 4 ರಾಶಿಯವರಿಗೆ ಅದೃಷ್ಟ ಹೆಚ್ಚಾಗಿ, ಆರ್ಥಿಕ ಲಾಭ, ವೃತ್ತಿಯಲ್ಲಿ ಪ್ರಗತಿ ಮತ್ತು ಸಂತೋಷ ಲಭಿಸಲಿದೆ.

PREV
15
ವಿಜಯದಶಮಿ

ವಿಜಯದಶಮಿ ಬಳಿಕ ನಾಲ್ಕು ರಾಶಿಚಕ್ರದವರಿಗೆ ಅದೃಷ್ಟ ಹೆಚ್ಚಾಗಲಿದ್ದು, ಕಷ್ಟಗಳು ದೂರವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಸರಾವನ್ನು ಅತ್ಯಂತ ಪ್ರಮುಖ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಇಂದು ತುಲಾ ರಾಶಿಯಲ್ಲಿ ಬುಧ ಮತ್ತು ಮಂಗಳನ ಅಪರೂಪದ ಸಂಯೋಗವಾಗಲಿದೆ. ಈ ಸಂಯೋಗ 50 ವರ್ಷಗಳಿಗೊಮ್ಮೆ ಸಂಭವಿಸಲಿದೆ. ತುಲಾ ರಾಶಿಯಲ್ಲಿ ಎರಡು ಗ್ರಹಗಳ ಸಂಯೋಗವು ಹಣ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.

25
ಮೇಷ ರಾಶಿ

ಮೇಷ ರಾಶಿಯವರಿಗೆ ಇಂದಿನ ಶುಭ ಗಳಿಗೆ ಆರಂಭವಾಗಲಿದೆ. ಇಂದಿನಿಂದ ನಿಮ್ಮ ಯಾವುದೇ ಕೆಲಸಗಳಲ್ಲಿ ಹಿನ್ನಡೆಯಾಗುವುದಿಲ್ಲ. ಈ ಸಂಯೋಗ ರಾಶಿಚಕ್ರ ಚಿಹ್ನೆಯ 7 ನೇ ಮನೆಯಲ್ಲಿ ನಡೆಯುತ್ತದೆ. ಕೆಲಸ ಮಾಡೋರಿಗೆ ವೃತ್ತಿಯಲ್ಲಿ ಬೆಳವಣಿಗೆ ಕಾಣಲಿದ್ದು, ದಿಢೀರ್ ಆರ್ಥಿಕ ಲಾಭವಾಗಲಿದೆ. ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು, ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.

35
ಕರ್ಕಾಟಕ

ಕರ್ಕಾಟಕ ರಾಶಿಯವರಿಗೆ ಬುಧ ಮತ್ತು ಮಂಗಳ ಗ್ರಹದ ಸಂಯೋಗವು ನಾಲ್ಕನೇ ಮನೆಯಲ್ಲಿ ಸಂಭವಿಸುತ್ತದೆ. ಈ ಸಂಯೋಗ ಪರಿಣಾಮದಿಂದ ಭೌತಿಕ ಜೀವನದಲ್ಲಿ ಪ್ರಗತಿ, ಆದಾಯ ಹೆಚ್ಚಳವಾಗಲಿದೆ. ಆಸ್ತಿ ಸಮಸ್ಯೆಗಳು ಬಗೆಹರಿಯುತ್ತವೆ. ಹೊಸ ಮನೆ ಅಥವಾ ವಾಹನ ಖರೀದಿಸಲು ಸಾಕಷ್ಟು ಅವಕಾಶಗಳಿವೆ.

45
ವೃಷಭ ರಾಶಿ

ವೃಷಭ ರಾಶಿಯವರಿಗೆ ವಿಜಯ ದಶಮಿ ನಂತರ ಒಳ್ಳೆಯ ಸಮಯ ಶುರುವಾಗಲಿದೆ. ಈ ವರ್ಷ ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಯಶಸ್ಸು ಸಿಗುತ್ತದೆ. ಬುಧ ಮತ್ತು ಮಂಗಳ ಗ್ರಹದ ಸಂಯೋಗದಿದ ವೃಷಭ ರಾಶಿಯಗವರ ಜೀವನದಲ್ಲಿರುವ ಸಾಲಗಳು ಮುಕ್ತವಾಗಲಿವೆ. ಈ ಹಿಂದಿನ ಹೂಡಿಕೆಗಳಿಂದ ಲಾಭ ನಿಮ್ಮದಾಗಿಸಿಕೊಳ್ಳುತ್ತೀರಿ. ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ.

ಇದನ್ನೂ ಓದಿ: ಅಕ್ಟೋಬರ್ 17 ಕ್ಕೆ ಆದಿತ್ಯ-ಮಂಗಳ ರಾಜಯೋಗ, ಈ ರಾಶಿಗೆ ಲಕ್ಕಿ ಜ್ಯಾಕ್‌ಪಾಟ್, ಸಿರಿವಂತರಾಗುವ ಕಾಲ

55
ಧನು ರಾಶಿ

ಧನು ರಾಶಿಯವರಿಗೆ ಇದು ಅದ್ಭುತ ಸಮಯವಾಗಿದೆ. ಬುಧ ಮತ್ತು ಮಂಗಳ ಗ್ರಹಗಳ ಸಂಯೋಗವು 11 ನೇ ಮನೆಯಲ್ಲಿ ನಡೆಯುತ್ತದೆ. ಹಣದ ಹರಿವು ಅಗಾಧವಾಗಿ ಹೆಚ್ಚಳವಾಗಲಿದೆ. ಜೀವನದಲ್ಲಿ ಆದಾಯದ ಮೂಲಗಳು ಹೆಚ್ಚಳವಾಗಲಿವೆ. ವ್ಯವಹಾರ ಅಥವಾ ಷೇರು ಮಾರುಕಟ್ಟೆ ಹೂಡಿಕೆದಾರರು ಒಳ್ಳೆಯ ಲಾಭ ಲಭ್ಯವಾಗುತ್ತದೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಅಕ್ಟೋಬರ್ 3 ರಿಂದ ಈ ರಾಶಿಗೆ ಅದೃಷ್ಟ , ಪ್ರತಿ ಹಂತದಲ್ಲೂ ಯಶಸ್ಸು!

Read more Photos on
click me!

Recommended Stories