ಮನೆಯಲ್ಲಿ ಮಕ್ಕಳಿದ್ರೆ ಅನೇಕ ಜನರು ಪ್ರತಿದಿನ ಮಗುವನ್ನ ಭೇಟಿಯಾಗ್ತಾರೆ, ಪ್ರೀತಿಸ್ತಾರೆ ಮತ್ತು ವಾತ್ಸಲ್ಯವನ್ನು ತೋರಿಸ್ತಾರೆ. ಹಾಗಾಗಿ, ತಾಯಂದಿರು ಆಗಾಗ್ಗೆ ತಮ್ಮ ಮಗುವಿಗೆ ಯಾರ ದೃಷ್ಟಿ ಬೀಳುತ್ತೋ ಎಂದು ಚಿಂತಿಸುತ್ತಾರೆ. ಮಕ್ಕಳನ್ನು ದುಷ್ಟ ಕಣ್ಣಿನಿಂದ(Evil eye) ರಕ್ಷಿಸಬೇಕು ಎಂದು ಭಾರತದಲ್ಲಿ ಸಾಕಷ್ಟು ಮನ್ನಣೆ ಇದೆ. ಹಾಗಾಗಿ ಮಕ್ಕಳನ್ನು ದುಷ್ಟ ಕಣ್ಣಿನಿಂದ ರಕ್ಷಿಸಲು, ದೃಷ್ಟಿ ದಾರ ಅಥವಾ ಕಪ್ಪು ದಾರ ಧರಿಸ್ತಾರೆ, ಆದರೆ ದೃಷ್ಟಿ ದಾರ ಧರಿಸೋದು ನಿಜವಾಗಿಯೂ ಮಗುವನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿದ್ಯಾ?
ವೈದ್ಯರು ಅಂತಹ ವಸ್ತುಗಳನ್ನು ನಂಬೋದು ಕಡಿಮೆ. ಅವರು ಅಂತಹ ವಸ್ತುಗಳನ್ನು ಮಕ್ಕಳು ಧರಿಸಲು ನಿರಾಕರಿಸೋದಿಲ್ಲ ಅಥವಾ ಶಿಫಾರಸು ಕೂಡ ಮಾಡೋದಿಲ್ಲ. ಮಗುವಿನ ಬಗ್ಗೆ ಹೆಚ್ಚು ಗಮನ ಹರಿಸೋದರಿಂದ ದುರಾದೃಷ್ಟ ಉಂಟಾಗುತ್ತೆ ಅಥವಾ ಕೆಟ್ಟ ದೃಷ್ಟಿ ಉಂಟಾಗುತ್ತೆ ಎಂದು ನೀವು ಭಾವಿಸಿದರೆ, ಆಗ ಮಗುವಿನ ಕುತ್ತಿಗೆ ಅಥವಾ ಕೈಗೆ ಕಪ್ಪು ದಾರ ಧರಿಸಲು ಕೇಳಲಾಗುತ್ತೆ. ಈ ದಾರವು ಮಗುವನ್ನು ನೆಗೆಟಿವ್ ಅಟ್ರಾಕ್ಷನಿಂದ(Negative attraction) ರಕ್ಷಿಸುತ್ತೆ ಎಂದು ನಂಬಲಾಗಿದೆ.
ನೀವು ಸಹ ನಿಮ್ಮ ಮಗುವಿಗೆ ದೃಷ್ಟಿ ದಾರ ಧರಿಸಿದರೆ, ಅದು ಎಷ್ಟು ಸುರಕ್ಷಿತ ಎಂದು ತಿಳಿಯಲು ಮುಂದೆ ಓದಿ.
ನೋವುಂಟು(Pain) ಮಾಡಬಹುದು
ದೃಷ್ಟಿ ದಾರ ಧರಿಸೋದರಿಂದ ಮಗುವಿಗೆ ಗಾಯವಾಗುವ ಸಾಧ್ಯತೆ ಹೆಚ್ಚು. ಮಗುಗೆ ಬಟ್ಟೆ ಧರಿಸುವಾಗ ಮತ್ತು ತೆಗೆಯುವಾಗ ದಾರ ಎಳೆಯಬಹುದು. ಮಗು ಈ ದಾರವನ್ನು ಅಗಿಯಲು ಪ್ರಾರಂಭಿಸಬಹುದು, ಮತ್ತು ಅದನ್ನು ಎಲ್ಲಾ ಸಮಯದಲ್ಲೂ ಧರಿಸೋದರಿಂದ ನೈರ್ಮಲ್ಯದ ಪ್ರಶ್ನೆಯೂ ಉದ್ಭವಿಸುತ್ತೆ .
ಚರ್ಮದ ಸೋಂಕು(SKin infection) ಉಂಟಾಗಬಹುದು
ಮಗು ದೃಷ್ಟಿ ದಾರ ಎಳೆಯದಂತೆ ಅಥವಾ ಅಗಿಯದಂತೆ ದಾರವನ್ನು ತುಂಬಾ ಬಿಗಿಯಾಗಿ ಕಟ್ಟಿದರೆ, ಅದು ಮಗುವಿನ ಚರ್ಮಕ್ಕೆ ಕಿರಿಕಿರಿ ಉಂಟುಮಾಡಬಹುದು ಅಥವಾ ರಕ್ತ ಪರಿಚಲನೆಯ ಸಮಸ್ಯೆ ಸಹ ಉಂಟುಮಾಡಬಹುದು.
ದೃಷ್ಟಿ ದಾರ ಕಟ್ಟುವಾಗ ಬಿಗಿಯಾಗಿರದಿದ್ದರೂ, ಮಗು ಬೆಳೆದಂತೆ ಮತ್ತು ತೂಕ ಹೆಚ್ಚಾದಂತೆ, ದಾರ ಮಗುವಿಗೆ ತುಂಬಾ ಬಿಗಿಯಾಗಬಹುದು ಮತ್ತು ದಾರ ಒದ್ದೆಯಾದಾಗ,ಅಥವಾ ದೀರ್ಘಕಾಲದವರೆಗೆ ಒದ್ದೆಯಾಗಿದ್ದಾಗ, ಅಂದರೆ ಮಗುವಿಗೆ ಸ್ನಾನ (Bath)ಮಾಡಿದ ನಂತರ ಅಥವಾ ಬೇಸಿಗೆಯಲ್ಲಿ ನಿಮ್ಮ ಮಗು ಬೆವರಿದಾಗ, ಇದು ದದ್ದು ಅಥವಾ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು.
ದೃಷ್ಟಿದಾರವನ್ನು ಎಲ್ಲಿ ಧರಿಸಬೇಕು
ಮಗುವಿಗೆ ಕಪ್ಪು ದಾರವನ್ನು(Black thread) ಕಟ್ಟುವುದು ತುಂಬಾ ಜನಪ್ರಿಯ ಸಂಪ್ರದಾಯವಾಗಿದೆ, ಅದನ್ನು ಮಾಡದಿರಲು ನಿಮಗೆ ಕಷ್ಟವಾಗಬಹುದು. ಆದ್ದರಿಂದ ನೀವು ಕೈ ಅಥವಾ ಕುತ್ತಿಗೆಯ ಬದಲು ನಿಮ್ಮ ಮಗುವಿನ ಪಾದದ ಸುತ್ತಲೂ ಕಾಲ್ಗೆಜ್ಜೆಯಂತಹ ದಾರವನ್ನು ಕಟ್ಟಿ.
ಮಗುವಿನ ಕಾಲಿಗೆ ದೃಷ್ಟಿ ದಾರ ಕಟ್ಟೋದರಿಂದ, ಮಗುವಿಗೆ ಅದು ಮುಟ್ಟಲು ಮತ್ತು ಎಳೆಯಲು ಕಷ್ಟವಾಗುತ್ತೆ, ಅಥವಾ ಬಾಯಿಯನ್ನು ಪಾದದ ಹತ್ತಿರ ತೊಗೊಂಡೋಗಲು ಕಷ್ಟವಾಗುತ್ತೆ, ಹಾಗೆ ಡ್ರೆಸ್ ಧರಿಸುವಾಗ ಅಥವಾ ತೆಗೆಯುವಾಗ ಗಾಯಗೊಳ್ಳೋದಿಲ್ಲ. ಇದರಿಂದ ನೀವು ಅಂದುಕೊಂಡಂತೆ ಮಗುವಿಗೆ ದೃಷ್ಟಿಯಾಗೋದು ತಪ್ಪುತ್ತದೆ.
ಇವುಗಳನ್ನು ಸಹ ಧರಿಸಬಹುದು
ಇದಲ್ಲದೆ, ಪ್ಲಾಸ್ಟಿಕ್ ನಿಂದ ಮಾಡಿದ ಕಪ್ಪು ಬಳೆಗಳನ್ನು(Black Bangle) ಸಹ ಧರಿಸಬಹುದು. ಆದರೆ, ನಿಮ್ಮ ಮಗುವು ಕೆಲವೊಮ್ಮೆ ಸಮಸ್ಯೆ ಅನುಭವಿಸಬಹುದು.ಆದುದರಿಂದ ಪ್ಲಾಸ್ಟಿಕ್ ಫುಡ್ ಗ್ರೇಡ್ ಗುಣಮಟ್ಟದ ಬಳೆಗಳು ಅಥವಾ ಕಡ್ಗ ಧರಿಸೋದು ಉತ್ತಮ. ಯಾಕಂದ್ರೆ ಮಗು ಖಂಡಿತವಾಗಿಯೂ ಅದನ್ನು ಅಗಿಯುತ್ತೆ ಮತ್ತು ಅದನ್ನು ಟೀಥರ್ ಆಗಿ ಬಳಸುತ್ತೆ.
ಕಪ್ಪು ಬೊಟ್ಟು
ಮಗುವಿನ ಹಣೆ ಅಥವಾ ಕಾಲಿಗೆ ಕಪ್ಪು ಬೊಟ್ಟು ಹಚ್ಚುವ ಮೂಲಕ ದುಷ್ಟ ಕಣ್ಣಿನಿಂದ ರಕ್ಷಿಸಬಹುದು. ಚರ್ಮದ ಮೇಲೆ ನೀವು ಬಳಸುತ್ತಿರುವ ಕಾಡಿಗೆಯ(Kajol) ರಿಯಾಕ್ಷನ್ ಬಗ್ಗೆ ಕಾಳಜಿ ವಹಿಸಿ. ಮಗುವಿನ ಕಣ್ಣಿಗೆ ಕಾಡಿಗೆ ಹಾಕುವ ಮೊದಲು, ಅದು ಸುರಕ್ಷಿತವೇ ಅಥವಾ ಅಲ್ಲವೇ ಎಂದು ತಿಳಿದ ನಂತರವೇ ಉಪಯೋಗಿಸಿ.