ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

First Published | Nov 1, 2022, 6:00 AM IST

ಇಂದು ಕನ್ನಡ ರಾಜ್ಯೋತ್ಸವ. ಕನ್ನಡಿಗರೆಲ್ಲರ ಸಂಭ್ರಮದ ಹಬ್ಬ. ಈ ಸುದಿನ ನಿಮ್ಮ ಪ್ರೀತಿಪಾತ್ರರಿಗೆ, ಎಲ್ಲ ಕನ್ನಡಿಗ ಮಿತ್ರರಿಗೆ ವಾಟ್ಸಾಪ್, ಫೇಸ್ಬುಕ್ ಸ್ಟೇಟಸ್, ಸಂದೇಶಗಳು ಮತ್ತಿತರೆ ಮಾಧ್ಯಮಗಳ ಮೂಲಕ ಶುಭಾಶಯ ಹೇಳಲು ಇಲ್ಲಿವೆ ಸಂದೇಶಗಳು, ಫೋಟೋಗಳು ಮತ್ತು ಶುಭಕಾಮನೆಗಳು..

ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ

ಈ ದೈವಸನ್ನಿಧಿಯಲ್ಲಿ ಜನಿಸಿರುವ ಸಮಸ್ತ ಪುಣ್ಯವಂತರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ..

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

Tap to resize

ಸ್ವಚ್ಛವಾಗಿ ಮಾತಾಡಲು ಕಲಿಸಿದ, ಸ್ವಚ್ಛಂದವಾಗಿ ವಿಹರಿಸಲು ಗಂಧದಗುಡಿ ನೀಡಿರುವ ತಾಯಿ ಕನ್ನಡಾಂಬೆಗೆ ವಂದನೆಗಳು.
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಗಗನ ಗಾಳಿಯಲಿ ಜಿಗಿದು ಜೀವಿಸಲಿ 
ಚೆಲುವ ಕನ್ನಡದ  ಬಾವುಟ
ತಿರುಗೋ ಭೂಮಿಯಲಿ ಮಿನುಗಿ ತೋರಿಸಲಿ 
ಚೆಲುವ ಕನ್ನಡದ ಭೂಪಟ

ಈ ಪುಣ್ಯನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ
ತಾಯಿ ಭುವನೇಶ್ವರಿಗೆ ನಮಿಸೋಣ

ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಜಗತ್ತಿನ ಯಾವ ಮೂಲೆಗೇ ಹೋದರೂ ಮಾತೃಭಾಷೆ ನಮ್ಮ ಒಲುಮೆ.
ನಮ್ಮ ಪೊರೆದ ನಾಡು, ನುಡಿಯ ಹಬ್ಬವಿಂದು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಮಾತು ಕಲಿಸಿದ, ಮನಸ್ಸನ್ನು ತೆರೆದಿಡಲು ಕಲಿಸಿದ ಮಾತೃಭಾಷೆಯ, ಬದುಕನ್ನು ಕಲಿಸಿದ ಮಾತೃಭೂಮಿಯ ಹಬ್ಬವಿಂದು.. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಈ ರಾಜ್ಯೋತ್ಸವದ ದಿನದಂದು 
ತಾಯ್ನಾಡಿಗೆ ಸೇವೆ ಸಲ್ಲಿಸುವ ಪ್ರತಿಜ್ಞೆಗೈಯ್ಯೋಣ
ಭೂಪಟದಲ್ಲಿ ಕರ್ನಾಟಕವ ಮೆರೆಸೋಣ..

ಜೈ ಕರ್ನಾಟಕ, ಜೈ ಕರ್ನಾಟಕ ಮಾತೆ

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವಾ..

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

'ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು'
ಮಾತೃಭಾಷೆಯ ಮಮತೆಯ ಮಕ್ಕಳಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Latest Videos

click me!