Puja Tips: ಪೂಜೆಯಲ್ಲಿ ಗರುಡ ಗಂಟೆ ಏಕೆ ಬಳಸಲಾಗುತ್ತೆ?
First Published | Jun 20, 2022, 6:10 PM ISTದೇವಾಲಯದ ಪ್ರವೇಶದ್ವಾರದಲ್ಲಿ ಮತ್ತು ವಿಶೇಷ ಸ್ಥಳಗಳಲ್ಲಿ ಗಂಟೆ ಇಡುವ ಅಭ್ಯಾಸವು ಪ್ರಾಚೀನ ಕಾಲದಿಂದಲೂ ನಡೆಯುತ್ತಿದೆ. ಅಷ್ಟೇ ಅಲ್ಲ, ಮನೆಯ ಪೂಜಾ ಸ್ಥಳದಲ್ಲಿ ಕೂಡ ಗರುಡ ಗಂಟೆ ಇರಿಸಲಾಗುತ್ತೆ. ಇದಕ್ಕೆ ಕಾರಣ ಏನು ಎಂದು ಯೋಚ್ನೆ ಮಾಡೀದ್ದೀರಾ? ಧಾರ್ಮಿಕ ಗ್ರಂಥಗಳ ಪ್ರಕಾರ, ಶಬ್ದ ಸೃಷ್ಟಿಗೆ ವಿಶೇಷ ಕೊಡುಗೆ ನೀಡಿದೆ. ಸೃಷ್ಟಿಯು ರಚನೆಯಾದ ಸಮಯದಲ್ಲಿ ಹುಟ್ಟಿದ ನಾದ, ಅದೇ ನಾದವು ಈ ಗರುಡ ಘಂಟೆಯಿಂದ ಹೊರಬರುತ್ತದೆ ಎಂದು ನಂಬಲಾಗಿದೆ.