ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ವಸ್ತು ಹಾನಿಗೊಳಗಾಗಿದ್ದರೂ ಅಥವಾ ಹರಿದು ಹೋದರೂ ನಿಮ್ಮ ಉಪಯೋಗಕ್ಕೆ ಬರುತ್ತೆ. ಅವುಗಳಲ್ಲಿ ಹರಿದ ಪರ್ಸ್(Purse) ಕೂಡ ಒಂದು. ಇದರಿಂದ ನೀವು ನಿಮ್ಮ ಹಣೆಬರಹ ಬೆಳಗಿಸಬಹುದು. ನಿಮ್ಮ ಬಳಿ ಹಣ ಎಂದಿಗೂ ಕಡಿಮೆಯಾಗದಂತೆ ಕಾಪಾಡಿಕೊಳ್ಳಲು, ಹಳೆಯ ಪರ್ಸಿನಿಂದ ಏನು ಮಾಡಬಹುದು ನೋಡೋಣ.
ನೀವು ಹೊಸ ಪರ್ಸ್ ಖರೀದಿಸ್ಬೇಕಂತಿದ್ರೆ, ಅದು ಹಳೆಯ ಪರ್ಸ್ ನಂತೆ ಲಕ್ಕಿ(Lucky) ಹೌದೋ ಅಥವಾ ಇಲ್ಲವೇ ಎಂಬ ಗೊಂದಲವಿದ್ರೆ, ಇಲ್ಲಿದೆ ನಿಮಗಾಗಿ ಹಳೆಯ ಪರ್ಸ್ ಗೆ ಸಂಬಂಧಿಸಿದ ಕೆಲವೊಂದು ಪರಿಹಾರ ಇಲ್ಲಿದೆ. ಹಳೆಯ ಪರ್ಸ್ ಎಸೆಯುವ ಮೊದಲು ಇದನ್ನು ಮಾಡಿ:
ರೂಪಾಯಿ ನಾಣ್ಯ(Coins)
ಹಳೆಯ ಪರ್ಸ್ ಗೆ 1 ರೂಪಾಯಿ ನಾಣ್ಯ ಹಾಕಿ ಮತ್ತು ಕೆಂಪು ಬಟ್ಟೆಯಲ್ಲಿ ಸುತ್ತಿ. ಹೀಗೆ ಮಾಡೋದಿಂದ್ರ, ಹೊಸ ಪರ್ಸ್ ಎಂದಿಗೂ ಖಾಲಿಯಾಗೋದಿಲ್ಲ, ಮತ್ತು ಇದು ಮನಿ ಕಲೆಕ್ಷನ್‌ಗೆ ಸಹ ಯೂಸ್ ಫುಲ್ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಅಕ್ಕಿ(Rice) ಕಾಳು
ಪರ್ಸ್ ಹರಿದಿದ್ರೆ, ಅದು ಹಳೆಯದಾಗಿದ್ರೆ , ಅದನ್ನು ಎಂದಿಗೂ ಎಸೀಬೇಡಿ. ಹಳೆಯ ಪರ್ಸ್ ನಲ್ಲಿ ಅಕ್ಕಿಯ ಕಾಳು ಹಾಕಿ. ನೀವು ಹೊಸ ಪರ್ಸ್ ಯೂಸ್ ಮಾಡಲು ಬಯಸಿದಾಗ, ಮೊದಲು ಈ ಅಕ್ಕಿಯನ್ನು ಅದರಲ್ಲಿ ಇರಿಸಿ. ಇದನ್ನು ಮಾಡೋದ್ರಿಂದ, ಹಳೆಯ ಪರ್ಸ್ ನ ಧನಾತ್ಮಕ ಶಕ್ತಿಯು ಹೊಸ ಪರ್ಸ್ ಗೆ ಬರುತ್ತೆ. ಇದು ನಿಮಗೆ ಹಳೆಯದರಷ್ಟೇ ಲಕ್ಕಿ ಎಂದು ಸಾಬೀತುಪಡಿಸುತ್ತೆ.
ಹಳೆಯ ಪರ್ಸ್ ಸಮೃದ್ಧಿ ಉಳಿಸುತ್ತೆ
ಹಳೆಯ ಪರ್ಸ್ ನಿಮ್ಮೊಂದಿಗೆ ಇಟ್ಟುಕೊಳ್ಳೋ ಮೊದಲು, ಅದನ್ನು ಸರಿಪಡಿಸಿಕೊಳ್ಳಿ. ಏಕೆಂದರೆ ಹರಿದ ಪರ್ಸ್ ಇಟ್ಟುಕೊಳ್ಳೋ ಮೂಲಕ, ರಾಹು ಗ್ರಹವು ದುರ್ಬಲವಾಗುತ್ತೆ ಮತ್ತು ಅನೇಕ ಸಮಸ್ಯೆ(Problem) ಉಂಟಾಗಬಹುದು
ನೀವು ಹಳೆಯ ಪರ್ಸ್ ಕೆಂಪು(Red) ಬಟ್ಟೆಯಲ್ಲಿ ಕಟ್ಟಿ ಸುರಕ್ಷಿತವಾಗಿಡಿ. ಪರ್ಸ್ ಖಾಲಿಯಾಗಿಲ್ಲ ಎಂಬುದನ್ನು ನೆನಪಿಡಿ, ಅದರಲ್ಲಿ ಕರವಸ್ತ್ರ, ಅಕ್ಕಿ ಅಥವಾ ಸ್ವಲ್ಪ ಹಣ ಇಡಲು ಮರೀಬೇಡಿ. ಇದು ಯಾವಾಗಲೂ ಸಮೃದ್ಧಿಯನ್ನು ಉಳಿಸಿಕೊಳ್ಳುತ್ತೆ. ನಿಮ್ಮ ಪರ್ಸ್ ಯಾವಾಗಲೂ ತುಂಬಿರುವಂತೆ ಮಾಡುತ್ತೆ.