ಗರುಡ ಪುರಾಣದ ಪ್ರಕಾರ ಯಾವ ಕೆಟ್ಟ ಅಭ್ಯಾಸಗಳು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತೆ?

Published : Apr 08, 2023, 02:56 PM IST

ಗರುಡ ಪುರಾಣವನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಇದಕ್ಕೆ ಮಹಾಪುರಾಣ ಎಂಬ ಬಿರುದನ್ನು ನೀಡಲಾಯಿತು. ಇದರಲ್ಲಿ, ಭಗವಾನ್ ವಿಷ್ಣು ತನ್ನ ವಾಹನ ಗರುಡನಿಗೆ ಮನುಷ್ಯನು ಜೀವನದಲ್ಲಿ ಕರ್ಮವನ್ನು ಹೇಗೆ ಮಾಡಬೇಕು ಎಂದು ಹೇಳಿದ್ದಾನೆ.  

PREV
16
ಗರುಡ ಪುರಾಣದ ಪ್ರಕಾರ ಯಾವ ಕೆಟ್ಟ ಅಭ್ಯಾಸಗಳು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತೆ?

ಹಿಂದೂ ಧರ್ಮದಲ್ಲಿ ಗರುಡ ಪುರಾಣವನ್ನು(Garuda Purana) ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗರುಡ ಪುರಾಣವನ್ನು ಕೇಳೋದರಿಂದ ಅಥವಾ ಪಠಿಸೋದರಿಂದ ಮಾತ್ರ ವ್ಯಕ್ತಿಯ ಜೀವನವು ಯಶಸ್ವಿಯಾಗುತ್ತೆ ಮತ್ತು ಬರುವ ಸಮಸ್ಯೆಗಳನ್ನು ತೆಗೆದು ಹಾಕಲಾಗುತ್ತೆ. 

26

ಗರುಡ ಪುರಾಣವು ವಿಷ್ಣು(Vishnu) ಮತ್ತು ಅವನ ಪ್ರೀತಿಯ ವಾಹನ ಗರುಡ ದೇವರ ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ. ಗರುಡ ಪುರಾಣದ ಈ ಭಾಗದಲ್ಲಿ, ಜೀವನದಲ್ಲಿ ಯಾವ ಕೆಟ್ಟ ಅಭ್ಯಾಸಗಳು ಬಡತನಕ್ಕೆ ಕಾರಣವಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

36

ಗರುಡ ಪುರಾಣದ ಈ ಐದು ವಿಷಯಗಳನ್ನು ನೆನಪಿನಲ್ಲಿಡಿ 
ಒಬ್ಬ ವ್ಯಕ್ತಿ ರಾತ್ರಿ ತಡವಾಗಿ (Late night) ಮಲಗಬಾರದು ಅಥವಾ ಬೆಳಿಗ್ಗೆ ತಡವಾಗಿ ಏಳಬಾರದು ಎಂದು ಮಹಾಪುರಾಣದಲ್ಲಿ ಹೇಳಲಾಗಿದೆ. ಯಾಕಂದ್ರೆ ಬೆಳಿಗ್ಗೆ ಬೇಗನೆ ಎದ್ದೇಳುವ ಮೂಲಕ, ದೇಹವು ಶಕ್ತಿಯಿಂದ ತುಂಬಿರುತ್ತೆ  ಮತ್ತು ಸೋಮಾರಿತನ ನಿಮ್ಮ ಹತ್ತಿರ ಸುಳಿಯೋದಿಲ್ಲ. ಈ ನಿಯಮವನ್ನು ಉಲ್ಲಂಘಿಸುವ ಜನರು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

46

ಊಟದ ನಂತರ ಕೊಳಕು ಪಾತ್ರೆಗಳನ್ನು ಹಾಗೆಯೇ ಇಡಬಾರದು. ಹಾಗೆ ಮಾಡೋದರಿಂದ ಮನೆಯ ದೋಷಗಳ ಅಪಾಯ ಹೆಚ್ಚಿಸುತ್ತೆ. ಇದನ್ನು ದೀರ್ಘಕಾಲದವರೆಗೆ ಹೀಗೆ ಮಾಡೋದರಿಂದ, ಲಕ್ಷ್ಮಿ(Goddess Lakshmi) ಕೋಪಗೊಳ್ಳುತ್ತಾಳೆ ಮತ್ತು ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ.

56

ಅನೇಕ ಬಾರಿ ಜನರು ಕೊಳಕು ಬಟ್ಟೆಗಳನ್ನು(Unclean clothes) ಧರಿಸಿ ಅವಸರದಲ್ಲಿ ಶಾಲೆ ಅಥವಾ ಕಚೇರಿಗೆ ಹೋಗುತ್ತಾರೆ. ಆದರೆ ಗರುಡ ಪುರಾಣದಲ್ಲಿ, ಈ ಕೆಲಸವನ್ನು ಸಹ ನಿಷೇಧಿಸಲಾಗಿದೆ. ಪ್ರತಿ ಬಾರಿ ಕೊಳಕು ಬಟ್ಟೆಗಳನ್ನು ಧರಿಸಿದಾಗ, ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ವ್ಯಕ್ತಿಯ ಬಾಗಿಲಿಗೆ ಬಂದ ನಂತರವೂ ಹಿಂತಿರುಗುತ್ತಾಳೆ. ಆದ್ದರಿಂದ ಯಾವಾಗಲೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
 

66

ಗರುಡ ಪುರಾಣದಲ್ಲಿ ಹೇಳಿರುವಂತೆ ಮನೆಯಲ್ಲಿ ಯಾವಾಗಲೂ ಉದ್ವಿಗ್ನತೆಯ ವಾತಾವರಣ ಮತ್ತು ಭಿನ್ನಾಭಿಪ್ರಾಯವಿದ್ದರೆ, ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಇದರೊಂದಿಗೆ, ಮಾತಾ ಲಕ್ಷ್ಮಿ ಅಂತಹ ಮನೆಯಿಂದ ಹಿಂತಿರುಗುತ್ತಾಳೆ. ಆದ್ದರಿಂದ, ಮನೆಯಲ್ಲಿ ಶಾಂತಿಯ(Peace) ವಾತಾವರಣವನ್ನು ಇರಿಸಿ ಮತ್ತು ಯಾರೊಂದಿಗೂ ಭಿನ್ನಾಭಿಪ್ರಾಯಗಳನ್ನು ಹೊಂದದಿರಿ.
 

click me!

Recommended Stories