ರಾಜ್ಯದ ಕೆಟ್ಟ ಮಂತ್ರಿ ಸೇರಿ ಇಂಥವು ಬೇಗ ನಾಶವಾಗುತ್ತೆ ಅಂದಿದ್ದಾನೆ ಚಾಣಕ್ಯ!

First Published | Apr 7, 2023, 4:57 PM IST

ಆಚಾರ್ಯ ಚಾಣಕ್ಯನು ಪ್ರಕೃತಿ, ಸದ್ಗುಣ, ಧರ್ಮ, ದೋಷ, ಪ್ರಗತಿ, ವೃತ್ತಿ, ಸಂಬಂಧಗಳು ಮತ್ತು ಹಣ ಇತ್ಯಾದಿಗಳಿಗೆ ಸಂಬಂಧಿಸಿದ ನೀತಿಗಳನ್ನು ನೀತಿಶಾಸ್ತ್ರದಲ್ಲಿ ವಿವರಿಸಿದ್ದಾನೆ. ಅವುಗಳನ್ನು ಜನರು ಈಗಲೂ ತಮ್ಮ ಜೀವನದಲ್ಲಿ ಅಳುವಡಿಸಿಕೊಳ್ಳುತಿದ್ದಾರೆ. ನೀವು ಚಾಣಕ್ಯ ನೀತಿಯನ್ನು ಪಾಲಿಸಿಸಲು ಬಯಸಿದ್ರೆ ಮುಂದೆ ಓದಿ.  

ಆಚಾರ್ಯ ಚಾಣಕ್ಯನು (Acharya Chanakya) ತನ್ನ ನೀತಿ ಶಾಸ್ತ್ರದಲ್ಲಿ ಜೀವನದ ಎಲ್ಲಾ ಅಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ನೀಡಿದ್ದಾನೆ. ಈ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಜನರು ಇನ್ನೂ ಯಶಸ್ಸನ್ನು ಸಾಧಿಸುತ್ತಾರೆ. 

ಆಚಾರ್ಯ ಚಾಣಕ್ಯನ ನೀತಿಗಳನ್ನು ಅಳವಡಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತೆ, ಆದರೆ ಒಮ್ಮೆ ಅದನ್ನು ಅಳವಡಿಸಿಕೊಳ್ಳುವವರು ಸ್ವಲ್ಪವೂ ವೈಫಲ್ಯವನ್ನು(Failure) ಎದುರಿಸಬೇಕಾಗಿಲ್ಲ. ಹಾಗಿದ್ರೆ ಆ ನೀತಿಗಳ ಸಾರವನ್ನು ನೀವು ಸ್ವಲ್ಪವಾದರೂ ತಿಳಿಯದೇ ಇದ್ದರೆ ಹೇಗೆ ಅಲ್ವಾ?

Tap to resize

ಒಂದು ಪದ್ಯದಲ್ಲಿ, ಚಾಣಕ್ಯನು ಶೀಘ್ರದಲ್ಲೇ ನಾಶವಾಗುವ ಕೆಲವು ವಿಷಯಗಳ ಬಗ್ಗೆ ಹೇಳಿದ್ದಾನೆ.
ನದಿ ತೀರೆ ಚ ಯೇ ವೃಕ್ಷಃ ಪರಗೇಹೇಷು ಕಾಮಿನಿ 
ಮಂತ್ರಹಿನಾಶ್ಚಾ ರಾಜನಃ ಶೀಘ್ರಂ ನಶಯಂತ್ಯಸಂಶಯಂ
 

ಆಚಾರ್ಯ ಚಾಣಕ್ಯನು ನದಿಯ ದಡದಲ್ಲಿ ಹುಟ್ಟಿದ ಮರಗಳ ಬಗ್ಗೆ ಹೇಳುತ್ತಾನೆ. ಇತರರ ಮನೆಯಲ್ಲಿ ವಾಸಿಸುವ ಮಹಿಳೆ ಮತ್ತು ಯಾವ ರಾಜನ ಮಂತ್ರಿ(Minister) ಇವರಲ್ಲಿ ಯಾರು ಒಳ್ಳೆಯವರಲ್ಲವೋ ಅವರು ಬೇಗ ನಾಶವಾಗುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳುತ್ತೆ.
 

ನದಿಯ ದಡದಲ್ಲಿರುವ ಮರಗಳ(Tree) ಜೀವಿತಾವಧಿ ಎಷ್ಟು ಎಂದು ಯಾರೂ ಹೇಳಲು ಸಾಧ್ಯವಿಲ್ಲ, ಏಕೆಂದರೆ ಪ್ರವಾಹ ಮತ್ತು ಬಿರುಗಾಳಿಯ ಸಮಯದಲ್ಲಿ, ನದಿಗಳು ತಮ್ಮ ದಡದಲ್ಲಿರುವ ಮರಗಳನ್ನು ಮಾತ್ರವಲ್ಲ, ಅವುಗಳ ಸುತ್ತಲಿನ ಬೆಳೆಗಳನ್ನು ಸಹ ನಾಶಪಡಿಸುತ್ತವೆ.

ಹಾಗೆಯೇ, ಇತರ ಮನೆಗಳಲ್ಲಿ ವಾಸಿಸುವ ಮಹಿಳೆ(Woman) ಎಷ್ಟು ದಿನ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು? ಆ ಮನೆಯಲ್ಲಿ ಆಕೆಗೆ ಒಳ್ಳೆಯದನ್ನು ಮಾಡುವವರಿದ್ದರೆ, ಸರಿ.. ಆದರೆ ಆಕೆಯ ಮೇಲೆ ದೌರ್ಜನ್ಯ ಮಾಡುತ್ತಿದ್ದರೆ, ಅದನ್ನು ಸಹಿಸಿಕೊಂಡು ಆಕೆ ಇರಲಾರಳು. 

ಒಳ್ಳೆಯ ಸಲಹೆಗಳನ್ನು(Tips) ನೀಡುವ ಮಂತ್ರಿಗಳನ್ನು ಹೊಂದಿರದ ರಾಜನು ತನ್ನ ರಾಜ್ಯವನ್ನು ಎಷ್ಟು ಕಾಲ ರಕ್ಷಿಸಬಹುದು? ಒಬ್ಬ ಕೆಟ್ಟ ಮಂತ್ರಿಯಿಂದ ರಾಜ್ಯ ಅಧಃಪತನ ಹೊಂದುವುದು ಖಚಿತ. ಅಂದರೆ, ಅವೆಲ್ಲವೂ ಖಂಡಿತವಾಗಿಯೂ ಬೇಗ ನಾಶವಾಗುತ್ತವೆ ಎಂದರ್ಥ.

Latest Videos

click me!