ಜಾತಕದಲ್ಲಿ ಶನಿ ದುರ್ಬಲನಾಗಿದ್ದರೆ, ಆಗ ವ್ಯಕ್ತಿಯು ಪದೇ ಪದೇ ವಿಫಲನಾಗುತ್ತಾನೆ ಮತ್ತು ಅವನು ಯಾವಾಗಲೂ ತೊಂದರೆಗಳಿಂದ ಸುತ್ತುವರಿಯಲ್ಪಟ್ಟಿರುತ್ತಾನೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು, ಸಾಸಿವೆ ಎಣ್ಣೆ(Mustard oil), ಕಲೋಂಜಿ ಮತ್ತು ಕಪ್ಪು ಎಳ್ಳು ಬೀಜಗಳನ್ನು ಬಳಸೋದು ಮತ್ತು ದಾನ ಮಾಡೋದು ಪ್ರಯೋಜನಕಾರಿ. ಅದೇ ಸಮಯದಲ್ಲಿ, ರಾಹು-ಕೇತುವಿನ ಅಶುಭ ಪರಿಣಾಮಗಳನ್ನು ತಪ್ಪಿಸಲು, ನೀರಿನಲ್ಲಿ ನೆನೆಸಿರುವ ಬಾರ್ಲಿ ಪರಿಹಾರವನ್ನು ಒದಗಿಸುತ್ತೆ ಎಂದು ನಂಬಲಾಗಿದೆ.