Astrology Tips: ನವಗ್ರಹ ದೋಷ ನಿವಾರಿಸಲು ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ

First Published Sep 14, 2022, 6:18 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ, ಚಂದ್ರ, ಬುಧ, ಮಂಗಳ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಒಟ್ಟು ಒಂಬತ್ತು ಗ್ರಹಗಳಿವೆ. ವ್ಯಕ್ತಿಯ ಜಾತಕದಲ್ಲಿ ಪ್ರತಿಯೊಂದು ಗ್ರಹವೂ ಇರುತ್ತೆ. ಇದರೊಂದಿಗೆ, 12 ರಾಶಿ ಚಿಹ್ನೆಗಳಲ್ಲಿರುವ ಪ್ರತಿಯೊಂದು ಗ್ರಹವು ಖಂಡಿತವಾಗಿಯೂ ಕೆಲವು ಸಮಯದಲ್ಲಿ ಆ ರಾಶಿಯ ಜನರ ಜೀವನದ ಮೇಲೆ ಪರಿಣಾಮ ಬೀರುತ್ತೆ. ರಾಶಿಯಲ್ಲಿ ಗ್ರಹ ದೋಷಗಳು ಕಂಡು ಬಂದರೆ ನೀವು ಅದನ್ನು ಯಾವ ರೀತಿಯಾಗಿ ಬಗೆಹರಿಸಬಹುದು ಅನ್ನೋದನ್ನು ತಿಳಿಯೋಣ. ಇಲ್ಲಿದೆ ಪರಿಹಾರ ಮಾರ್ಗ.

ಜ್ಯೋತಿಷಿಗಳ ಪ್ರಕಾರ, ಪ್ರತಿಯೊಬ್ಬರೂ ಕೆಲವು ಗ್ರಹಗಳ ದೋಷದಿಂದ ಬಳಲುತ್ತಾರೆ. ಅನೇಕ ಬಾರಿ ವ್ಯಕ್ತಿಯು ಇದರ ಬಗ್ಗೆ ತಿಳಿದಿರೋದಿಲ್ಲ ಮತ್ತು ಅವನ ಜೀವನದಲ್ಲಿ ಕಷ್ಟ ಅನುಭವಿಸುತ್ತಾನೆ. ಆರ್ಥಿಕ ಅಡಚಣೆಗಳು, ವೃತ್ತಿಜೀವನದಲ್ಲಿ ಕಷ್ಟ, ಪ್ರಗತಿಯ ಕೊರತೆ, ಕುಟುಂಬದಲ್ಲಿನ ಭಿನ್ನಾಭಿಪ್ರಾಯ, ಕಳಪೆ ಆರೋಗ್ಯದಂತಹ ಸಣ್ಣ ವಿಷಯಗಳು ಸಹ ಗ್ರಹಗಳ ದೋಷಗಳಿಂದ ಉಂಟಾಗಬಹುದು. ಹಾಗಾಗಿ, ಈ ನವಗ್ರಹಗಳ ದೋಷಗಳನ್ನು(Navagraha dosh) ಸಕಾಲದಲ್ಲಿ ಸರಿಪಡಿಸೋದು ಅಗತ್ಯ.

ಜ್ಯೋತಿಷ್ಯ ಶಾಸ್ತ್ರದಲ್ಲಿ, ನವಗ್ರಹದ ಶಾಂತಿಗಾಗಿ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಈ ಕೆಲವು ಕ್ರಮಗಳನ್ನು ಒಬ್ಬ ವ್ಯಕ್ತಿಯು ಸುಲಭವಾಗಿ ಮಾಡಬಹುದು.  
ನವಗ್ರಹ ದೋಷಕ್ಕೆ ಪರಿಹಾರಗಳು
ಸೂರ್ಯ (Sun)
ಸೂರ್ಯನ ಕೆಟ್ಟ ಸ್ಥಿತಿಯನ್ನು ಸರಿಪಡಿಸಲು, ರಾತ್ರಿ ಮಲಗುವ ಮೊದಲು ತಾಮ್ರದ ಪಾತ್ರೆಯಲ್ಲಿ ತುಂಬಿದ ನೀರನ್ನು ಹಾಸಿಗೆಯ ಕೆಳಗೆ ಇರಿಸಿ. ಇದಲ್ಲದೆ, ಕೆಂಪು ಶ್ರೀಗಂಧವನ್ನು ದಿಂಬಿನ ಕೆಳಗೆ ಬಟ್ಟೆಯಲ್ಲಿ ಕಟ್ಟಿಡಿ. ಇದರಿಂದ ಸೂರ್ಯ ದೋಷ ನಿವಾರಣೆಯಾಗುತ್ತೆ.

ಚಂದ್ರ(Moon)
ಜಾತಕದಲ್ಲಿ ಚಂದ್ರನ ಸ್ಥಾನವು ಕೆಟ್ಟದಾಗಿದ್ದರೆ, ಬೆಳ್ಳಿಯಿಂದ ಮಾಡಿದ ಪಾತ್ರೆಯಲ್ಲಿ ನೀರನ್ನು ಹಾಸಿಗೆಯ ಕೆಳಗೆ ಇರಿಸಿ. ಇದಲ್ಲದೆ, ಬೆಳ್ಳಿಯಿಂದ ಮಾಡಿದ ಆಭರಣಗಳನ್ನು ದಿಂಬಿನ ಕೆಳಗೆ ಇಡೋದರಿಂದ ಪ್ರಯೋಜನವಾಗುತ್ತೆ.

ಮಂಗಳ ದೋಷ
ಜಾತಕದಿಂದ ಮಂಗಳ ದೋಷವನ್ನು ತೆಗೆದುಹಾಕಲು, ಕಂಚಿನ ಪಾತ್ರೆಯಲ್ಲಿ(Bronze vessel) ನೀರನ್ನು ಹಾಕಿ ಹಾಸಿಗೆಯ ಕೆಳಗೆ ಇರಿಸಿ. ಅಲ್ಲದೆ, ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಆಭರಣಗಳನ್ನು ದಿಂಬಿನ ಕೆಳಗೆ ಇರಿಸಿ. ಇದರಿಂದ ದೋಷ ದೂರವಾಗುತ್ತೆ. ಯಾವುದೇ ರೀತಿಯ ಅಭರಣವನ್ನು ಸಹ ನೀವು ಅಲ್ಲಿಡಬಹುದು.
 

Astrology-Do you know the benefits of gold jewelry wear

ಬುಧ ದೋಷ
ಜಾತಕದಲ್ಲಿ ಬುಧನ ಸ್ಥಾನವು ದುರ್ಬಲವಾಗಿದ್ದರೆ, ಅಥವಾ ನಿಮ್ಮ ಜಾತಕದಲ್ಲಿ ಬುಧ ದೋಷ ಕಂಡು ಬಂದರೆ ಮಲಗುವಾಗ ಚಿನ್ನದಿಂದ ಮಾಡಿದ ಆಭರಣಗಳನ್ನು(Gold jewels) ದಿಂಬಿನ ಕೆಳಗೆ ಇರಿಸಿ. ಇದರಿಂದ ಲಾಭವಾಗಲಿದೆ. ಎಲ್ಲಾ ದೋಷಗಳು ಸಹ ನಿವಾರಣೆಯಾಗಲಿದೆ. 

ಗುರು ದೋಷ
ಗುರು ಗ್ರಹ ದುರ್ಬಲಗೊಳ್ಳುವುದರಿಂದಾಗಿ ಜಾತಕದಲ್ಲಿ ಗುರು ದೋಷ ಕಾಣಿಸಿಕೊಳ್ಳುತ್ತವೆ. ಜಾತಕದಿಂದ ಗುರುವಿನ ದೋಷವನ್ನು ಕಡಿಮೆ ಮಾಡಲು, ದಿಂಬಿನ ಕೆಳಗೆ ಸ್ವಚ್ಛವಾದ ಬಟ್ಟೆಯಲ್ಲಿ ಅರಿಶಿನದ(Turmeric) ಉಂಡೆಯನ್ನು ಕಟ್ಟಿಡಿ. ಇದರಿಂದ ಉತ್ತಮ ಪರಿಹಾರ ಸಿಗುತ್ತದೆ. 

ರಾಹು ದೋಷ
ಜಾತಕದಿಂದ ರಾಹುವಿನ ಸ್ಥಾನವನ್ನು ಸರಿಪಡಿಸಲು ಪ್ರತಿದಿನ ಹಣೆಗೆ ತಿಲಕವನ್ನು(Tilak) ಹಚ್ಚಿ. ಇದರಿಂದ ಲಾಭವಾಗಲಿದೆ.

ಕೇತು ದೋಷ
ಜಾತಕದಿಂದ ಕೇತುವಿನ ದೋಷವನ್ನು ತೊಡೆದುಹಾಕಲು ಎರಡು ಬಣ್ಣದ ನಾಯಿಗೆ (Dog) ಬ್ರೆಡ್ ತಿನ್ನಿಸಿ. ಸಾಧ್ಯವಾದರೆ, ನಾಯಿಯನ್ನು ನೀವು ಸಾಕಿ. ಇದರಿಂದ ಕೇತು ದೋಷ ನಿವಾರಣೆಯಾಗುತ್ತೆ.

ಶುಕ್ರ ದೋಷ
ಜಾತಕದಲ್ಲಿ ಶ್ರೀಮಂತಿಕೆ ಮತ್ತು ವೈಭವದ ಸಂಕೇತವು ದುರ್ಬಲವಾಗಿದ್ದರೆ, ನಿಮ್ಮ ಜಾತಕದಲ್ಲಿ ಶುಕ್ರ ದೋಷ ಇದೆ ಎಂದು ಅರ್ಥ. ಅದಕ್ಕಾಗಿ ಒಂದು ಸಣ್ಣ ಬೆಳ್ಳಿಯ(SIlver) ಮೀನನ್ನು ತಯಾರಿಸಿ ಅದನ್ನು ದಿಂಬಿನ ಕೆಳಗೆ ಇರಿಸಿ. ಇದಲ್ಲದೆ, ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಅದನ್ನು ಹಾಸಿಗೆಯ ಕೆಳಗೆ ಇರಿಸಿ. ಇದರಿಂದ ದೋಷ ನಿವಾರಣೆಯಾಗುತ್ತದೆ.

ಗ್ರಹಗಳ ರಾಶಿ ಬದಲಾವಣೆ ರಾಶಿಗಳ ಮೇಲಾಗುತ್ತದೆ. ಪ್ರತಿ ಬಾರಿ ಗ್ರಹಗಳು ರಾಶಿ ಬದಲಿಸಿದಾಗಲೂ ಅದ್ರ ಕಷ್ಟ,ಸುಖವನ್ನು ಆಯಾ ರಾಶಿಯವರು ಅನುಭವಿಸಬೇಕು. 

click me!