ಈ ರಾಶಿಗಳೊಂದಿಗೆ ಫಸ್ಟ್ ನೈಟ್ ಬೆಸ್ಟ್ ಆಗೋದಿಲ್ಲ, ಏಕೆಂದ್ರೆ ಇವ್ರದ್ರಲ್ಲಿ ಹಿಂದೆ..

First Published | Sep 14, 2022, 11:03 AM IST

ಸೆಕ್ಸ್ ಎಂಬುದು ನೈಸರ್ಗಿಕ ವಾಂಛೆಯಾದರೂ ಎಲ್ಲರಿಂದಲೂ ಹಾಸಿಗೆಯಲ್ಲಿ ಬೆಸ್ಟ್ ಆಗಿರುವುದು ಸಾಧ್ಯವಿಲ್ಲ. ಕೆಲವರು ಅನುಭವಿಸದೆಯೇ ಅದರಲ್ಲಿ ಪಳಗಿದ್ದರೆ ಮತ್ತೆ ಕೆಲವರಿಗೆ ಅದರ ಅಆಇಈ ಕೂಡಾ ತಿಳಿದಿರುವುದಿಲ್ಲ. ಈ ಆರು ರಾಶಿಗಳೂ ಹಾಗೆಯೇ, ಅವು ಲೈಂಗಿಕ ಲೈಫ್‌ನಲ್ಲಿ ಕೊಂಚ ಹಿಂದಿನ ಸಾಲಿನ ಹುಡುಗರ ಹಾಗೆ..

ಹಾಸಿಗೆಯಲ್ಲಿ ಸೂಪರ್ ಆಗಿರೋದು ಎಲ್ಲರಿಂದಲೂ ಸಾಧ್ಯವಿಲ್ಲ. ಹೇಗೆ ಒಂದೊಂದು ವಿಷಯದಲ್ಲಿ ಒಬ್ಬೊಬ್ಬರು ಮುಂದಿರುತ್ತಾರೆ, ಇಲ್ಲೂ ಹಾಗೆಯೇ. ಕೆಲವರು ಅನುಭವವಿಲ್ಲದೆಯೂ ಚಾಂಪಿಯನ್ ಆಗಿರುತ್ತಾರೆ. ಆದರೆ, ಕೆಲವರಿಗೆ ತಮ್ಮ ಸಂಗಾತಿಯೊಂದಿಗೆ ತಮಗೇನು ಬೇಕೆಂದೇ ಹೇಳಲು ಬರುವುದಿಲ್ಲ. ಮತ್ತೆ ಕೆಲವರಿಗೆ ಏನು ಮಾಡುವುದೆಂದೇ ತಿಳಿದಿರುವುದಿಲ್ಲ! ಹೌದು, ಜಗತ್ತು ಎಷ್ಟೇ ಮುಂದುವರಿದರೂ ಅಕ್ಕಪಕ್ಕ ಮಲಗಿದ್ರೆ ಮಕ್ಕಳಾಗುತ್ತವೆ ಎಂದು ತಿಳಿದುಕೊಂಡಷ್ಟು ಮುಗ್ಧರು ನಮ್ಮ ನಡುವೆ ಇದ್ದೇ ಇದ್ದಾರೆ. 

ಹೀಗೆ ಹಾಸಿಗೆಯಲ್ಲಿ ಎಲ್ಲರಿಗಿಂತ ಹಿಂದೆ ಬೀಳುವವರು ಸಾಮಾನ್ಯವಾಗಿ ಈ ಆರು ರಾಶಿಗಳಿಗೆ ಸೇರಿರುತ್ತಾರೆ. 

ವೃಷಭ ರಾಶಿ(Taurus)
ವೃಷಭ ರಾಶಿಯವರು ತುಂಬಾ ಪ್ರೀತಿಯಿಂದ ಕೂಡಿರುತ್ತಾರೆ ಮತ್ತು ಅವರು ಉತ್ತಮ ಲೈಂಗಿಕ ಬಯಕೆಯನ್ನೂ ಹೊಂದಿರುತ್ತಾರೆ. ಆದಾಗ್ಯೂ, ಅವರ ವಿಷಯದಲ್ಲಿ ಸಮಸ್ಯೆಯೆಂದರೆ, ಅವರು ಕೆಲವೊಮ್ಮೆ ಫೋರ್‌ಪ್ಲೇ ಮರೆತು ಬಿಡುತ್ತಾರೆ. ರಫ್ ಆ್ಯಂಡ್ ಟಫ್ ಆಗಿರುತ್ತಾರೆ. ಗಡಿಬಿಡಿಯಲ್ಲಿ ಆ ಹೊತ್ತಿನ ಭಾವನಾತ್ಮಕ, ದೈಹಿಕ ಸುಖ ಕಡಿಮೆ ಮಾಡಿಕೊಳ್ಳುತ್ತಾರೆ. ಇದರಿಂದ ಸಂಗಾತಿಗೂ ಕೊಂಚ ನಿರಾಸೆಯಾಗಬಹುದು. 

Tap to resize

ಮಿಥುನ ರಾಶಿ(Gemini)
ಮಾತಿನಲ್ಲಿ ಪ್ರವೀಣರಾದ ಇವರು ಲೈಂಗಿಕ ಬದುಕಿನ ವಿಷಯಕ್ಕೆ ಬಂದಾಗ ಹಿಂದೆ ಬೀಳುತ್ತಾರೆ. ಅವರು ವೈವಿಧ್ಯತೆಯನ್ನು ಪ್ರೀತಿಸುತ್ತಾರೆ. ಸಂಗಾತಿಯೊಂದಿಗಿನ ಖಾಸಗಿ ಸಮಯದಲ್ಲೂ ಇವರಿಗೆ ಮಾತು ಬೇಕು. ಕಡೆಗೆ ಮಾತೇ ಹೆಚ್ಚಾಗಿ ಉಳಿದೆಲ್ಲ ವಿಷಯ ಕಡೆಗಣನೆಯಾಗುವ ಸಂಭವವಿದೆ. 
 

ಕರ್ಕಾಟಕ(Cancer)
ಕರ್ಕಾಟಕ ರಾಶಿಯವರು ಮಾನಸಿಕವಾಗಿ, ಭಾವನಾತ್ಮಕವಾಗಿ, ಪಾಲುದಾರರೊಂದಿಗೆ ನಿಜವಾದ ಸಂಪರ್ಕವನ್ನು ಹೊಂದಿರದ ತನಕ ಅವರಿಂದ ದೈಹಿಕ ಸುಖ ಪಡೆಯಲಾಗಲೀ, ಕೊಡಲಾಗಲೀ ಸಾಧ್ಯವಿಲ್ಲ. ಮಾತು, ಮನಸ್ಸು, ದೇಹ ಎಲ್ಲವೂ ಸಿಂಕ್ ಆಗದಿದ್ದಾಗ ಅವರು ತುಂಬಾ ಅಸಹನೀಯರಾಗುತ್ತಾರೆ ಮತ್ತು ಇದು ಅವರಿಗೆ ಸಮಸ್ಯಾತ್ಮಕವಾಗುತ್ತದೆ. ಅಲ್ಲದೆ, ಅವರಿಗೆ ಸಾಕಷ್ಟು ಅಭದ್ರತೆಗಳು, ಆತಂಕಗಳು ಈ ಸಮಯದಲ್ಲಿ ಅಡ್ಡಿಯಾಗುತ್ತವೆ. ನಿಜಾರ್ಥದಲ್ಲಿ ಅವರು ಅತ್ಯುತ್ತಮ ಪ್ರೇಮಿಯೇ. ಹಾಗೆಂದು ಸಂಗಾತಿ ಬಯಸಿದಾಗೆಲ್ಲ ಅವರಿಂದ ಬೆಸ್ಟ್ ಟೈಂ ಕೊಡೋದು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿ ಬಾರಿಯೂ ಭಾವನಾತ್ಮಕವಾಗಿ ಪಳಗಿ ಸಜ್ಜಾಗಬೇಕು. 

ತುಲಾ ರಾಶಿ(Libra)
ತುಲಾ ರಾಶಿಯವರು ತುಂಬಾ ರೋಮ್ಯಾಂಟಿಕ್. ಆದರೆ ಲೈಂಗಿಕತೆಯ ವಿಷಯಕ್ಕೆ ಬಂದಾಗ, ಅವರು ಆಶ್ಚರ್ಯಕರವಾಗಿ, ಹೆಚ್ಚು ಲೈಂಗಿಕವಾಗಿರುವುದಿಲ್ಲ. ಮುಜುಗರ, ಭಾವುಕತೆಗಳು ಅವರಿಗೆ ಕೊಂಚ ಅಡ್ಡಿಯಾಗಬಹುದು. 

ಕುಂಭ ರಾಶಿ(Aquarius)
ಕುಂಭ ರಾಶಿಯವರು ತುಂಬಾ ಸೃಜನಶೀಲರು. ಆದರೆ, ಹಾಸಿಗೆಯ ವಿಷಯಕ್ಕೆ ಬಂದಾಗ ಅವರು ತುಂಬಾ ಮುಗ್ಧರಾಗಿರಬಹುದು. ಅವರಿಗೆ ಆರಂಭದಿಂದ ಸಂಗಾತಿಯೇ ಪಾಠ ಮಾಡಬೇಕಾಗುತ್ತದೆ. ಕಡೆಗೆ ಎಲ್ಲ ಕಲಿತ ಮೇಲೂ ಅವರು ಬಲು ಬೇಗ ಏಕತಾನತೆ ಅನುಭವಿಸಬಹುದು. ಇಲ್ಲಿ ಕೂಡಾ ಸೃಜನಶೀಲ ಸಂಗತಿಗಳನ್ನು ಬಯಸುವವರು ಅವರು. ಅದು ಕಾಣಿಸದಿದ್ದರೆ ಆಸಕ್ತಿ ಕಳೆದುಕೊಳ್ಳುತ್ತಾರೆ. 

ಮೀನ ರಾಶಿ(Pisces)
ಅವರು ಸದಾ ಹಗಲುಗನಸು ಕಾಣುವವರು. ಕನಸಿನ ಲೋಕದಲ್ಲಿರುವವರು. ಅವರ ಈ ಕನಸಿನ ಸ್ವಭಾವವು ಕೆಲವೊಮ್ಮೆ ಹಾಸಿಗೆಯಲ್ಲಿ ಅವರಿಗೆ ಶತ್ರುವಾಗಿದೆ. ಅವರ ತಂತ್ರ, ಕೈ, ತುಟಿಗಳ ಚಲನೆ ಮತ್ತು ಲಯವು ಮೊದಲ ಸ್ಥಾನದಲ್ಲಿರುತ್ತದೆ. ಆದಾಗ್ಯೂ, ಸ್ಪರ್ಶದ ಮೇಲೆ ಕೇಂದ್ರೀಕರಿಸುವ ಆಲೋಚನೆಗಳಲ್ಲಿ ಅವರು ತುಂಬಾ ಕಳೆದುಹೋಗುತ್ತಾರೆ. ಮತ್ತು ಮುಂದುವರಿಯುವಲ್ಲಿ ಹಿಂದೆ ಬೀಳುತ್ತಾರೆ. 
 

Latest Videos

click me!