Asianet Suvarna News Asianet Suvarna News

ಬಂಗಾರದ ಮೇಲಿನ ಹೂಡಿಕೆ ಲಾಭದಾಯಕವೇ? ಯಾವಾಗ ಚಿನ್ನದ ಮೇಲೆ ಹೂಡಿಕೆ ಮಾಡ್ಬೇಕು?

ಚಿನ್ನಕ್ಕೂ ಭಾರತೀಯರಿಗೂ ಭಾವನಾತ್ಮಕ ಸಂಬಂಧ. ಹೂಡಿಕೆ ವಿಚಾರದಲ್ಲೂ ಭಾರತೀಯರಿಗೆ ಚಿನ್ನ ಅಚ್ಚುಮೆಚ್ಚು.ಆದ್ರೆ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವೇ? ಈ ಹೂಡಿಕೆ ಸುರಕ್ಷಿತವೇ? ಯಾವ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬೇಕು? ಇಲ್ಲಿದೆ ಮಾಹಿತಿ. 

Gold prices have fallen should you invest What should be your strategy
Author
First Published Sep 14, 2022, 3:53 PM IST

Business Desk: ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ಭಾರತೀಯರ ಮನದಲ್ಲಿ ಹಿಂದಿನಿಂದಲೂ ಬೇರೂರಿದೆ.ಇದೇ ಕಾರಣಕ್ಕೆ ಇಂದಿಗೂ ಭಾರತದಲ್ಲಿ ಚಿನ್ನ ಹೂಡಿಕೆಯ ನೆಚ್ಚಿನ ಆಯ್ಕೆಗಳಲ್ಲಿ ಒಂದು. 2020ರಲ್ಲಿ ಕೊರೋನಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಚಿನ್ನದ ಬೆಲೆಯಲ್ಲಿಭಾರೀ ಹೆಚ್ಚಳ ಕಂಡುಬಂದಿತ್ತು. ಆದ್ರೆ ನಂತರದ ದಿನಗಳಲ್ಲಿ ಶೇ.20ರಷ್ಟು ಇಳಿಕೆ ಕಂಡು 2021ರ ಮಾರ್ಚ್ ವೇಳೆಗೆ 10ಗ್ರಾಂ ಚಿನ್ನಕ್ಕೆ 46,000 ರೂ. ಆಗಿತ್ತು. ಕೊರೋನಾದ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿತ್ತು. ಅಲ್ಲದೆ, ನಂತರದ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧ ಕೂಡ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿತ್ತು. ಪ್ರಸ್ತುತ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ದರವಾಗಿದ್ದ 10ಗ್ರಾಂಗೆ 57,000ರೂ.ಗಿಂತ ಶೇ.10ರಷ್ಟು ಇಳಿಕೆಯಾಗಿದೆ. ಕಳೆದ ಎರಡು ವರ್ಷಗಳಿಂದ ಚಿನ್ನದ ಬೆಲೆಯಲ್ಲಿನ ಹೆಚ್ಚಳ, ಅನಿಶ್ಚಿತ ಅವಧಿಯಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಸೂಕ್ತ ಎಂಬುದರ ಸೂಚಕವಾಗಿದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿನ ಏರಿಕೆ ಹಾಗೂ ಹಣದುಬ್ಬರ ಹೆಚ್ಚಳ ತಡೆಗೆ ಕೇಂದ್ರ ಬ್ಯಾಂಕ್ ಕೈಗೊಂಡ ಕ್ರಮಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ, ಗಮನಾರ್ಹ ಇಳಿಕೆಯಂತೂ ಆಗಿಲ್ಲ. ಹೀಗಿರುವಾಗ ಚಿನ್ನದ ಮೇಲೆ ಹೂಡಿಕೆ ಮಾಡೋದು ಸೂಕ್ತವೇ? 

ನೀವೀಗ ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ?
ಚಿನ್ನ ಅಪತ್ಕಾಲದಲ್ಲಿ ಕೈ ಹಿಡಿಯುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಕೈ ಸುಟ್ಟುಕೊಳ್ಳುವ ಅಪಾಯ ಇತರ ಹೂಡಿಕೆಗಳಿಗಿಂತ ತುಸು ಕಡಿಮೇನೆ. ಹೀಗಿರುವಾಗ ಚಿನ್ನದ ಮೇಲೆ ತಗ್ಗಿರುವಾಗ ಅದರ ಮೇಲೆ ಹೂಡಿಕೆ ಮಾಡೋದ್ರಿಂದ ಮುಂದೆ ಗಳಿಕೆಯಂತೂ ಸಿಕ್ಕೇಸಿಗುತ್ತದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಬಹುತೇಕ ಆರ್ಥಿಕತೆಗಳು ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿವೆ. ಹಣದುಬ್ಬರ ಕೂಡ ಏರು ಮಟ್ಟದಲ್ಲಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಬೇಡಿಕೆಯಿದೆ. ಅದರಲ್ಲೂ ಚಿಕ್ಕ ಅಥವಾ ಮಧ್ಯಮ ಅವಧಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಲಾಭ ಸಿಗುವ ಎಲ್ಲ ಸಾಧ್ಯತೆಯಿದೆ. ಇನ್ನು ಚಿನ್ನದ ಮೇಲೆ ದೀರ್ಘಾವಧಿಗೆ ದೊಡ್ಡ ಹೂಡಿಕೆ ಮಾಡುವ ಬದಲು ಸಣ್ಣ ಮೊತ್ತದ ಹೂಡಿಕೆ ಉತ್ತಮ. ಇದ್ರಿಂದ ಅಪಾಯ ಕಡಿಮೆ.

10 ಸಾವಿರಕ್ಕಿಂತಲೂ ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದು ಈ ಬ್ಯುಸಿನೆಸ್

ನಿಮ್ಮ ಪ್ಲ್ಯಾನಿಂಗ್ ಹೇಗಿರಬೇಕು?
ಚಿನ್ನದ ಮೇಲೆ ಹೂಡಿಕೆ ಮಾಡುವಾಗ ಕೆಲವೊಂದು ಹೂಡಿಕೆ ತಂತ್ರಗಳನ್ನು ಅನುಸರಿಸೋದು ಅಗತ್ಯ. ಅಂಥ ಕೆಲವು ತಂತ್ರಗಳ ಮಾಹಿತಿ ಇಲ್ಲಿದೆ.
1.ಸಂಪತ್ತಿನ ಹಂಚಿಕೆ
ಯಾವಾಗಲೂ ಹೂಡಿಕೆ ಏಕಮುಖವಾಗಿರಬಾರದು. ಅಂದ್ರೆ ನೀವು ಒಂದೇ ಕಡೆ ಹೂಡಿಕೆ ಮಾಡಿದ್ರೆ ಅಪಾಯವೂ ಜಾಸ್ತಿ ಜೊತೆಗೆ ಹೆಚ್ಚಿನ ಲಾಭ ಸಿಗದೆ ಹೋಗಬಹುದು. ಇದು ಚಿನ್ನದ ಮೇಲಿನ ಹೂಡಿಕೆಗೆ ಕೂಡ ಅನ್ವಯಿಸುತ್ತದೆ. ನಿಮ್ಮ ಒಟ್ಟು ಹೂಡಿಕೆ ಖಾತೆಯಲ್ಲಿ ಶೇ.10ರಷ್ಟನ್ನು ಮಾತ್ರ ಚಿನ್ನಕ್ಕೆ ಮೀಸಲಿಡಬೇಕು. ಇನ್ನು ನೀವು ಹೂಡಿಕೆಯಲ್ಲಿ ಅಪಾಯ ತೆಗೆದುಕೊಳ್ಳಲು ಇಚ್ಛಿಸೋದೇ ಇಲ್ಲ ಅಂತಾದ್ರೆ ಶೇ.15ರ ತನಕ ಹೂಡಿಕೆ ಮಾಡಬಹುದು. ಯಾವುದೇ ಕಾರಣಕ್ಕೂ ಚಿನ್ನದ ಮೇಲೆ ಇದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬೇಡಿ. ಒಂದು ವೇಳೆ ಮಾಡಿದ್ರೆ ಅದು ನಿಮ್ಮ ಸಂಪತ್ತು ಸೃಷ್ಟಿಸುವ ಮಾರ್ಗದಲ್ಲಿ ಅಡೆತಡೆ ಉಂಟುಮಾಡಬಹುದು. ಅಲ್ಲದೆ, ಇನ್ಯಾವುದೋ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಅವಕಾಶದಿಂದ ನೀವು ವಂಚಿತರಾಗಬಹುದು.

2.ಭೌತಿಕ ಚಿನ್ನ ಖರೀದಿಯನ್ನು ಆದಷ್ಟು ನಿರ್ಲಕ್ಷಿಸಿ
ಚಿನ್ನಾಭರಣಗಳು ಅಥವಾ ಬಂಗಾರದ ಇನ್ಯಾವುದೋ ವಸ್ತುಗಳನ್ನು ಖರೀದಿಸಲೇಬೇಕಾದ ಅನಿವಾರ್ಯತೆಯಿದ್ದಾಗ ಮಾತ್ರ ಖರೀದಿಸಿ. ಹೂಡಿಕೆಯ ಉದ್ದೇಶದಿಂದ  ನಾಣ್ಯಗಳು, ಬಾರ್ ಗಳು ಅಥವಾ ಬಿಸ್ಕೆಟ್ ಗಳಂತಹ ಭೌತಿಕ ಚಿನ್ನ  ಖರೀದಿಸಬೇಡಿ. ಈ ಭೌತಿಕ ಚಿನ್ನ ಕಳವಾಗುವ ಭಯವಿರೋದು ಮಾತ್ರವಲ್ಲ, ಇವುಗಳನ್ನು ಸಂರಕ್ಷಿಸೋದು ಕೂಡ ಕಷ್ಟ. ಒಂದು ವೇಳೆ ನೀವು ಭೌತಿಕ ಚಿನ್ನ ಖರೀದಿಸಿದ್ರೆ ಅದರ ಬಿಲ್ ಗಳು ಹಾಗೂ ಸ್ವೀಕೃತಿಗಳನ್ನು ಹಾಗೆಯೇ ಇಟ್ಟುಕೊಳ್ಳಿ.

ಒಂದು ಕೋಟಿ ಮೌಲ್ಯದ ಫ್ಲ್ಯಾಟ್ ಖರೀದಿಸಿ, ತಿಂಗಳಿಗೆ 80ಸಾವಿರ ಇಎಂಐ ಕಟ್ಟೋದ್ರಿಂದ ಏನಾದ್ರೂ ಲಾಭವಿದೆಯಾ?

3.ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡಿ
ಇಂದು ಚಿನ್ನದ ಮೇಲಿನ ಹೂಡಿಕೆಗೆ ಹತ್ತಾರು ಮಾರ್ಗಗಳಿವೆ. ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್ ಎಸ್ (Gold ETFs), ಗೋಲ್ಡ್ ಫಂಡ್ಸ್ (Gold Funds) ಹಾಗೂ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ (SGB) ಹೂಡಿಕೆ (Invest) ಮಾಡಬಹುದು. ಈ ಹೂಡಿಕೆಗಳು ಭೌತಿಕ ಚಿನ್ನದ (physical gold) ಮೇಲಿನ ಹೂಡಿಕೆಯಷ್ಟೇ ಲಾಭ ತಂದುಕೊಡುತ್ತವೆ. ಆದರೆ, ಭೌತಿಕ ರೂಪದಲ್ಲಿ ಮಾತ್ರ ಇರೋದಿಲ್ಲ. 
 

Follow Us:
Download App:
  • android
  • ios