ಪಥ ಬದಲಾಯಿಸುತ್ತಿದ್ದಾನೆ ಶನಿ : ನಿಮ್ಮ ರಾಶಿಗೇನಾದರೂ ಒಲಿಯುತ್ತಾ ಲಕ್?

First Published Sep 13, 2022, 5:24 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿಯನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತೆ. ಶನಿಯ ದರ್ಶನವು ಮಂಗಳಕರವಾಗಿದ್ದರೆ, ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಮತ್ತು ಯಶಸ್ಸನ್ನು ಪಡೆಯುತ್ತಾನೆ ಎನ್ನಲಾಗುತ್ತೆ. ಅಕ್ಟೋಬರ್ 23, 2022 ರಿಂದ, ಶನಿಯು ಮಕರ ರಾಶಿಯಲ್ಲಿ ಚಲಿಸಲು ಪ್ರಾರಂಭಿಸುತ್ತಾನೆ. ಶನಿಯ ಮಾರ್ಗ ಬದಲಾವಣೆಯಿಂದ, ಸಮಯ ಕೆಲವು ಜನರಿಗೆ ತುಂಬಾ ಸವಾಲಿನದ್ದಾಗಿರುತ್ತೆ, ಆದರೆ ಕೆಲವು ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಕಾಣಬಹುದು. ಹಾಗಿದ್ರೆ ಬನ್ನಿ ಶನಿಯ ಮಾರ್ಗದಿಂದಾಗಿ ಯಾವ ರಾಶಿಗೆ ಒಳಿತಾಗುತ್ತೆ ತಿಳಿಯೋಣ.

ಮೇಷ ರಾಶಿಯವರ(Aries) ಮೇಲೆ ಶನಿಯ ಪರಿಣಾಮ

ಶನಿ ಮೇಷ ರಾಶಿಯ ಹತ್ತನೇ ಮನೆಯಲ್ಲಿ ಕುಳಿತಿದ್ದಾನೆ ಮತ್ತು ಅಕ್ಟೋಬರ್ 23 ರಿಂದ ಚಲಿಸಲು ಪ್ರಾರಂಭಿಸುತ್ತಾನೆ. ಶನಿಯ ಮಾರ್ಗ ವೃತ್ತಿ ಕ್ಷೇತ್ರದಲ್ಲಿ (Career) ಪ್ರಗತಿಯನ್ನು ನೀಡುತ್ತೆ. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶಗಳನ್ನು ನೀವು ಪಡೆಯಬಹುದು. ಹಣದ ಲಾಭವೂ ಆಗುತ್ತೆ. ಈ ರಾಶಿಯ ಉದ್ಯಮಿಗಳು ಈ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತೆ, ಆಗ ಮಾತ್ರ ಯಶಸ್ಸನ್ನು ಸಾಧಿಸಬಹುದು.  

ಕರ್ಕಾಟಕ ರಾಶಿಯ(Cancer) ಮೇಲೆ ಶನಿಯ ಪ್ರಭಾವ

ಶನಿ ಕರ್ಕಾಟಕ ರಾಶಿಯ ಏಳನೇ ಮನೆಯಲ್ಲಿರುತ್ತಾನೆ, ಅಕ್ಟೋಬರ್ 23 ರ ನಂತರ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ವ್ಯವಹಾರದಲ್ಲಿ ಬರುತ್ತಿದ್ದ ಸಮಸ್ಯೆಗಳಿಗೆ ನೀವು ಸರಿಯಾದ ಪರಿಹಾರ ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ (Married LIfe) ಸಮಸ್ಯೆಗಳಿದ್ದರೆ, ಅವುಗಳು ಸಹ ನಿವಾರಣೆಯಾಗುತ್ತೆ.  

ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದವರು ಸಹ ಈ ಅವಧಿಯಲ್ಲಿ ಸರಿಯಾದ ಫಲಿತಾಂಶಗಳನ್ನು ಪಡೆಯಬಹುದು. ಆರೋಗ್ಯದಲ್ಲಿಯೂ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನೀವು ಕೆಲಸದಲ್ಲಿ  ಬಡ್ತಿ(Promotion) ಬಯಸುತ್ತಿದ್ದರೆ, ನಿಮ್ಮ ಆಸೆ ಈಡೇರುತ್ತೆ. ಕುಟುಂಬ ಜೀವನದ ಈ ಸಮಯದಲ್ಲಿ, ನೀವು ಹಿರಿಯರ ಬೆಂಬಲ ಪಡೆಯುತ್ತೀರಿ .

ತುಲಾ ರಾಶಿಯ(Libra) ಮೇಲೆ ಶನಿಯ ಪ್ರಭಾವ

ತುಲಾ ರಾಶಿಯ ಜನರು ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ, ಆದರೆ ಇದರ ಹೊರತಾಗಿಯೂ, ಶನಿಯ ಮಾರ್ಗವು ನಿಮಗೆ ಅನೇಕ ರೀತಿಯಲ್ಲಿ ಮಂಗಳಕರವಾಗಿದೆ. ಶನಿಯು ತನ್ನ ದಾರಿಯಲ್ಲಿ ಸಾಗಿದ ನಂತರ ನಿಮ್ಮ ಜೀವನದಲ್ಲಿ ನಡೆಯುತ್ತಿದ್ದ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತೆ.

ಈ ಹಿಂದೆ ಮಾಡಿದ ಹೂಡಿಕೆಗಳಿಂದ ಕೆಲವು ಜನರು ಪ್ರಯೋಜನ ಪಡೆಯುವ ಸಾಧ್ಯತೆಯಿದೆ.  ಮಾನಸಿಕ ಚಿಂತೆಗಳು ಸಹ ದೂರವಾಗುತ್ತೆ. ಈ ಸಮಯದಲ್ಲಿ, ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಸಹ ಪೂರ್ಣಗೊಳಿಸಬಹುದು. ನೀವು ಆರೋಗ್ಯದಲ್ಲಿ (Health) ಉತ್ತಮ ಬದಲಾವಣೆಗಳನ್ನು ಸಹ ನೋಡಬಹುದು.

ವೃಶ್ಚಿಕ ರಾಶಿಯ(Scorpio)

ಶನಿ ಆಗಮನದ ನಂತರ, ವೃಶ್ಚಿಕ ರಾಶಿ ಜನರ ವಿಶ್ವಾಸ ಹೆಚ್ಚಾಗುತ್ತೆ. ಈ ರಾಶಿಯ ಜನರು ಈ ಸಮಯದಲ್ಲಿ ಭೂಮಿ, ಕಟ್ಟಡ ಅಥವಾ ವಾಹನದ ಖರೀದಿ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ. ಈ ರಾಶಿಯ ಜನರು ಹೊಸ ಆದಾಯವನ್ನು ಪಡೆಯುತ್ತಾರೆ. 

ಸಂಪತ್ತು(Wealth) ಸಹ ಹೆಚ್ಚಳವನ್ನು ಕಾಣುತ್ತೆ. ಕುಟುಂಬ ಜೀವನದಲ್ಲಿ, ಕೆಲವು ಕಾರಣಗಳಿಗಾಗಿ ಕಿರಿಯ ಒಡಹುಟ್ಟಿದವರೊಂದಿಗೆ ಬಿರುಕಿದ್ದರೆ, ಅದನ್ನು ಈ ಸಮಯದಲ್ಲಿ ನಿವಾರಿಸಬಹುದು. ಸೈನ್ಯ, ಪೊಲೀಸ್ ಇತ್ಯಾದಿಗಳಲ್ಲಿ ಇರುವ ವೃಶ್ಚಿಕ ರಾಶಿಯ ಜನರು ಈ ಸಮಯದಲ್ಲಿ ಕೆಲವು ಸಾಧನೆಗಳನ್ನು ಸಾಧಿಸುತ್ತಾರೆ.

ಮೀನ ರಾಶಿ

ಶನಿ ಪ್ರಭಾವ ಮೀನ ರಾಶಿಯ ಜನರಿಗೆ ಮಂಗಳಕರವೆಂದು ಹೇಳಬಹುದು. ಏಕೆಂದರೆ ಶನಿ ಶುಭ ಮನೆಯಲ್ಲಿರುತ್ತಾನೆ ಮತ್ತು ಈ ಸಮಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ಪ್ರಯೋಜನ ಪಡೆಯಬಹುದು. ನೀವು ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಲು ಸಾಧ್ಯವಾಗುತ್ತೆ ಮತ್ತು ಇದು ಭವಿಷ್ಯದಲ್ಲಿ ನಿಮಗೆ ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತೆ.

ಈ ರಾಶಿಯ ಜನರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ಮೀನ ರಾಶಿಯವರು ತಮ್ಮಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಈ ಸಮಯದಲ್ಲಿ ಯೋಗ-ಧ್ಯಾನವನ್ನು(Yoga) ಮಾಡೋದು ಒಳ್ಳೇದು. ಕೆಲವು ಜನರು ತೀರ್ಥಯಾತ್ರೆಗೆ ಹೋಗುವ ಅವಕಾಶವನ್ನು ಸಹ ಪಡೆಯಬಹುದು. ಕುಟುಂಬ ಜೀವನದಲ್ಲಿ ಸಮಸ್ಯೆಗಳು ನಡೆಯುತ್ತಿದ್ದರೆ, ಸಮಸ್ಯೆಗಳನ್ನು ನಿವಾರಿಸಲು ನೀವು ಮನೆಯ ಜನರೊಂದಿಗೆ ಮಾತುಕತೆ ನಡೆಸುವುದನ್ನು ಕಾಣಬಹುದು, ಮತ್ತು ನೀವು ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಯಶಸ್ವಿಯಾಗುತ್ತೀರಿ.
 

click me!