ದೀಪಾವಳಿಯಂದು ಲಕ್ಷ್ಮೀ ಕೃಪೆಗಾಗಿ ಯಾವ ರಾಶಿಯವರು ಏನು ಮಾಡಬೇಕು? ಹೀಗೆ ಮಾಡಿದ್ರೆ ಹಣದ ಸಮಸ್ಯೆ ಇರಲ್ಲ

Published : Oct 18, 2025, 06:34 PM IST

ಈ ಬಾರಿಯ ದೀಪಾವಳಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ನಿರ್ದಿಷ್ಟ ಜ್ಯೋತಿಷ್ಯ ಪರಿಹಾರಗಳನ್ನು ಮಾಡುವುದರಿಂದ ಅದೃಷ್ಟವನ್ನು ಪಡೆಯಬಹುದು. ಪ್ರತಿಯೊಂದು ರಾಶಿಯವರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಯಾವ ವಿಶೇಷ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ವಿವರಿಸುತ್ತದೆ.

PREV
113
ಜ್ಯೋತಿಷ್ಯ ಪರಿಹಾರ

ಈ ಬಾರಿ ದೀಪಾವಳಿ ಅಕ್ಟೋಬರ್ 20, ಸೋಮವಾರ ಬಂದಿದೆ. ಈ ದಿನ ರಾಶಿ ಪ್ರಕಾರ ಕೆಲವೊಂದು ವಿಶೇಷ ಪರಿಹಾರಗಳನ್ನು ಮಾಡಿದರೆ ಅದೃಷ್ಟ ಒಲಿಯುತ್ತದೆ. ಇದರಿಂದ ಲಕ್ಷ್ಮಿ ದೇವಿಯ ಕೃಪೆಯೂ ನಿಮ್ಮ ಮೇಲೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ ರಾಶಿಯವರು ಏನು ಮಾಡಬೇಕು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

213
ಮೇಷ ರಾಶಿ

ದೀಪಾವಳಿಯ ರಾತ್ರಿ ಮೇಷ ರಾಶಿಯವರು ಬಿಳಿ ಬಟ್ಟೆಯಲ್ಲಿ ಸ್ವಲ್ಪ ಚಂದನ ಮತ್ತು ಕೇಸರಿ ಕಟ್ಟಿ ತಮ್ಮ ತಿಜೋರಿ ಅಥವಾ ಗಲ್ಲಾಪೆಟ್ಟಿಗೆ ಅಥವಾ ಹಣ ಇರಿಸುವ ಸ್ಥಳದಲ್ಲಿ ಇಡಬೇಕು. ಹೀಗೆ ಮಡೋದರಿಂದ ಹಣದ ಕೊರತೆ ಇರುವುದಿಲ್ಲ. ಈ ಎರಡು ವಸ್ತುಗಳು ಪಾಸಿಟಿವ್ ಎನರ್ಜಿಯನ್ನು ಹೊಂದಿರುತ್ತವೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಈ ಪರಿಹಾರ ಮಾಡಿಕೊಳ್ಳೋದು ಉತ್ತಮವಾಗಿದೆ.

313
ವೃಷಭ ರಾಶಿ

ವೃಷಭ ರಾಶಿಯವರು ದೀಪಾವಳಿಯಂದು ಲಕ್ಷ್ಮಿ ದೇವಿಗೆ ಕಮಲದ ಹೂವನ್ನು ಅರ್ಪಿಸಿ, ಜೊತೆಗೆ ಪಾಯಸವನ್ನು ನೈವೇದ್ಯ ಮಾಡಿ. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಪೂಜೆಯ ಸಮಯದಲ್ಲಿ ಕಮಲ ಅರ್ಪಿಸೋದರಿಂದ ಒಳ್ಳೆಯದಾಗುತ್ತದೆ. ಕಮಲದ ಮೇಲೆ ಆಸೀನಳಾಗಿರುವುದು ಲಕ್ಷ್ಮಿಯ ದೈವಿಕ ಶಕ್ತಿ ಮತ್ತು ಆಕೆಯ ಶ್ರೇಷ್ಠತೆಯನ್ನು ಸೂಚಿಸುತ್ತದೆ.

413
ಮಿಥುನ ರಾಶಿ

ಮಿಥುನ ರಾಶಿಯವರು ದೀಪಾವಳಿ ಹಬ್ಬದಂದು ದಕ್ಷಿಣಾವರ್ತಿ ಶಂಖದಲ್ಲಿ ನೀರು ತೆಗೆದುಕೊಂಡು ಲಕ್ಷ್ಮಿ ದೇವಿಯ ಪ್ರತಿಮೆಗೆ ಅಭಿಷೇಕ ಮಾಡಬೇಕು. ಈ ಸಮಯದಲ್ಲಿ ಲಕ್ಷ್ಮಿ ಮಂತ್ರವನ್ನು ಜಪಿಸಿ. ಶೀಘ್ರದಲ್ಲೇ ಧನಲಾಭದ ಯೋಗಗಳು ಉಂಟಾಗುತ್ತವೆ. ಹೀಗೆ ಮಾಡೋದರಿಂದ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ.

513
ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ದೀಪಾವಳಿಯ ರಾತ್ರಿ 12 ಗಂಟೆಯ ನಂತರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ಚೌಮುಖ ದೀಪವನ್ನು ಹಚ್ಚಿ ಮತ್ತು ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಿ. ಇದರಿಂದ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ. ಇದು ಅದೃಷ್ಟ, ಸೌಕರ್ಯ ಮತ್ತು ಆನಂದವನ್ನು ಸಂಕೇತಿಸುತ್ತದೆ.

613
ಸಿಂಹ ರಾಶಿ

ಸಿಂಹ ರಾಶಿಯವರು ದೀಪಾವಳಿಯ ಸಂಜೆ ಮನೆಯ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ದೀಪಗಳನ್ನು ಹಚ್ಚಬೇಕು. ಅದರಲ್ಲಿ ಕಪ್ಪು ಎಳ್ಳನ್ನು ಹಾಕಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿದು ಅದೃಷ್ಟದ ಬೆಂಬಲ ಸಿಗುತ್ತದೆ. ಈ ದೀಪಗಳು ಮನೆಯಲ್ಲಿ ಅದೃಷ್ಟದ ಬೆಳಕು ಹರಿಸುತ್ತವೆ.

713
ಕನ್ಯಾ ರಾಶಿ

ದೀಪಾವಳಿಯಂದು ಕಮಲ ಬೀಜದ ಮಾಲೆಯನ್ನು ಮಹಾಲಕ್ಷ್ಮಿ ದೇವಿಗೆ ಅರ್ಪಿಸಿ. ನಂತರ ಈ ಮಾಲೆಯನ್ನು ಯೋಗ್ಯ ಬ್ರಾಹ್ಮಣರಿಗೆ ದಾನ ಮಾಡಿ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ. ಕಮಲ ಲಕ್ಷ್ಮಿಯ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ.

813
ತುಲಾ ರಾಶಿ

ತುಲಾ ರಾಶಿಯವರು ದೀಪಾವಳಿಯಂದು ಅರಳಿ ಎಲೆಯ ಮೇಲೆ ಕೇಸರಿಯಿಂದ 'ಶ್ರೀಂ ಶ್ರಿಯೈ ನಮಃ' ಎಂದು ಬರೆದು ಅದನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಈ ಪರಿಹಾರದಿಂದ ಶೀಘ್ರದಲ್ಲೇ ಅವರ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ. ವ್ಯಾಪಾರಿಗಳಾಗಿದ್ರೆ ಗಲ್ಲಾಪೆಟ್ಟಿಗೆಯಲ್ಲಿ ಇರಿಸಿ.

913
ವೃಶ್ಚಿಕ ರಾಶಿ

ಈ ರಾಶಿಯವರು ದೀಪಾವಳಿಯಂದು ಲಕ್ಷ್ಮಿ ದೇವಿಗೆ ಸೌಭಾಗ್ಯದ ವಸ್ತುಗಳಾದ ಕೆಂಪು ದುಪ್ಪಟ, ಬಳೆ, ಕಾಲುಂಗುರ ಇತ್ಯಾದಿಗಳನ್ನು ಅರ್ಪಿಸಬೇಕು. ನಂತರ ಇವುಗಳನ್ನು ಸುಮಂಗಲಿಗೆ ದಾನ ಮಾಡಿ. ಇದರಿಂದ ಅವರ ಜೀವನ ಸಂತೋಷಮಯವಾಗಿರುತ್ತದೆ. ಸುಮಂಗಲಿಯರ ಆಶೀರ್ವಾದ ಸಕಾರತ್ಮಕತೆಯನ್ನು ಪಸರಿಸುತ್ತದೆ.

1013
ಧನು ರಾಶಿ

ಈ ರಾಶಿಯವರು ದೀಪಾವಳಿಯಂದು ಲಕ್ಷ್ಮಿ ದೇವಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೈವೇದ್ಯ ಮಾಡಬೇಕು. ಇದರಿಂದ ಅವರ ಸಮಸ್ಯೆಗಳು ಕೊನೆಗೊಂಡು ಎಲ್ಲಾ ರೀತಿಯ ಸುಖಗಳು ಅವರಿಗೆ ಲಭಿಸುತ್ತವೆ.

1113
ಮಕರ ರಾಶಿ

ಮಕರ ರಾಶಿಯವರು ದೀಪಾವಳಿಯ ರಾತ್ರಿ 12 ಗಂಟೆಯ ನಂತರ ಲಕ್ಷ್ಮಿ ದೇವಿಯ ಪ್ರತಿಮೆಯ ಮುಂದೆ ಕುಳಿತು ಕನಕಧಾರಾ ಸ್ತೋತ್ರವನ್ನು ಪಠಿಸಬೇಕು. ಇದರಿಂದ ಅವರ ಬಡತನ ದೂರವಾಗಬಹುದು. ಆರ್ಥಿಕ ಸ್ಥಿರತೆ ಕಾಣಲು ಈ ಸ್ತೋತ್ರ ಪಠಣೆ ಮಾಡಲಾಗುತ್ತ

1213
ಕುಂಭ ರಾಶಿ

ಕುಂಭ ರಾಶಿಯವರು ದೀಪಾವಳಿಯ ರಾತ್ರಿ ಕಮಲ ಬೀಜದ ಮಾಲೆಯಿಂದ 'ಓಂ ಹ್ರೀಂ ಐಂ ಕ್ಲೀಂ ಶ್ರೀಂ' ಮಂತ್ರವನ್ನು ಜಪಿಸಬೇಕು. ಇದರಿಂದ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಲಕ್ಷ್ಮೀ ದೇವಿ ಕಮಲದ ಮೇಲೆ ಆಸೀನರಾಗಿರೋ ಕಾರಣ ತಾಯಿಯ ಕೃಪೆ ಸಿಗುತ್ತದೆ.

ಇದನ್ನೂ ಓದಿ:  100 ವರ್ಷಗಳ ನಂತ್ರ ದೀಪಾವಳಿ ದಿನದಂದೇ 'ಧನ ರಾಜಯೋಗ' ರಚನೆ: 3 ರಾಶಿಗೆ ಹಣ ಆದಾಯ ಹೆಚ್ಚಳ

1313
ಮೀನ ರಾಶಿ

ಈ ರಾಶಿಯವರು ದೀಪಾವಳಿಯಂದು ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು ಮತ್ತು ಲಕ್ಷ್ಮಿ ದೇವಿಗೆ ಹಳದಿ ಹೂವಿನ ಮಾಲೆಯನ್ನು ಅರ್ಪಿಸಬೇಕು. ಇದರಿಂದ ಅವರ ಜೀವನದಲ್ಲಿ ಸೌಭಾಗ್ಯ ಉಳಿದು, ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: ವಾರದ ಭವಿಷ್ಯ; ಹಂಸ ರಾಜಯೋಗದಿಂದ ಬೆಳಗಲಿದೆ 5 ರಾಶಿಗಳ ಅದೃಷ್ಟ, ಸಂಸಾರದಲ್ಲಿ ಸುಖ, ಸಂಪತ್ತು

Read more Photos on
click me!

Recommended Stories