100 ವರ್ಷಗಳ ನಂತ್ರ ದೀಪಾವಳಿ ದಿನದಂದೇ 'ಧನ ರಾಜಯೋಗ' ರಚನೆ: 3 ರಾಶಿಗೆ ಹಣ ಆದಾಯ ಹೆಚ್ಚಳ

Published : Oct 18, 2025, 03:43 PM IST

ಶನಿದೇವರು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, 100 ವರ್ಷಗಳ ನಂತರ ದೀಪಾವಳಿಗೆ 'ಧನ ರಾಜ ಯೋಗ' ಎಂಬ ವಿಶೇಷ ಯೋಗವನ್ನು ರೂಪಿಸುತ್ತಿದ್ದಾರೆ. ಈ ಯೋಗದಿಂದಾಗಿ ಅಪಾರ ಹಣ, ಆದಾಯ ಹೆಚ್ಚಳ ಮತ್ತು ಆಸ್ತಿ ಖರೀದಿಯಂತಹ ಶುಭ ಫಲಗಳು ದೊರೆಯಲಿವೆ.

PREV
15
ದೀಪಾವಳಿಗೆ ರಾಜಯೋಗ

ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಕರ್ಮಗಳಿಗೆ ಶನಿ ಫಲ ನೀಡುವ ದೇವರು ಶನಿ. ಸದ್ಯ ಶನಿದೇವರು ಮೀನ ರಾಶಿಯ ವಕ್ರ ಸ್ಥಾನದಲ್ಲಿ ಸಂಚರಿಸುತ್ತಿದ್ದು, 2027ರವರೆಗೆ ಮೀನರಾಶಿಯಲ್ಲಿರಲಿದ್ದಾನೆ. ಈ ವೇಳೆ ಕೆಲವು ಗ್ರಹಗಳೊಂದಿಗೆ ಸೇರುವುದರಿಂದ ವಿಶೇಷ ಸಂಯೋಗ ರಚನೆಯಾಗುತ್ತದೆ. ಈ ರಚನೆಯು ಕೆಲವು ರಾಶಿಗಳಿಗೆ ಧನಾತ್ಮಕ ಲಾಭವನ್ನು ನೀಡಲಿವೆ.

25
100 ವರ್ಷಗಳ ನಂತರ ಧನ ರಾಜ ಯೋಗ

ಮೀನ ರಾಶಿಯಲ್ಲಿ ಶನಿ ಸಂಚಾರದಿಂದ ವಿಶೇಷ ಯೋಗಗಳು ರೂಪಗೊಳ್ಳುತ್ತವೆ. 100 ವರ್ಷಗಳ ನಂತರ ದೀಪಾವಳಿ ಹಬ್ಬಕ್ಕೆ ಅಪರೂಪದ ಯೋಗ ರೂಪಗೊಳ್ಳಲಿದೆ. ಶನಿದೇವ ರಚಿಸುವ ಯೋಗವನ್ನು 'ಧನ ರಾಜ ಯೋಗ' ಎಂದು ಕರೆಯಲಾಗುತ್ತದೆ. ಈ ಧನ ರಾಜಯೋಗ ಕೆಲವು ರಾಶಿಚಕ್ರದವರಿಗೆ ಅಪಾರ ಹಣವನ್ನು ಒದಗಿಸುತ್ತದೆ. ಆ ರಾಶಿ ಚಕ್ರಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

35
ವೃಷಭ ರಾಶಿ

ದೀಪಾವಳಿಗೆ ಶನಿದೇವರಿಂದ ರಚನೆಯಾದ ಸಂಪತ್ತು ಯೋಗ ಈ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರಿಗೆ ಶನಿದೇವರು ಲಾಭದಾಯಕ ಸ್ಥಾನದಲ್ಲಿದ್ದು, ಇದರಿಂದಾಗಿ ಆದಾಯ ಹೆಚ್ಚಳವಾಗುತ್ತದೆ. ವ್ಯವಹಾರದಲ್ಲಿ ಶತ್ರು ಸ್ಪರ್ಧಿಗಳ ವಿರುದ್ದ ಗೆಲವು ನಿಮಗೆ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಳ, ಹಳೆ ಹೂಡಿಕೆಗಳಿಂದ ಲಾಭ, ಚಿನ್ನ ಮತ್ತು ಭೂಮಿ ಖರೀದಿಸುವ ಸಾಧ್ಯತೆಗಳಿವೆ.

45
ಮಕರ ರಾಶಿ

ಶನಿಯ ಧನ ರಾಜಯೋಗದಿಂದ ಉತ್ತಮ ಫಲಿತಾಂಶಗಳು ದೊರೆಯಲಿವೆ. ಮಕರ ರಾಶಿಯ ಮೂರನೇ ಮನೆಯಲ್ಲಿ ಶನಿ ಚಲಿಸುತ್ತಿರೋದನ್ನು ಸಂವಹನ, ಒಡಹುಟ್ಟಿದವರಿಗೆ ಸಂಬಂಧಿಸಿದ ವಿಷಯಗಳನ್ನು ಸೂಚಿಸುತ್ತದೆ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ತಾಳ್ಳೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇದು ನಿಮ್ಮ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಬೈಕ್ ಸೇರಿದಂತೆ ಹೊಸ ಆಸ್ತಿ ಖರೀದಿ ಯೋಗ ಬರಲಿದೆ.

ಇದನ್ನೂ ಓದಿ: ಧನತ್ರಯೋದಶಿ ಪೂಜೆ ಮುಹೂರ್ತ, ಚಿನ್ನ, ಬೆಳ್ಳಿ ಖರೀದಿಸಲು ಶುಭ ಸಮಯದ ಮಾಹಿತಿ ಇಲ್ಲಿದೆ

55
ಮಿಥುನ ರಾಶಿ

ಮಿಥುನ ರಾಶಿಯವರಿಗೆ ಧನರಾಜಯೋಗ ಅತ್ಯಂತ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಹೊಸ ವ್ಯವಹಾರ ಆರಂಭಕ್ಕೆ ಇದು ಒಳ್ಳೆಯ ಸಮಯವಾಗಿದೆ. ಯಾವುದೇ ಹೊಸ ಆರಂಭಕ್ಕೆ ದೀಪಾವಳಿ ಒಳ್ಳೆಯ ದಿನವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ, ಉದ್ದಿಮೆದಾರರಿಗೆ ವ್ಯವಹಾರದ ವಿಸ್ತರಣೆ ಮಾಡುವ ಶುಭ ಸಮಯ ಬರಲಿದೆ. ತಂದೆಯೊಂದಿಗಿನ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ಮಂಗಳ ಶನಿಯ ನಕ್ಷತ್ರದ ಮೇಲೆ ಸಂಚಾರ, ದೀಪಾವಳಿ ನಂತರ 3 ರಾಶಿಗೆ ಆಸ್ತಿ ಖರೀದಿ ಯೋಗ

Read more Photos on
click me!

Recommended Stories