500 ವರ್ಷಗಳ ನಂತ್ರ ಒಂದೇ ಬಾರಿ 3 ರಾಜಯೋಗ ರಚನೆ; ಮೂರು ರಾಶಿಗಳಿಗೆ ಅನಿರೀಕ್ಷಿತ ಧನಲಾಭ!

Published : Oct 06, 2025, 07:23 PM IST

Lakshmi Narayan yoga 2025: 500 ವರ್ಷಗಳ ನಂತರ ಶುಕ್ರಾದಿತ್ಯ, ಬುಧಾದಿತ್ಯ ಮತ್ತು ಲಕ್ಷ್ಮೀ ನಾರಾಯಣ ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿವೆ. ಈ ತ್ರಿಪಲ್ ರಾಜಯೋಗದ ಪ್ರಭಾವದಿಂದ 3 ರಾಶಿಯವರಿಗೆ ಆರ್ಥಿಕವಾಗಿ ಹೆಚ್ಚಿನ ಲಾಭಗಳು, ವೃತ್ತಿಯಲ್ಲಿ ಯಶಸ್ಸು ಮತ್ತು ಅನಿರೀಕ್ಷಿತ ಧನಲಾಭ ಉಂಟಾಗಲಿದೆ.

PREV
15
ತ್ರಿಪಲ್ ರಾಜಯೋಗ

ಗ್ರಹಗಳು ಒಂದು ರಾಶಿಯಿಂದ ರಾಶಿಗೆ ಚಲನೆ ಮಾಡುತ್ತಿರುತ್ತವೆ. ಈ ಗ್ರಹಗಳ ಚಲನೆ ರಾಶಿಚಕ್ರಗಳ ಮೇಲೆ ನೇರ ಪರಿಣಾಮ ಬೀರುವ ಜೊತೆಯಲ್ಲಿ ವಿಶೇಷ ಯೋಗಗಳ ರಚನೆಗೆ ಕಾರಣವಾಗುತ್ತವೆ. ಆದ್ರೆ ಈ ಬಾರಿ ಒಂದೇ ಬಾರಿ ಮೂರು ರಾಜಯೋಗ ರೂಪಗೊಳ್ಳುತ್ತಿದ್ದು, ಕೆಲವು ರಾಶಿಗಳಿಗೆ ಧನಾತ್ಮಕ ಮತ್ತು ಸಕಾರಾತ್ಮಕ ಅದೃಷ್ಟವನ್ನುಂಡು ಮಾಡಲಿದೆ.

25
ಶುಕ್ರಾದಿತ್ಯ ಯೋಗ, ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮೀ ನಾರಾಯಣ ರಾಜಯೋಗ

ಇದನ್ನು ತ್ರಿಪಲ್ ರಾಜಯೋಗ ಎಂದು ಕರೆಯಲಾಗುತ್ತದೆ. ಈ ರಾಜಯೋಗದಿಂದ ಕೆಲವು ರಾಶಿಗಳಿಗೆ ಹಣದ ಅಧಿದೇವತೆ ಲಕ್ಷ್ಮೀ ತಾಯಿಯ ಆಶೀರ್ವಾದ ಸಿಗಲಿದೆ. ಗೃಹಗಳ ಚಲನೆಯಿಂದ ಶುಕ್ರಾದಿತ್ಯ ಯೋಗ, ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮೀ ನಾರಾಯಣ ರಾಜಯೋಗ ರೂಪಗೊಳ್ಳುತ್ತಿವೆ. 500 ವರ್ಷಗಳ ನಂತರ ಈ ಮೂರು ರಾಜಯೋಗಳು ಮೊದಲ ಬಾರಿ ಜೊತೆಯಾಗಿ ರೂಪುಗೊಳ್ಳುತ್ತಿವೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಯಾವೆಲ್ಲಾ ರಾಶಿಗಳ ಮೇಲೆ ಮೂರು ರಾಜಯೋಗಗಳ ಮೇಲೆ ಪರಿಣಾಮ ಬೀರುತ್ತೆ ಎಂಬುದನ್ನು ನೋಡೋಣ ಬನ್ನಿ.

35
1.ತುಲಾ ರಾಶಿ

ಶುಕ್ರಾದಿತ್ಯ ಯೋಗ, ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮೀ ನಾರಾಯಣ ರಾಜಯೋಗದ ರಚನೆಯಿಂದಾಗಿ ತುಲಾ ರಾಶಿಚಕ್ರದವರ ಧನಲಕ್ಷ್ಮೀಯ ಆಗಮನವಾಗುತ್ತದೆ. ಹಣದ ಆಗಮನದ ಮಾರ್ಗಗಳು ಹೆಚ್ಚಾಗುತ್ತವೆ. ಈ ತ್ರಿಪಲ್ ಯೋಗದ ರಚನೆಯಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ವ್ಯವಹಾರದಲ್ಲಿ ಸಕಾರಾತ್ಮಕ ಬೆಳವಣಿಗೆ, ಉದ್ಯೋಗಿಗಳಿಗೆ ಸಂಬಳ ಹೆಚ್ಚಳದ ಜೊತೆ ಬಡ್ತಿ ಸಿಗಲಿದೆ. ವಾಹನ ಸೇರಿದಂತೆ ಇತರೆ ಆಸ್ತಿ ಖರೀದಿ ಯೋಗವು ತುಲಾ ರಾಶಿಯವರಿಗೆ ಸಿಗಲಿದೆ.

45
2.ಮಕರ ರಾಶಿ

ಈ ರಾಜಯೋಗದ ಪರಿಣಾಮದಿಂದ ಮಕರ ರಾಶಿಯವರು ಹಠಾತ್ ಆರ್ಥಿಕ ಲಾಭಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಬಹುದಿನಗಳಿಂದ ಸಿಲುಕಿರುವ ನಿಮ್ಮ ಹಣ ಹಿಂದಿರುಗಲಿದೆ. ಉದ್ಯೋಗದಲ್ಲಿ ಯಶಸ್ಸಿನ ಜೊತೆಯಲ್ಲಿ ಪ್ರಮುಖ ಜವಾಬ್ದಾರಿಗಳು ನಿಮ್ಮ ಹೆಗಲಿಗೆ ವರ್ಗಾವಣೆಯಾಗಲಿವೆ. ಇದರಿಂದ ಕೆಲಸ ಮಾಡುವ ಮತ್ತು ವಾಸವಾಗಿರುವ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಳವಾಗಲಿದೆ. ಮಕರ ರಾಶಿಯ ವ್ಯಾಪಾರಿಗಳು ವಹಿವಾಟು ಸುಧಾರಣೆಯಾಗಲಿದ್ದು, ವ್ಯವಹಾರ ವಿಸ್ತರಣೆಯಾಗಲಿದೆ.

ಇದನ್ನೂ ಓದಿ: ಈ ತಿಂಗಳ 2ನೇ ವಾರದಲ್ಲಿ ಕಾಲ ಯೋಗ ರಚನೆ; 5 ರಾಶಿಯವರ ಜೀವನದಲ್ಲಿ ಅದೃಷ್ಟದ ಬೆಳಕು

55
3. ವೃಷಭ ರಾಶಿ

ಹಲವು ವರ್ಷಗಳಿಂದ ಒಂದ್ಕಡೆ ನಿಂತಿರುವ ವೃತ್ತಿಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡು ಬರಲಿವೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಜೀವನದಲ್ಲಿ ಆರ್ಥಿಕ ಸದೃಢತೆಯಿಂದ ಮನೆಯಲ್ಲಿಯೂ ನೆಮ್ಮದಿ ಮತ್ತು ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಹೊಸ ಮೂಲಗಳಿಂದ ಆದಾಯ ಮತ್ತು ಆಸೆಗಳೆಲ್ಲವೂ ಈಡೇರಲಿವೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: Garuda Purana: ಹೆಂಡತಿ ಅಪರಿಚಿತ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರೆ ನರಕದಲ್ಲಿ ಯಾವ ಶಿಕ್ಷೆ ಗೊತ್ತಾ?

Read more Photos on
click me!

Recommended Stories