ವೃಷಭ ರಾಶಿಯ ಏಳನೇ ಮನೆಯಲ್ಲಿ ಬುಧ ಸಂಚಾರ, ಇದರಿಂದಾಗಿ ಈ ರಾಶಿಚಕ್ರದ ಜನರಿಗೆ ಸಕಾರಾತ್ಮಕ ಫಲಿತಾಂಶಗಳು ದೊರೆಯುವ ಸಾಧ್ಯತೆ ಹೆಚ್ಚು. ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಈ ಸಮಯದಲ್ಲಿ ಆ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ. ಸ್ವಂತ ಮನೆ ಖರೀದಿಸಲು ಪ್ರಯತ್ನಿಸುತ್ತಿರುವವರಿಗೆ ಈ ಸಮಯ ತುಂಬಾ ಒಳ್ಳೆಯದು. ಯೋಜಿತ ಕೆಲಸಗಳು ನೆರವೇರುತ್ತವೆ. ಹೊಸ ವಾಹನ ಖರೀದಿಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಒಡಹುಟ್ಟಿದವರ ನಡುವಿನ ವಿವಾದಗಳು ಬಗೆಹರಿಯುತ್ತವೆ.