ಅಲ್ಯೂಮಿನಿಯಂ ಫಾಯಿಲ್ ಹೀಗೆಲ್ಲಾ ಬಳಸಬಹುದು.. ವೈಫೈ ಅಂಟೇನಾ!

First Published | Feb 1, 2021, 5:55 PM IST

ಅಲ್ಯೂಮಿನಿಯಂ ಫಾಯಿಲ್ ಬಗ್ಗೆ ಯಾರಿಗೆ ತಿಳಿದಿಲ್ಲ. ಅನೇಕ ಜನರು ಇದನ್ನು ಅಡುಗೆಮನೆಯಲ್ಲಿ ಬಳಸುತ್ತಾರೆ, ಆದರೆ ಇದನ್ನು  ಇನ್ನೂ ಅನೇಕ ರೀತಿಯಲ್ಲಿ ಬಳಸಲು ಅನೇಕರು ಯೋಚಿಸುವುದಿಲ್ಲ. ಹೌದು ,ಅಲ್ಯೂಮಿನಿಯಂ ಫಾಯಿಲ್  ನ ಗೊತ್ತಿಲ್ಲದ ಲಾಭಗಳನ್ನು ಹೇಳುತ್ತೇವೆ ಕೇಳಿ

ಅಲ್ಯೂಮಿನಿಯಂ ಫಾಯಿಲ್ ಹಿಂದೆಂದೂ ಯೋಚಿಸದಂತಹ ಉಪಯುಕ್ತವಾದ ರೀತಿಯಲ್ಲಿ ಬಳಕೆ ಮಾಡಬಹುದು. ಅದು ಹೇಗೆ ಅನ್ನೋದನ್ನು ನೋಡೋಣ...
ಬಟ್ಟೆಗಳನ್ನು ಇಸ್ತ್ರಿ ಮಾಡಬೇಕಾಗಿದೆ ಇದನ್ನು ಬಳಕೆ ಮಾಡಬಹುದು. ಸಮಯದ ಅಭಾವ ಇದ್ದರೆ ಇದು ಸುಲಭ ಉಪಾಯ. ಒಂದು ಫಾಯಿಲ್ ಒಳಗೆ ಧರಿಸುವ ಬಟ್ಟೆಯನ್ನು ಮಡಚಿ ಇಡಿ, ನಂತರ ಅದನ್ನು ಐರನ್ ಮಾಡಿ. ಫಾಯಿಲ್ ಕಾರಣ, ಬಟ್ಟೆಯ ವಸ್ತುವನ್ನು ಎರಡೂ ಬದಿಗಳಲ್ಲಿ ಒಂದೇ ಸಮಯದಲ್ಲಿ ಇಸ್ತ್ರಿ ಮಾಡಬಹುದು. ಸಮಯದ ಉಳಿತಾಯ ಆಗುತ್ತದೆ.
Tap to resize

ಎಣ್ಣೆಯನ್ನು ಬಾಟಲ್ ಗೆ ಹಾಕಲು, ಅಥವಾ ಇನ್ನೇನೋ ಮಾಡಲು ಫನ್ನೇಲ್ (ಕೊಳವೆ) ಅಗತ್ಯವಿದೆ. ಆದರೆ ಅದು ಮನೆಯಲ್ಲಿ ಕಾಣಿಸುತ್ತಿಲ್ಲವೇ? ಚಿಂತಿಸಬೇಡಿ, ಸ್ವಲ್ಪ ಅಲ್ಯೂಮಿನಿಯಂ ಫಾಯಿಲ್ ಅನ್ನು ಮಡಿಸುವ ಮೂಲಕ ಸುಲಭವಾಗಿ ಸೋರದಂತಹ ಕೊಳವೆಯನ್ನಾಗಿ ಮಾಡಬಹುದು.
ಮೊಂಡಾದ ಕತ್ತರಿ? ತೊಂದರೆಯಿಲ್ಲ. ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಿದರೆ ಕತ್ತರಿ ಚೆನ್ನಾಗಿ ತೀಕ್ಷ್ಣವಾಗಿರುತ್ತದೆ. ಅದಕ್ಕಾಗಿ ಮಾಡಬೇಕಾಗಿರುವುದು ಫಾಯಿಲ್ ತುಂಡನ್ನು ತೆಗೆದುಕೊಂಡು ಅದನ್ನು ಕತ್ತರಿ ಸಹಾಯದಿಂದ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಇದರಿಂದ ಕತ್ತರಿ ಹೆಚ್ಚು ಶಾರ್ಪ್ ಆಗುತ್ತದೆ.
ಬಟ್ಟೆಗಳ ಮೇಲೆ ಏನಾದರೂ ಅಂಟಿಕೊಂಡರೆ, ಕೆಲವೊಮ್ಮೆ ಅವು ಬೇಗನೆ ಹೋಗುವುದಿಲ್ಲ. ಇದರಿಂದ ಬೇಸರವಾಗುತ್ತದೆ. ಇದನ್ನು ಸರಿಪಡಿಸಲು ತ್ವರಿತ ಮತ್ತು ಸರಳವಾದ ಟ್ರಿಕ್ ಇದೆ. ಕೆಲವು ಫಾಯಿಲ್ ಅನ್ನು ಬಾಲ್ ಮಾಡಿ ಮತ್ತು ಬಟ್ಟೆಗಳನ್ನು ಉಜ್ಜಲು ಬಳಸಿ. ಅಂಟಿಕೊಂಡಿರುವುದು ಹೋಗುತ್ತದೆ.
ಮನೆಯಲ್ಲಿ ದುರ್ಬಲ ವೈಫೈ ಸಿಗ್ನಲ್ ಇದೆಯೇ? ಅಲ್ಯೂಮಿನಿಯಂ ಫಾಯಿಲ್ನಿಂದ ಪರದೆಯನ್ನು ಮಾಡಿ ಮತ್ತು ಸಿಗ್ನಲ್ ಅನ್ನು ಹೆಚ್ಚಿಸಲು ಬಯಸುವ ಸ್ಥಳದಲ್ಲಿ ಗೋಡೆಯ ವಿರುದ್ಧ ಇರಿಸಿ. ಪರದೆಯ ದಿಕ್ಕಿನಲ್ಲಿ ಸಿಗ್ನಲ್ ಹೆಚ್ಚಾಗುತ್ತದೆ.
ಹಳೆಯ,ಜಿಡ್ಡುಹಿಡಿದ ತಾಮ್ರ, ಸ್ಟೀಲ್ ವಸ್ತುಗಳನ್ನು ನೀರಿಗೆ ಹಾಕಿ ಕುದಿಸಿ, ಅದಕ್ಕೆ ಅಲ್ಯೂಮೀನಿಯಂ ಫಾಯಿಲ್ ನ್ನು ಬಾಲ್ ಮಾಡಿ ಹಾಕಿ. ಇದರಿಂದ ಆ ವಸ್ತುಗಳು ಹೊಸದರಂತೆ ಕಾಣಿಸುತ್ತವೆ.

Latest Videos

click me!