ವಿಭಿನ್ನ ಹೇರ್ ಸ್ಟೈಲ್ ಜೊತೆ ಟ್ರೆಡಿಶನಲ್ ಲುಕ್‌ಗಾಗಿ ಈ ರೀತಿಯ ತುರುಬು ಬಳಸಿ

First Published | Jun 27, 2022, 3:58 PM IST

ಮದುವೆ, ಹಬ್ಬದ ಸಮಾರಂಭಗಳಲ್ಲಿ ಟ್ರೆಡಿಶನಲ್ ಆಗಿ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕಾಗಿಯೇ ಗಜ್ರಾ (ತುರುಬು) ಅಥವಾ ಮಲ್ಲಿಗೆ, ಇತರ ಹೂವನ್ನು ವಿವಿಧ ರೀತಿಯಲ್ಲಿ ಮುಡಿಯುವ ಮೂಲಕ, ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ನೀವು ನಿಮ್ಮ ಇಂಡಿಯನ್ ಡ್ರೆಸ್ ನ್ನು ವಿಶೇಷವಾಗಿ ಮಾಡಲು ಬಯಸಿದರೆ, ಗಜ್ರಾ ಟ್ರೈ ಮಾಡಬಹುದು. ಇದು ನಿಮ್ಮ ಲುಕ್ ನ್ನು ಸ್ಟೈಲಿಶ್ ಆಗಿ (stylish look) ಮಾಡುತ್ತದೆ ಮತ್ತು ನಿಮಗೆ ಹೊಸ ಲುಕ್ ನೀಡುತ್ತೆ. ನೀವು ಹೂವನ್ನು ವಿವಿಧ ರೀತಿಯಲ್ಲಿ ಟ್ರೈ ಮಾಡಬಹುದು. 
 

ವಿಶೇಷ ಸಮಾರಂಭದಲ್ಲಿ ಭಾರತೀಯ ಟ್ರೆಡಿಶನಲ್ ಲುಕ್ (traditional look) ಸಾಕಷ್ಟು ಸ್ಟೈಲಿಶ್ ಮತ್ತು ಕ್ಲಾಸಿಯಾಗಿ ಕಾಣುತ್ತದೆ. ಫ್ರೆಶ್ ಹೂವುಗಳಿಂದ ಮಾಡಿದ ಹೂಮಾಲೆಗಳು ನಿಮ್ಮ ಹೇರ್ ಸ್ಟೈಲ್ ನ್ನು ಸುಂದರಗೊಳಿಸುತ್ತೆ, ಅಲ್ಲದೇ ನಿಮ್ಮ ಒಟ್ಟಾರೆ ಲುಕ್ ಸಾಕಷ್ಟು ಸ್ಪೆಷಲ್ ಆಗಿ ಕಾಣುತ್ತದೆ. 

ಸಾಮಾನ್ಯವಾಗಿ ಗಜರಾವನ್ನು ಹೇರ್ ಸ್ಟೈಲ್ ನಲ್ಲಿ (hair style) ಸೇರಿಸಲು ಮೊದಲ ಬನ್ ಹೇರ್ ಸ್ಟೈಲ್ ಮಾಡಲಾಗುತ್ತೆ, ಆದರೆ ನೀವು ಬಯಸಿದರೆ ತೆರೆದ ಕೂದಲು ಅಥವಾ ಉದ್ದನೆಯ ಜಡೆಗೂ ಕೂಡ ಹೂವನ್ನು ಸ್ಟೈಲ್ ಆಗಿ ಮುಡಿಯಬಹುದು. ನೀವು ಅದನ್ನು ಸಿಂಪಲ್ ಮತ್ತು ಸ್ಟೈಲಿಶ್ ಅಥವಾ ವಿಶೇಷ ಸ್ಟೈಲ್ ನಲ್ಲಿ ಮುಡಿಯಬಹುದು. 

Tap to resize

ನಿಮ್ಮ ಹೇರ್ ಸ್ಟೈಲ್ ನ್ನು ಸ್ಪೆಷಲ್ ಆಗಿಸಲು ನೀವು ವಿಭಿನ್ನ ವಿನ್ಯಾಸಗಳಲ್ಲಿ ವಿಭಿನ್ನ ಶೈಲಿಯ ಗಜ್ರಾಗಳನ್ನು ಹೇಗೆ ಮುಡಿಯಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ. ನೀವು ಯಾವೆಲ್ಲಾ ರೀತಿಯಲ್ಲಿ ಹೂ ಮುಡಿಯುವ ಮೂಲಕ ಸ್ಟೈಲಿಶ್ ಲುಕ್ (stylish look) ಪಡೆಯಬಹುದು ನೋಡೋಣ…

ಫುಲ್ ಕವರ್ ಮಾಡಿ:
ನೀವು ಈ ಹೇರ್ ಸ್ಟೈಲನ್ನು ನಿರ್ದಿಷ್ಟ ಸಮಾರಂಭ ಅಥವಾ ಮದುವೆಯಲ್ಲಿ ಟ್ರೈ ಮಾಡಬಹುದು. ಇದಕ್ಕಾಗಿ, ನೀವು ಕೂದಲನ್ನು ಬಾಚಿ ಬ್ಯಾಕ್ ಬನ್ (back bun) ಹಾಕಿ. ಈಗ ಕೂದಲನ್ನು ಗಜ್ರಾದಿಂದ ಸಂಪೂರ್ಣವಾಗಿ ಮುಚ್ಚಿ. ಇದಕ್ಕಾಗಿ, ನೀವು ಯೂಪಿನ್ ಬಳಸಬೇಕು.

ಬೇಲಿಯಂತಹ ಮಲ್ಲಿಗೆ:
ಹಬ್ಬಗಳಿಗಾಗಿ ನಿಮ್ಮನ್ನು ನೀವು ಅಲಂಕರಿಸಲು ಬಯಸಿದರೆ, ಈ ಶೈಲಿಯ ಗಜ್ರಾವನ್ನು ಪ್ರಯತ್ನಿಸಿ. ಇದಕ್ಕಾಗಿ, ನೀವು ಮೊದಲ ಬನ್ ಹೇರ್ ಸ್ಟೈಲ್ ಮಾಡಿ, ನಂತರ ಬೇಲಿಯಂತೆ ಹೂವನ್ನು ಹಾಕಿ, ಅದಕ್ಕೆ ಯೂ ಪಿನ್ ಹಾಕಿ. 

ಅರ್ಧ ಗಜ್ರಾ:
ಈ ಹೇರ್ ಸ್ಟೈಲ್ (hair style) ಮಾಡಲು, ನೀವು ಮೊದಲು ಕೂದಲನ್ನು ಬಾಚಬೇಕು. ಮತ್ತು ಲೂಸ್ ಆಗಿ ಪೋನಿಟೇಲ್ ಹಾಕಿ, ನಂತರ ಹೂವನ್ನು ಕೂದಲಿಬ ಅಡಿಯಿಂದ ಎರಡು ಸೈಡ್ ಗೆ ತಂದು ಪಿನ್ ಮಾಡಿ. ಇದು ಅರ್ಧ ಗಜ್ರಾ ಆಗಿದ್ದು, ಸುಂದರವಾಗಿ ಕಾಣುತ್ತೆ.. 
 

ಸಿಂಗಲ್ ಸ್ಟ್ರಾಂಡ್ ಬನ್:
ನೀವು ಈ ಹೇರ್ ಸ್ಟೈಲ್ ನ್ನು ಸುಲಭವಾಗಿ ಕ್ಯಾರಿ ಮಾಡಬಹುದು. ಇದಕ್ಕಾಗಿ ನೀವು ಲೋ ಬನ್ ಟ್ರೈ ಮಾಡಿ. ಈಗ ಅದರ ಮೇಲೆ ನೀವು ಸಿಂಗಲ್ ಲೈನ್ ನಲ್ಲಿ ಹೂವನ್ನು ಸುತ್ತಬಹುದು. ಇದು ನಿಮಗೆ ಪರ್ಫೆಕ್ಟ್ ಲುಕ್ ನೀಡುತ್ತೆ.

Latest Videos

click me!