ಒಣಂ ಮಲಯಾಳಿಗರ ನೆಚ್ಚಿನ ಹಬ್ಬ.ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಜನರು ಹೂವಿನ ರಂಗೋಲಿ ಪೂಕಳಂ ಹಾಕಿ, ಹಲವು ವಿಧಗಳ ಭಕ್ಷ್ಯವಿರುವ ಓಣಂ ಸದ್ಯ ಸವಿದು ಸಂಭ್ರಮಿಸುತ್ತಾರೆ. ಹಬ್ಬಕ್ಕೆ ದಕ್ಷಿಣಭಾರತದ ನಟೀಮಣಿಯರು ಹೇಗೆ ರೆಡಿಯಾಗಿದ್ದಾರೆ ನೋಡೋಣ.
ಸಮಂತಾ ರುತುಪ್ರಭು
ಸೌತ್ ಇಂಡಿಯನ್ ಬ್ಯೂಟಿ ಸಮಂತಾ ರುತುಪ್ರಭು ಸದ್ಯ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಸೌಂಡ್ ಮಾಡುತ್ತಿದ್ದಾರೆ. ಮಾಡರ್ನ್ ಹಾಗೂ ಸಾಂಪ್ರದಾಯಿಕ ಎರಡೂ ರೀತಿಯ ದಿರಿಸಿನಲ್ಲಿ ಆಕರ್ಷಕವಾಗಿ ಕಾಣುವ ಸ್ಯಾಮ್ ಕೇರಳ ಶೈಲಿಯ ಕಸುವು ಸ್ಯಾರಿ ಉಟ್ಟು ಮಿಂಚಿದ್ದಾರೆ. ಈ ಫೋಟೋದಲ್ಲಿ ಅವರು ಮ್ಯಾಚಿಂಗ್ ಟಾಪ್ ಮತ್ತು ಕಸವು ಸೀರೆಯನ್ನು ಧರಿಸಿರುವುದನ್ನು ನೀವು ನೋಡಬಹುದು.
27
ನಯನತಾರಾ
ಮೂಲತಃ ಕೇರಳಿಗರಾಗಿರುವ ನಯನತಾರಾ ಪ್ರತಿ ವರ್ಷ ಓಣಂ ಹಬ್ಬ ಆಚರಿಸುವುದನ್ನು ಮರೆಯುವುದಿಲ್ಲ. ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದಂದು ಮಿಂಚುತ್ತಾರೆ. ಲೇಡಿ ಸೂಪರ್‌ಸ್ಟಾರ್ ಸಿಂಪಲ್ ಓಣಂ ಸೀರೆಯನ್ನುಟ್ಟಿದ್ದು, ನೋ ಮೇಕಪ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲನ್ನು ಫ್ರೀಯಾಗಿ ಬಿಟ್ಟು ಸುಂದರವಾಗಿ ಕಾಣುತ್ತಿದ್ದಾರೆ.
37
ಸಾಯಿ ಪಲ್ಲವಿ
ಪಕ್ಕಾ ಕೇರಳ ಶೈಲಿಯ ಕಸವು ಸೀರೆಯಲ್ಲಿ ಸಾಯಿ ಪಲ್ಲವಿ ಅದ್ಭುತವಾಗಿ ಕಾಣಿಸುತ್ತಾರೆ. ಕೂದಲಿಗೆ ಅಲಂಕರಿಸುವ ಬಿಳಿಹೂಗಳು ಇನ್ನಷ್ಟು ಆಕರ್ಷಣೆಯನ್ನುಂಟು ಮಾಡಿದೆ. ಗೋಲ್ಡನ್ ಝರಿಯ ಸೀರೆಯೊಂದಿಗೆ ಚಿನ್ನದ ಬಳೆಗಳನ್ನು ಧರಿಸಿರುವುದು ಸಂಪೂರ್ಣ ಹಬ್ಬದ ಲುಕ್ ತಂದಿದೆ.
47
ಕೀರ್ತಿ ಸುರೇಶ್
ಕೀರ್ತಿ ಸುರೇಶ್ ಸಾಂಪ್ರದಾಯಿಕ ಹಾಫ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತ ವರ್ಣದ ಸ್ಕರ್ಟ್, ಬ್ಲಾಸ್ ಮತ್ತು ದುಪ್ಪಟ್ಟಾ ಹಬ್ಬದ ಕಳೆ ತಂದಿತ್ತು. ದೊಡ್ಡ ಗಾತ್ರದ ಜುಮುಕಿ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸಿತ್ತು.
57
ಕಲ್ಯಾಣಿ ಪ್ರಿಯದರ್ಶನ್
ಕಲ್ಯಾಣಿ ಪ್ರಿಯದರ್ಶನ್ ಅವರು ಚಿನ್ನದ ಟಿಶ್ಯೂ ಸೀರೆ ಮತ್ತು ಸ್ಪಾಗೆಟ್ಟಿ ಸ್ಟ್ರಾಪ್ ಟಾಪ್ ಧರಿಸಿ ಸಮಕಾಲೀನ-ಸ್ಟೈಲಿಶ್ ನೋಟವನ್ನು ಹೊಂದಿದ್ದಾರೆ. ಕಲ್ಯಾಣಿ ಸುಂದರವಾದ ನೆಕ್‌ಪೀಸ್ ಮತ್ತು ಕಡುಗೆಂಪು ಬಳೆಗಳೊಂದಿಗೆ ತನ್ನ ಉಡುಪನ್ನು ಪೂರ್ಣಗೊಳಿಸಿದರು. ಓಣಂ ರಂಗೋಲಿಯ ಮುಂದೆ ಅವರು ಫೋಟೋಗೆ ಫೋಸ್ ನೀಡಿದ್ದಾರೆ.
67
ಕಾವ್ಯ ಮಾಧವನ್
ಕೇರಳದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿರುವ ಕಾವ್ಯ ಮಾಧವನ್ ತನ್ನ ಸಾಂಪ್ರದಾಯಿಕ ಬಿಳಿ ರೇಷ್ಮೆ ಸೀರೆಯೊಂದಿಗೆ ವ್ಯತಿರಿಕ್ತ ಹಸಿರು ಬ್ಲೌಸ್ ಧರಿಸಿದ್ದರು. ಕೇರಳದ ಸಾಂಪ್ರದಾಯಿಕ ಕಡಗ, ನೆಕ್ಲೇಸ್‌ಗಳನ್ನು ಧರಿಸಿ ಮಿಂಚಿದರು.
77
ಅನುಪಮಾ ಪರಮೇಶ್ವರನ್
ಕೇರಳದ ನಟಿ ಅನುಪಮಾ ಪರಮೇಶ್ವರನ್ Instagramನಲ್ಲಿ ತೆಗೆದುಕೊಂಡು ಕೆಲವು ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಬ್ಲೌಸ್ ಮತ್ತು ನೆಕ್ಲೇಸ್, ಕನಿಷ್ಠ ಮೇಕ್ಅಪ್ ಮತ್ತು ಪ್ರಕಾಶಮಾನವಾದ ನಗುವಿನೊಂದಿಗೆ ಕೇರಳದ ಸಾಂಪ್ರದಾಯಿಕ ಸೀರೆಯಲ್ಲಿ ಅವರು ಎಂದಿನಂತೆ ಸುಂದರವಾಗಿ ಕಾಣುತ್ತಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.