Fashion Tips: ಕಡಿಮೆ ಬಜೆಟ್ ನಲ್ಲಿ ಉತ್ತಮ ಮೇಕಪ್ ಪ್ರಾಡಕ್ಟ್ ಆಯ್ಕೆ ಮಾಡಿ

First Published | Oct 12, 2022, 6:08 PM IST

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆನ್ ಲೈನ್ ಮೂಲಕ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇಷ್ಟಪಡ್ತಾರೆ. ಎಲ್ಲಿ ವಸ್ತುಗಳು ಅಗ್ಗವಾಗಿ ಸಿಗುತ್ತದೆಯೋ, ಯಾವ ಸ್ಟೋರ್ ನಲ್ಲಿ ಡಿಸ್ಕೌಂಟ್ ಗಳು ಲಭ್ಯವಿವೆಯೋ, ಅಲ್ಲಿ ಮಹಿಳೆಯರು ಸಾಮಾನ್ಯವಾಗಿ ಎಲ್ಲವನ್ನೂ ಖರೀದಿಸುತ್ತಾರೆ. ಬಹುತೇಕ ಪ್ರತಿಯೊಬ್ಬ ಮಹಿಳೆಯೂ ಮೇಕಪ್ ಇಷ್ಟಪಡುತ್ತಾರೆ. ಇದಕ್ಕಾಗಿ, ಮಹಿಳೆಯರು ತಮ್ಮದೇ ಆದ ವೈಯಕ್ತಿಕ ಮೇಕಪ್ ಲಿಸ್ಟ್ ಮಾಡ್ತಾರೆ. ಇದರಲ್ಲಿ ಅವರು ತಮಗೆ ಅಗತ್ಯವಿರುವ ಎಲ್ಲಾ ಮೇಕಪ್ ಉತ್ಪನ್ನಗಳನ್ನು ಒಟ್ಟಿಗೆ ಸಂಗ್ರಹಿಸಲು ಇಷ್ಟಪಡುತ್ತಾರೆ.

ಮೇಕಪ್ ಈಗ ಕೇವಲ ಸಿನಿಮಾ ತಾರೆಯರ ಆಸ್ತಿಯಾಗಿ ಉಳಿದಿಲ್ಲ. ಸಾಮಾನ್ಯವಾಗಿ ಎಲ್ಲಾ ಹುಡುಗಿಯರು, ಮಹಿಳೆಯರು ಮೇಕಪ್ ಮಾಡಿಕೊಂಡೆ ಮನೆಯಿಂದ ಹೊರಗಿಳಿಯುತ್ತಾರೆ. ಒಂದು ದಿನ ಮೇಕಪ್ ಮಾಡದೇ ಇದ್ದರೆ ತಾವು ಏನೋ ಕಳೆದುಕೊಂಡಂತೆ ಭಾವಿಸುತ್ತಾರೆ. ಶಾಪಿಂಗ್ ಹೋದರೆ ಮೇಕಪ್ ಪ್ರಾಡಕ್ಟ್ ಗಳ ಮೇಲೆಯೇ ಮಹಿಳೆಯರ ಕಣ್ಣಿರುತ್ತೆ. ನಿಮಗೂ ಮೇಕಪ್ ಹುಚ್ಚು ಇದ್ರೆ, ಕಡಿಮೆ ಬಜೆಟ್ ಗೆ ಉತ್ತಮ ಮೇಕಪ್ ಪ್ರಾಡಕ್ಟ್ (makeup product) ಆಯ್ಕೆ ಮಾಡೋ ಟಿಪ್ಸ್ ಇಲ್ಲಿದೆ. 

ಮೇಕಪ್ ಉತ್ಪನ್ನಗಳನ್ನು ಖರೀದಿಸುವಾಗ ಕೆಲವು ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸ್ತಾರೆ. ಸರಿಯಾದ ಉತ್ಪನ್ನವನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಕನ್ ಫ್ಯೂಸ್ ಆಗಿರುತ್ತಾರೆ. ನೀವು ಕೂಡ ಆ ಮಹಿಳೆಯರಲ್ಲಿ ಒಬ್ಬರಾಗಿದ್ದರೆ, ಖಂಡಿತವಾಗಿಯೂ ಈ ಲೇಖನವನ್ನು ಕೊನೆಯವರೆಗೂ ಓದಿ. ಇದರಲ್ಲಿ ನೀವು ಪಾಕೆಟ್ ಸ್ನೇಹಿ ಮೇಕಪ್ (pocket friendly makeup) ಖರೀದಿ ಮಾಡೋದು ಹೇಗೆ ಅನ್ನೋದನ್ನು ನೋಡೋಣ.

Latest Videos


ಅಂತಹ ಉತ್ಪನ್ನಗಳನ್ನು ಆಯ್ಕೆಮಾಡಿ 
ನೀವು ಕಡಿಮೆ ಹಣಕ್ಕೆ ಕೈಗೆಟುಕುವ ಮೇಕಪ್ ಪ್ರಾಡಕ್ಟ್ ಆಯ್ಕೆ ಮಾಡುತ್ತಿದ್ದರೆ, ಕಣ್ಣಿನ ಮೇಕಪ್ ನಿಂದ ಹಿಡಿದು ಬ್ಲಶ್, ಕಾಂಟೂರ್ ಮತ್ತು ಹೈಲೈಟರ್ (highlighter) ವರೆಗಿನ ಶೇಡ್ ಒಟ್ಟಿಗೆ ಇರುವ ಪ್ಯಾಕ್ ಆತ್ಕೆ ಮಾಡಿ. ಹೀಗೆ ಮಾಡೋದ್ರಿಂದ, ನೀವು ಬೇರೆ ಬೇರೆ ಮೇಕಪ್ ಪ್ರಾಡಕ್ಟ್ ಖರೀದಿ ಮಾಡಬೇಕಾಗಿಲ್ಲ. ಅದನ್ನು ಖರೀದಿಸುವುದರಿಂದ ಹಣ ಉಳಿಸಬಹುದು ಮತ್ತು ನೀವು ಹೆಚ್ಚು ಉತ್ಪನ್ನಗಳನ್ನು ಒಯ್ಯಬೇಕಾಗಿಲ್ಲ.

ಬೇಸ್ ಮೇಕಪ್ ಆಯ್ಕೆ ಮಾಡೋದು ಹೇಗೆ?
ನೀವು ಈಗಷ್ಟೇ ಮೇಕಪ್ ಮಾಡೊದನ್ನು ರೂಢಿ ಮಾಡ್ಕೊಂಡಿದ್ರೆ, ಮಿಡಲ್ ರೇಂಜ್ ನ ಬೇಸಿಕ್ ಪ್ರಾಡಕ್ಟ್ ಖರೀದಿಸಲು ಪ್ರಯತ್ನಿಸಿ, ಇದನ್ನ ಮಿಕ್ಸ್ ಮಾಡೋದು ಸುಲಭ, ಜೊತೆಗೆ ಹೆವಿ ಬೇಸ್ ಮೇಕಪ್ ಅವಾಯ್ಡ್ ಮಾಡಬಹುದು. ಇದನ್ನು ಮಾಡೊದ್ರಿಂದ, ನಿಮ್ಮ ಲುಕ್ ನ್ಯಾಚುರಲ್ (natural look) ಆಗಿ, ಸ್ಮೂತ್ ಆಗಿ ಕಾಣುತ್ತೆ. ಅಲ್ಲದೆ, ಮೇಕಪ್ ದೀರ್ಘಕಾಲ ಬಾಳಿಕೆ ಬರುತ್ತದೆ.

ಇದನ್ನು ಮೊದಲು ಮಾಡಿ
ಯಾವುದೇ ಉತ್ಪನ್ನವನ್ನು ಖರೀದಿಸುವ ಅಥವಾ ಪರಿಶೀಲಿಸುವ ಮೊದಲು, ನೀವು ಒಂದು ಲಿಸ್ಟ್ ರೆಡಿ ಮಾಡಬೇಕು. ಅದರಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಮೇಕಪ್ ಉತ್ಪನ್ನಗಳನ್ನು ಬರೆಯಬಹುದು. ಅಲ್ಲದೆ, ನೀವು ಅದರ ಬೆಲೆಯನ್ನು ಬರೆದರೆ, ಇದರಿಂದ ನಿಮ್ಮ ಬಜೆಟ್ ಎಷ್ಟು ಹೋಗಬಹುದು ಎಂಬ ಕಲ್ಪನೆ ಸಿಗುತ್ತೆ. 

ಬ್ರಾಂಡ್ ಗಳ ಬಗ್ಗೆ ತಿಳಿಯಿರಿ
ನೀವು ಬಿಗಿನರ್ಸ್ ಆಗಿದ್ದರೆ, ಮೊದಲು ಬ್ರಾಂಡ್ ಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ, ಇದರಿಂದ ನಿಮ್ಮ ಬಜೆಟ್ ಮತ್ತು ನಿಮ್ಮ ಚರ್ಮಕ್ಕೆ ಅನುಗುಣವಾಗಿ ಸರಿಯಾದ ಮೇಕಪ್ ಪ್ರಾಡಕ್ಟ್ ಆಯ್ಕೆ ಮಾಡಬಹುದು. ಇದಕ್ಕಾಗಿ, ನೀವು ಇಂಟರ್ನೆಟ್ ನ ಸಹಾಯ ತೆಗೆದುಕೊಳ್ಳಬಹುದು. ಅಲ್ಲದೇ, ಆನ್ ಲೈನ್ ಸ್ಟೋರ್ ಗಳಲ್ಲಿ ಕಸ್ಟಮರ್ ರಿವ್ಯೂ (customer review) ಓದುವ ಮೂಲಕ ಪ್ರಾಡಕ್ಟ್ ಬಗ್ಗೆ ತಿಳಿಯಿರಿ.
 

click me!