ಮಾಡರ್ನ್ ಮಹಿಳೆಯರು ತಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಆಗಿ ಕಾಣಬೇಕೆಂದು ಲೆನ್ಸ್ ಹೆಚ್ಚಾಗಿ ಬಳಕೆ ಮಾಡ್ತಾರೆ. ಆದರೆ ಬಣ್ಣದ ಲೆನ್ಸ್ (color lens) ಆಯ್ಕೆ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳೋದು ತುಂಬಾ ಮುಖ್ಯ. ಕಲರ್ ಲೆನ್ಸ್ ಗಳನ್ನು ಖರೀದಿಸುವಾಗ ನೆನಪಿನಲ್ಲಿಡಬೇಕಾದ ವಿಷಯಗಳು ಯಾವುವು ಅನ್ನೋದನ್ನು ನೋಡೋಣ.
ಸ್ಕಿನ್ ಟೋನ್
ಪ್ರತಿಯೊಬ್ಬರ ಸ್ಕಿನ್ ಟೋನ್ (skin tone) ವಿಭಿನ್ನವಾಗಿರುತ್ತೆ. ಶೇಡ್ ಗಳು ಡಾರ್ಕ್ ಸ್ಕಿನ್ ಟೋನ್ ನಿಂದ ಲೈಟ್ ಸ್ಕಿನ್ ಟೋನ್ ವರೆಗೆ ಬದಲಾಗುತ್ತವೆ. ಆದ್ದರಿಂದ ನಿಮಗಾಗಿ ಲೆನ್ಸ್ ಆಯ್ಕೆ ಮಾಡುವಾಗ ನಿಮ್ಮ ಚರ್ಮದ ಟೋನ್ ಬಗ್ಗೆ ಕಾಳಜಿ ವಹಿಸಿ. ಉಡುಗೆಗೆ ಮಾತ್ರ ಹೊಂದಿಕೆಯಾಗುವ ಲೆನ್ಸ್ ಆಯ್ಕೆ ಮಾಡುವುದರಿಂದ ಕೆಲವೊಮ್ಮೆ ನಿಮ್ಮ ಲುಕ್ ಕೆಟ್ಟದಾಗಿ ಕಾಣಬಹುದು.
ಕಣ್ಣುಗಳ ಬಗ್ಗೆಯೂ ಕಾಳಜಿ ವಹಿಸಿ
ಲೆನ್ಸ್ ಅನೇಕ ಗಾತ್ರಗಳಲ್ಲಿ ಬರುತ್ತವೆ. ಆದ್ದರಿಂದ ನೀವು ಲೆನ್ಸ್ ಖರೀದಿಸಿದಾಗಲೆಲ್ಲಾ, ನಿಮ್ಮ ಕಣ್ಣುಗಳ ಗಾತ್ರ ಮತ್ತು ಆಕಾರದ ಬಗ್ಗೆ ಕಾಳಜಿ ವಹಿಸಿ. ನೀವು ಸರಿಯಾದ ಗಾತ್ರದ ಲೆನ್ಸ್ ಖರೀದಿಸದಿದ್ದರೆ, ಕಣ್ಣುಗಳಲ್ಲಿ ಸೋಂಕಿನ ಸಮಸ್ಯೆಯೂ ಉಂಟಾಗಬಹುದು.
ಆನ್ ಲೈನ್ ನಲ್ಲಿ ಖರೀದಿಸಬೇಡಿ
ಅಂದಹಾಗೆ, ಎಲ್ಲವೂ ಆನ್ ಲೈನ್ ನಲ್ಲಿ ಅಗ್ಗವಾಗಿ ಲಭ್ಯವಿದೆ. ಆದರೆ ಲೆನ್ಸ್ ಖರೀದಿಸುವಾಗ ತಜ್ಞರನ್ನು ಸಂಪರ್ಕಿಸಿ. ಸಾಧ್ಯವಾದಷ್ಟು, ಆಫ್ ಲೈನ್ ಸ್ಟೋರ್ ಗೆ ಹೋಗಿ ಮತ್ತು ನಿಮಗಾಗಿ ಲೆನ್ಸ್ ಖರೀದಿಸಿ ಮತ್ತು ತಜ್ಞರ ಅಭಿಪ್ರಾಯ ಅನುಸರಿಸಿ. ಈ ರೀತಿ ಮಾಡಿದ್ರೆ, ಸರಿಯಾದ ಗಾತ್ರ ಮತ್ತು ಬಣ್ಣದ ಲೆನ್ಸ್ ಪಡೆಯುವುದು ನಿಮಗೆ ಸುಲಭವಾಗುತ್ತದೆ.
ಬ್ರಾಂಡೆಡ್ ಖರೀದಿಸಿ
ಅನೇಕ ಬ್ರಾಂಡ್ ಮಾರುಕಟ್ಟೆಗಳಲ್ಲಿ ಬಣ್ಣದ ಲೆನ್ಸ್ ಲಭ್ಯವಿವೆ. ಅವುಗಳಲ್ಲಿ ಕೆಲವು ತುಂಬಾ ಅಗ್ಗ. ಆದರೆ ಹಣವನ್ನು ಉಳಿಸುವ ಸಲುವಾಗಿ ಯಾವುದೇ ಸ್ಥಳೀಯ ಬ್ರಾಂಡ್ ನ ಲೆನ್ಸ್ ಖರೀದಿಸಬೇಡಿ. ಬದಲಾಗಿ, ನಿಮ್ಮ ಅಮೂಲ್ಯವಾದ ಕಣ್ಣುಗಳಿಗಾಗಿ ವಿಶ್ವಾಸಾರ್ಹ ಮತ್ತು ಉತ್ತಮ ಬ್ರಾಂಡ್ ಗಳ ಲೆನ್ಸ್ (branded lens) ಆರಿಸಿ.
ಯಾರ ಜೊತೆಯೂ ಶೇರ್ ಮಾಡಬೇಡಿ
ನೀವು ಬಳಸಿದ ಲೆನ್ಸ್ ನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ಕಣ್ಣಿನ ಸೋಂಕಿಗೆ ಕಾರಣವಾಗಬಹುದು. ಬೇರೊಬ್ಬರು ಬಳಸಿದ ಲೆನ್ಸ್ ನೀವು ಕಣ್ಣಿಗೆ ಹಾಕುವುದಿಲ್ಲ. ಅಂದ ಕಾಣಿಸಿಕೊಳ್ಳುವುದರ ಜೊತೆಗೆ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ.