ಬೇಸಿಗೆಯಲ್ಲಿ ಬಿಸಿಲಿನಿಂದ ಬೆವರುವುದರ ಜೊತೆಗೆ ಸನ್ ಟ್ಯಾನ್ ಕೂಡ ಒಂದು ದೊಡ್ಡ ಸಮಸ್ಯೆ. ಮುಖ ಬೆಳ್ಳಗಿದ್ರೂ ಕೈ ಕಪ್ಪಗಿರುತ್ತೆ. ಬಟ್ಟೆ ಮುಚ್ಚಿರದ ಕೈ ಭಾಗಗಳಿಗೆ ಬಿಸಿಲು ತಾಗುವುದರಿಂದ ಚರ್ಮ ಕಪ್ಪಾಗುತ್ತದೆ. ಮುಖಕ್ಕೆ ಕ್ರೀಮ್ ಹಚ್ಚಿಕೊಂಡು ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತೇವೆ. ಅದೇ ರೀತಿ ಕೈಗೂ ಕಾಳಜಿ ವಹಿಸಿದರೆ, ಸೂರ್ಯನ ಬೆಳಕಿನಿಂದ ಕಪ್ಪಾದ ಕೈಗಳನ್ನು ಬೆಳ್ಳಗಾಗಿಸಬಹುದು. ಕೆಲವು ಮನೆಮದ್ದುಗಳು ಇಲ್ಲಿವೆ.
26
ಆಲೂಗಡ್ಡೆ ರಸ:
ಬಿಸಿಲಿನಿಂದ ಕಪ್ಪಾದ ಕೈಗಳಿಗೆ ಆಲೂಗಡ್ಡೆ ರಸ ಒಳ್ಳೆಯದು. ಆಲೂಗಡ್ಡೆಯನ್ನು ತುರಿದು ರಸ ತೆಗೆದು ಕೈಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ನಂತರ ಮಾಯಿಶ್ಚರೈಸರ್ ಹಚ್ಚಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ. ವಾರಕ್ಕೆ ಎರಡು ಬಾರಿ ಮಾಡಿದರೆ ಕಪ್ಪು ಕಲೆಗಳು ಮಾಯವಾಗುತ್ತವೆ.
36
ಟೊಮೆಟೊ ರಸ ಮತ್ತು ಮೊಸರು :
ಒಂದು ಚಮಚ ಟೊಮೆಟೊ ರಸ ಮತ್ತು ಒಂದು ಚಮಚ ಮೊಸರು ಮಿಶ್ರಣ ಮಾಡಿ ಕೈಗೆ ಹಚ್ಚಿ ಎರಡು ನಿಮಿಷ ಉಜ್ಜಿ 15 ನಿಮಿಷ ಬಿಟ್ಟು ತೊಳೆಯಿರಿ. ನಂತರ ಮಾಯಿಶ್ಚರೈಸರ್ ಹಚ್ಚಿ. ಒಂದು ದಿನ ಬಿಟ್ಟು ಒಂದು ದಿನ ಹೀಗೆ ಮಾಡಿ.
46
ಸೌತೆಕಾಯಿ ಮತ್ತು ಗುಲಾಬಿ ನೀರು :
ಸೌತೆಕಾಯಿ ರಸಕ್ಕೆ ಸ್ವಲ್ಪ ಗುಲಾಬಿ ನೀರು ಸೇರಿಸಿ ಕೈಗೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ವಾರಕ್ಕೆ 2 ಬಾರಿ ಮಾಡಿದರೆ ಕಪ್ಪು ಕಡಿಮೆಯಾಗುತ್ತದೆ.
56
aloe vera ಜೆಲ್ ಮತ್ತು ಮುಲ್ತಾನಿ ಮಿಟ್ಟಿ :
ಒಂದು ಚಮಚ ಮುಲ್ತಾನಿ ಮಿಟ್ಟಿ ಮತ್ತು 2 ಚಮಚ aloe vera ಜೆಲ್ ಮಿಶ್ರಣ ಮಾಡಿ ಕೈಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ವಾರಕ್ಕೆ 2 ಬಾರಿ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
66
ಕಡ್ಲೆ ಹಿಟ್ಟು ಮತ್ತು ಅರಿಶಿನ :
ಒಂದು ಚಮಚ ಕಡ್ಲೆ ಹಿಟ್ಟು, ಸ್ವಲ್ಪ ಅರಿಶಿನ ಮತ್ತು ಹಸಿ ಹಾಲು ಮಿಶ್ರಣ ಮಾಡಿ ಕೈಗೆ ಹಚ್ಚಿ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆಯಿರಿ. ನಂತರ ಮಾಯಿಶ್ಚರೈಸರ್ ಹಚ್ಚಿ. ವಾರಕ್ಕೆ 2 ಬಾರಿ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.