ಪ್ರತಿದಿನ ಲಿಪ್ ಸ್ಟಿಕ್ ಹಚ್ಚೋ ಮಹಿಳೆಯರು ನೀವಾಗಿದ್ರೆ… ಅದರಿಂದಾಗೋ ಅಪಾಯದ ಬಗ್ಗೆಯೂ ಅರಿವಿರಲಿ

Published : Nov 10, 2024, 01:24 PM ISTUpdated : Nov 10, 2024, 02:48 PM IST

ನೀವು ಪ್ರತಿದಿನ ಲಿಪ್ ಸ್ಟಿಕ್ ಬಳಕೆ ಮಾಡ್ತೀರಾ? ಲಿಪ್ ಸ್ಟಿಕ್ ಇಲ್ಲದೇ ಮನೆಯಿಂದ ಹೊರಗೆ ಕಾಲಿಡೋದೆ ಇಲ್ವಾ? ಹಾಗಿದ್ರೆ ನೀವಿದನ್ನ ಓದಬೇಕು. ಯಾಕಂದ್ರೆ ಇದರಲ್ಲಿ ಲಿಪ್ ಸ್ಟಿಕ್ ಪ್ರತಿದಿನ ಬಳಸುವ ಅನಾನುಕೂಲಗಳ ಬಗ್ಗೆ ತಿಳಿಸಲಾಗಿದೆ.   

PREV
18
ಪ್ರತಿದಿನ ಲಿಪ್ ಸ್ಟಿಕ್ ಹಚ್ಚೋ ಮಹಿಳೆಯರು ನೀವಾಗಿದ್ರೆ… ಅದರಿಂದಾಗೋ ಅಪಾಯದ ಬಗ್ಗೆಯೂ ಅರಿವಿರಲಿ

ಲಿಪ್ ಸ್ಟಿಕ್ (lipstick) ಅನ್ನೋ ಮೇಕಪ್ ಪ್ರಾಡಕ್ಟ್ ಆಗಿದ್ದು, ಹೆಚ್ಚಿನ ಮಹಿಳೆಯರು ಲಿಪ್ ಸ್ಟಿಕ್ ಇಲ್ಲದೇ ಮನೆಯಿಂದ ಹೊರಗೆ ಉಳಿಯೋದೆ ಇಲ್ಲ. ಕಾಲೇಜಿಗೆ ಹೋಗುವ ಹುಡುಗಿಯರಿಂದ ಹಿಡಿದು ಕಚೇರಿಗೆ ಹೋಗುವ ಮಹಿಳೆಯರವರೆಗೆ, ಎಲ್ಲರೂ ತಮ್ಮ ಬ್ಯಾಗ್ ನಲ್ಲಿ ಅನೇಕ ಬಣ್ಣಗಳ ಲಿಪ್ಸ್ಟಿಕ್ ಶೇಡ್ಸ್ ಇಡಲು ಇಷ್ಟಪಡುತ್ತಾರೆ. ತಮ್ಮ ಪ್ರತಿಯೊಂದು ಡ್ರೆಸ್ ಜೊತೆ ಲಿಪ್ ಸ್ಟಿಕ್ ಮ್ಯಾಚ್ ಆಗಬೇಕೆಂದು ಮಹಿಳೆಯರು ಬಯಸ್ತಾರೆ. 

28

ಇಂದಿನ ಕಾಲದಲ್ಲಿ, ಹುಡುಗಿಯರು ಪೂರ್ಣ ಮೇಕಪ್ ಮಾಡದಿರಬಹುದು, ಆದರೆ ಲಿಪ್ಸ್ಟಿಕ್ ಹಚ್ಚದೆ ಅವರು ಎಂದಿಗೂ ಮನೆಯಿಂದ ಹೊರಹೋಗುವುದಿಲ್ಲ. ಆದರೆ, ಯಾವಾಗ್ಲೂ ಲಿಪ್ ಸ್ಟಿಕ್ ಹಚ್ಚೋದ್ರಿಂದ ತುಟಿಗಳಿಗೆ ತುಂಬಾನೆ ಹಾನಿಯಾಗುತ್ತೆ ಅನ್ನೋದು ಗೊತ್ತಾ? 
 

38

ನೀವು ಯಾವಾಗಲೂ ಲಿಪ್ಸ್ಟಿಕ್ ಹಚ್ಚಿಕೊಳ್ಳಲು ಇಷ್ಟಪಡುವ ಮಹಿಳೆಯರಲ್ಲಿ ಒಬ್ಬರಾಗಿದ್ದರೆ, ಮೊದಲು ಅದರ ಅನಾನುಕೂಲಗಳನ್ನು ತಿಳಿದುಕೊಳ್ಳಿ. ಪ್ರತಿಯೊಬ್ಬ ಮಹಿಳೆಯೂ ಈ ಅನಾನುಕೂಲತೆಗಳ ಬಗ್ಗೆ ತಿಳಿದಿರಬೇಕು, ಇದರಿಂದ ಅವರು ತಮ್ಮ ತುಟಿಗಳ ಮೇಲೆ ಅದರ ವ್ಯತಿರಿಕ್ತ (side effects of lipstick)ಪರಿಣಾಮವನ್ನು ತಡೆಯಬಹುದು.  

48

ತುಟಿಗಳು ಡ್ರೈ ಆಗುತ್ತೆ
ನೀವು ಪ್ರತಿದಿನ ಲಿಪ್ ಸ್ಟಿಕ್ ಹಚ್ಚಿದರೆ, ಅದರಲ್ಲಿರುವ ರಾಸಾಯನಿಕಗಳು ತುಟಿಗಳ ತೇವಾಂಶವನ್ನು ತೆಗೆದುಹಾಕುತ್ತವೆ. ಇದು ತುಟಿಗಳು ಒಣಗಲು, (dry lips) ಬಿರುಕು ಬಿಡಲು ಮತ್ತು ಕಿರಿಕಿರಿ ಉಂಟುಮಾಡಲು ಕಾರಣವಾಗಬಹುದು. ಹಾಗಾಗಿ ಎಲ್ಲಾ ಸಮಯದಲ್ಲೂ ಲಿಪ್ ಸ್ಟಿಕ್ ಹಚ್ಚದಿರಲು ಪ್ರಯತ್ನಿಸಿ. ಅಗತ್ಯ ಇದ್ದಾಗ ಮಾತ್ರ ಲಿಪ್ ಸ್ಟಿಕ್ ಬಳಸಿ.
 

58

ತುಟಿಯ ಬಣ್ಣ ಕಪ್ಪಾಗುತ್ತೆ
ಯಾವಾಗಲೂ ಲಿಪ್ ಸ್ಟಿಕ್ ಹಚ್ಚುವುದರಿಂದ ತುಟಿಗಳ ನೈಸರ್ಗಿಕ ಬಣ್ಣ ಮಸುಕಾಗುತ್ತದೆ. ಇದಕ್ಕೆ ಕಾರಣವೆಂದರೆ ಲಿಪ್ ಸ್ಟಿಕ್ ಎಲ್ಲಾ ರೀತಿಯ ರಾಸಾಯನಿಕಗಳನ್ನು ಹೊಂದಿರುತ್ತದೆ, ಇದು ತುಟಿಗಳ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ತುಟಿಗಳು ಕಪ್ಪಾಗುವಂತೆ ಮಾಡುತ್ತೆ. ಇದರಿಂದ ನಿಮ್ಮ ಸೌಂದರ್ಯ ಹಾಳಾಗುತ್ತೆ.

68

ಅಲರ್ಜಿಯ ಅಪಾಯ
ಅನೇಕ ಬಾರಿ ತುಟಿಗಳು ಒಣಗಲು ಪ್ರಾರಂಭಿಸುವುದು ಮಾತ್ರವಲ್ಲ, ಅಲರ್ಜಿಯ(allergy) ಅಪಾಯವೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವಾಗಲೂ ಲಿಪ್ಸ್ಟಿಕ್ ಹಚ್ಚದಿರಲು ಪ್ರಯತ್ನಿಸಿ ಮತ್ತು ನೀವು ಲಿಪ್ ಸ್ಟಿಕ್ ಹಚ್ಚುತ್ತಿದ್ದರೆ, ಅದರ ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸಿ. 

78

ತುಟಿಗಳ ಮೇಲೆ ಕಪ್ಪು ಕಲೆಗಳು
ಹೆಚ್ಚು ಲಿಪ್ ಸ್ಟಿಕ್ ಹಚ್ಚೋದ್ರಿಂದ ತುಟಿಗಳ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ, ಅದು ತುಂಬಾ ಕೆಟ್ಟದಾಗಿ ಕಾಣುತ್ತದೆ. ಈ ಕಲೆಗಳಿಂದಾಗಿ, ತುಟಿಗಳ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. 

88

ಹಾನಿಕಾರಕ ಅಂಶಗಳು ದೇಹಕ್ಕೆ ಸೇರುತ್ತೆ
ಅನೇಕ ಹುಡುಗಿಯರು ತುಟಿಗಳನ್ನು ನಾಲಿಗೆಯಿಂದ ನವರುವ ಅಭ್ಯಾಸವನ್ನು ಹೊಂದಿದ್ದಾರೆ, ಇದರಿಂದಾಗಿ ಹಾನಿಕಾರಕ ಅಂಶಗಳು (chemical) ಅವರ ದೇಹಕ್ಕೆ ಹೋಗುತ್ತವೆ. ಅವು ದೇಹಕ್ಕೆ ಹಾನಿಯನ್ನುಂಟು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಾಧ್ಯವಾದಷ್ಟು ಲಿಪ್ ಸ್ಟಿಕ್ ಬಳಸುವುದನ್ನು ತಪ್ಪಿಸಿ. 
 

click me!

Recommended Stories