ಅಂಡರ್ ಟೋನ್ ಅನ್ನು 3 ರೀತಿಯಲ್ಲಿ ವಿಂಗಡಿಸಲಾಗಿದೆ. ಕೂಲ್, ವಾರ್ಮ್ ಮತ್ತು ನ್ಯೂಟ್ರಲ್. ಇವು ವಿವಿಧ ಬಣ್ಣಗಳಲ್ಲಿ ಕಂಡುಬರುತ್ತವೆ. ಉದಾಹರಣೆಗೆ, ನಿಮ್ಮ ಅಂಡರ್ ಟೋನ್ ಕೂಲ್ ಆಗಿದ್ದರೆ, ನಿಮ್ಮ ಚರ್ಮವು ಗುಲಾಬಿ, ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಹೊಳಪನ್ನು ಪಡೆಯುತ್ತದೆ.
ಅಂಡರ್ ಟೋನ್ ವಾರ್ಮ್ ಆಗಿದ್ದರೆ, ಚರ್ಮವು ಪೀಚ್, ಹಳದಿ ಮತ್ತು ಗೋಲ್ಡನ್ ಹೊಳಪು ಕಾಣುತ್ತದೆ. ನ್ಯೂಟ್ರಲ್ ಅಂಡರ್ ಟೋನ್ ನಲ್ಲಿ ನೀವು ಕೂಲ್ ಮತ್ತು ವಾರ್ಮ್ ಮಿಶ್ರಣವನ್ನು ನೋಡಬಹುದು.
ಅಂಡರ್ ಟೋನ್ ಜೊತೆಗೆ ಚರ್ಮದ ಪ್ರಕಾರವನ್ನು ತಿಳಿದುಕೊಳ್ಳುವುದು ಮುಖ್ಯ. ಎಣ್ಣೆಯುಕ್ತ, ಶುಷ್ಕ, ಸಂಯೋಜನೆಯ ಚರ್ಮವನ್ನು ಗಮನದಲ್ಲಿಟ್ಟುಕೊಂಡು ಫೌಂಡೇಶನ್(Foundation) ಖರೀದಿಸಿ.