ಕ್ವಾರೆಂಟೈನ್‌ನ ಹೊಸ ಚಾಲೆಂಜ್‌ - ಬರೀ ಮೈಗೆ ದಿಂಬಿನ ಡ್ರೆಸ್‌!

First Published | Apr 14, 2020, 7:21 PM IST
ಜನರಿಗೆ ಕ್ವಾರೆಂಟೈನ್‌ ಜೀವನ ಬೇಸರವಾಗಿದೆ. ಮನೆಯಲ್ಲದೇ ಇದ್ದು ಹೊರಗಿನ ಜಗತ್ತಿನ ಜೊತೆ ಕನೆಕ್ಟ್‌ ಆಗಿರಲು ಇರುವ ಒಂದೇ ದಾರಿ ಸೋಶಿಯಲ್‌ ಮಿಡೀಯಾ. ಡಾಲ್ಗೊನಾ ಕಾಫಿ, ಬನಾನ ಬ್ರೆಡ್‌, ನೋ ಮೇಕಪ್‌ ಚಾಲೆಂಜ್‌ ಹೀಗೆ ತರ ತರದ  ಚಾಲೆಂಜ್‌ಗಳು ಹಲವು ದಿನಗಳಿಂದ ಟ್ರೆಂಡ್‌ ಆಗಿತ್ತು. ಈಗ ಮತ್ತೊಂದು ಹೊಸ ಚಾಲೆಂಜ್‌ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗಿದೆ. ಅದೇ #quaratinepillowchallenge .ಬಣ್ಣದ ಬಣ್ಣದ ದಿಂಬುಗಳನ್ನೇ ಬಟ್ಟೆಯಂತೆ ನಗ್ನ ದೇಹಕ್ಕೆ ಅಡ್ಡವಿಟ್ಟುಕೊಂಡು ಕ್ಲಿಕಿಸಿಕೊಂಡ ಫೋಟೋಗಳಿಂದ ಇನ್‌ಸ್ಟಾಗ್ರಾಮ್‌ ತುಂಬಿದೆ ಸದ್ಯಕ್ಕೆ.   
ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್‌ ಆಗಿರುವ ಪಿಲ್ಲೋ ಚಾಲೆಂಜ್‌.
ಡಾಲ್ಗೊನಾ ಕಾಫಿ, ಬನಾನ ಬ್ರೆಡ್ ನಂತರ ಈಗ ಪಿಲ್ಲೋ ಚಾಲೆಂಜ್‌ ಫುಲ್‌ ಫೇಮಸ್‌.
Tap to resize

ಬರೀ ಮೈಗೆ ದಿಂಬಿನ ಕವಚ.ಸನ್‌ ಗ್ಲಾಸ್‌, ಪರ್ಸ್‌,ಹೈ ಹೀಲ್ಸ್‌, ನಾಯಿ ಮರಿ, ಮುದ್ದಿನ ಬೆಕ್ಕು, ಗಿಡಗಳ ಜೊತೆಯೆಲ್ಲಾ ದಿಂಬು ಮೈಗೆ ಸುತ್ತುಕೊಂಡ ಪೋಟೋಗಳದ್ದೇ ಹವಾ.
ನಾವು ಏನು ಕಡಿಮೆ ಇಲ್ಲ ಅಂತ ಗಂಡಸರೂ ಪೋಸ್‌ ಕೊಡುತ್ತಿದ್ದಾರೆ ಪಿಲ್ಲೋ ಚಾಲೆಂಜ್‌ಗೆ.
ಪಿಲ್ಲೋನ್ನೇ ಡ್ರೆಸ್‌ ತರ ಮೈಗೆ ಸುತ್ತುಕೊಂಡು ಸಖತ್ತಾಗಿ ಮೇಕಪ್ ಮಾಡಿಕೊಂಡು, ಜೊತೆಗೆ ಮ್ಯಾಂಚಿಗ್‌ ಆಕ್ಸೆಸರೀಸ್ ಕೂಡ ಹಾಕ್ಕೊಂಡು ಸೇಲ್ಫಿ ತೆಗೆದು ಅಪ್‌ಲೋಡ್‌ ಮಾಡ್ತಿದ್ದಾರೆ.
ಬಣ್ಣ ಬಣ್ಣದ ದಿಂಬುಗಳನ್ನೇ ಮೈಗೆ ಬೆಲ್ಟ್‌ನಿಂದ ಸುತ್ತಿಕೊಂಡರೆ ಚೆಂದದ ಪಿಲ್ಲೋ ಡ್ರೆಸ್‌ ರೆಡಿ.‌
ಯಾವುದೇ ವಯಸ್ಸಿನ ಮಿತಿ ಇಲ್ಲದ ಪಿಲ್ಲೋ ಚಾಲೆಂಜ್‌ಗೆ ಮಕ್ಕಳೂ ಪೋಸ್‌ ಕೊಟ್ಟಿದ್ದಾರೆ.
ಹ್ಯಾಶ್‌ ಟಾಗ್‌ ಬಳಸಿ ಕ್ವಾರೆಂಟೈನ್‌ ಪಿಲ್ಲೋ ಚಾಲೆಂಜ್‌ ಎಂಬ ಪೋಸ್ಟ್‌ಗಳು ಸೋಶಿಯಲ್‌ ಮಿಡೀಯಾದಲ್ಲಿ ವೈರಲ್‌ ಆಗುತ್ತಿವೆ.
ಈ ಚಾಲೆಂಜ್‌ಗೆ ಜಗತ್ತಿನ ಮೂಲೆ ಮೂಲೆಯಿಂದ ಹೆಣ್ಣುಮಕ್ಕಳು ಸ್ಪಂದಿಸಿ,ಬೇರೆಯವರಿಗೂ ಹೀಗೆ ಮಾಡಲು ಚಾಲೆಂಜ್‌ ನೀಡುತ್ತಿದ್ದಾರೆ.
ರಾಮಾಯಣ ಸೀರಿಯಲ್ ನಟಿ ಡೆಬಿನಾ ಬೊನರ್ಜಿ ಪಿಲ್ಲೋ ಚಾಲೆಂಜ್‌ಗೆ ಪೋಸ್‌ ಕೊಟ್ಟಿದ್ದು ಹೀಗೆ.
ದಿಂಬೇ ಆಗಬೇಕು ಅಂತ ಇಲ್ಲ ಬೆಡ್‌ಶೀಟ್‌ ಆದರೂ ಆಗುತ್ತೆ ಮೈಗೆ ಸುತ್ತುಕೊಂಡು ಫೋಸ್‌ ಕೊಡಲು.

Latest Videos

click me!