ರೆಡ್ ಕಾರ್ಪೆಟ್ ಇರಲಿ, ಶೂಟಿಂಗ್ ನಡೆಯೋ ಸೆಟ್ ಇರಲಿ ಸುತ್ತಲಿರುವ ಜನರನ್ನು ಪ್ರಿಯಾಂಕ ತಮ್ಮ ಲುಕ್‌ನಿಂದ ಇಂಪ್ರೆಸ್ ಮಾಡುತ್ತಾರೆ.
ಬಾಲಿವುಡ್‌ನಿಂದ ಹಾಲಿವುಡ್‌ವರೆಗಿನ ಪ್ರಿಯಾಂಕ ಜರ್ನಿ ಸ್ಫೂರ್ಥಿದಾಯಕ
2000ದಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದ ನಂತರ ಪ್ರಿಯಾಂಕ ಚೋಪ್ರಾ ಸಕ್ಸಸ್ ಜರ್ನಿ ಆರಂಭವಾಯಿತು
ಆದರೆ ಆಗಲೂ ಪಿಗ್ಗಿಗೆ ಸವಾಲುಗಳೇನೂ ಕಮ್ಮಿ ಇರಲಿಲ್ಲ
ಸುಂದರವಾ ಉಡುಗೆ ಆಭರಣದೊಂದಿಗೆ ವಿಶ್ವಸುಂದರಿ ವೇದಿಕೆಯಲ್ಲಿ ಮಿಂಚಿದ್ದ ಪ್ರಿಯಾಂಕಳನ್ನು ಎಲ್ಲರೂ ಕಣ್ಣು ಮಿಟುಕಿಸದೆ ನೋಡಿದ್ದರು.
ಆದ್ರೆ ಎಲ್ಲರಿಗೂ ಸುಂದರವಾಗಿ ಕಂಡ ಪ್ರಿಯಾಂಕ ಡ್ರೆಸ್ ಅತ್ಯಂತ ಅನ್‌ಕಂಫರ್ಟೆಬಲ್ ಬಟ್ಟೆ ಎನ್ನುತ್ತಾರೆ ಪಿಗ್ಗಿ
2000ದಲ್ಲಿ ನಾನು ವಿಶ್ವಸುಂದರಿ ಪಟ್ಟ ಗಳಿಸಿದ್ದೆ. ಆದರೆ ಅಂದು ನನ್ನ ಬಟ್ಟೆ ನನ್ನ ಮೈಗೆ ಸುತ್ತಲಾಗಿತ್ತು ಎಂದಿದ್ದಾರೆ ನಟಿ
ಆ ಸುತ್ತಿದ್ದ ಬಟ್ಟೆ ಹಾಗೇ ಬಿಚ್ಚತೊಡಗಿತ್ತು. ನನಗೆ ತುಂಬಾ ಒತ್ತಡದ ಅನುಭವವಾಗಿತ್ತು ಎಂದಿದ್ದಾರೆ ಪ್ರಿಯಾಂಕ
ಆಗ ನಾನು ಮಾಡಿದ್ದೇನೆಂದರೆ ನನ್ನ ಪೂರ್ತಿ ವಾಕ್‌ನಲ್ಲಿ ನನ್ನ ಕೈಗಳನ್ನು ಮಡಚಿ ನಮಸ್ತೆ ಮಾಡಿದೆ
ಎಲ್ಲರೂ ನಾನು ನಮಸ್ತೆ ಮಾಡುತ್ತಿದ್ದೇನೆಂದು ತಿಳಿದುಕೊಂಡಿದ್ದರು.
ನಿಜಕ್ಕೂ ನಾನು ಕೈ ಮಡಚಿ ನನ್ನ ಡ್ರೆಸ್ ಹಿಡಿದುಕೊಂಡಿದ್ದೆ ಎಂಬುದನ್ನು ರಿವೀಲ್ ಮಾಡಿದ್ದಾರೆ ನಟಿ
Suvarna News