ಇಟಲಿ ರಾಂಪ್‌ನಲ್ಲಿಯೂ ಸದ್ದು ಮಾಡಿದ ಕರ್ನಾಟಕ ಮತ್ತು ಮಹಾರಾಷ್ಟ್ರದ ಚಪ್ಪಲಿ

Published : Jul 03, 2025, 03:57 PM ISTUpdated : Jul 03, 2025, 04:01 PM IST

ಈ ಪ್ರದರ್ಶನದಲ್ಲಿ ಕಾಣಿಸಿಕೊಂಡಿರುವ ಪಾದರಕ್ಷೆಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಯಾರಿಸಿದ ಸಾಂಪ್ರದಾಯಿಕ ಭಾರತೀಯ ಪಾದರಕ್ಷೆಗಳಿಂದ ಸ್ಫೂರ್ತಿ ಪಡೆದಿದೆ ಎಂದು ಪ್ರಾಡಾ ಗ್ರೂಪ್‌ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ. 

PREV
14
ಒಪ್ಪಿಕೊಂಡ ಪ್ರಾಡಾ

ಪ್ರಾಡಾ ತನ್ನ ಫ್ಯಾಷನ್ ಶೋನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಸಿದ್ಧ ಕೊಲ್ಹಾಪುರಿ ಚಪ್ಪಲ್ ಅನ್ನು ಪ್ರದರ್ಶಿಸಿತು. ಆ ಸಮಯದಲ್ಲಿ ಭಾರತಕ್ಕೆ ಯಾವುದೇ ಕ್ರೆಡಿಟ್ ನೀಡಲಿಲ್ಲ. ಇದರ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳ ಪ್ರವಾಹವೇ ಹರಿದು ಬಂದಿತು. ಈ ಕೊಲ್ಹಾಪುರಿ ಚಪ್ಪಲ್ ಅನ್ನು ಭಾರತದ ಕಲೆಗೆ ಯಾವುದೇ ಕ್ರೆಡಿಟ್ ಇಲ್ಲದೆ ಪ್ರಾಡಾ ತನ್ನ ಪ್ರದರ್ಶನದಲ್ಲಿ ಬಳಸುವುದು ಸರಿಯಲ್ಲ ಎಂದು ಬಳಕೆದಾರರು ಹೇಳಿದರು. ಆದರೆ ಇದೀಗ ಎನ್‌ಡಿಟಿವಿಗೆ ನೀಡಿದ ಹೇಳಿಕೆಯಲ್ಲಿ ಈ ಚಪ್ಪಲ್‌ಗಳಿಗೆ ಸ್ಫೂರ್ತಿ ಭಾರತದಿಂದ ತೆಗೆದುಕೊಳ್ಳಲಾಗಿದೆ ಎಂದು ಪ್ರಾಡಾ ಒಪ್ಪಿಕೊಂಡಿದೆ. 

24
ಭಾರತೀಯ ಪಾದರಕ್ಷೆಗಳಿಂದ ಸ್ಫೂರ್ತಿ

ಇಟಲಿಯ ಮಿಲನ್‌ನಲ್ಲಿ ನಡೆದ 2026 ರ ವಸಂತ ಬೇಸಿಗೆ ಪ್ರದರ್ಶನದಲ್ಲಿ ಕಾಣಿಸಿಕೊಂಡಿರುವ ಪಾದರಕ್ಷೆಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಯಾರಿಸಿದ ಸಾಂಪ್ರದಾಯಿಕ ಭಾರತೀಯ ಪಾದರಕ್ಷೆಗಳಿಂದ ಸ್ಫೂರ್ತಿ ಪಡೆದಿದೆ ಎಂದು ಪ್ರಾಡಾ ಗ್ರೂಪ್‌ ಪತ್ರಿಕಾ  ಹೇಳಿಕೆಯಲ್ಲಿ ಉಲ್ಲೇಖಿಸಿದೆ. 

34
ಒತ್ತಾಯಿಸಿದ್ದ ನಾಯಕರು

ಮಹಾರಾಷ್ಟ್ರ ವಾಣಿಜ್ಯ ಮಂಡಳಿ (MACCIA) ಪ್ರಾಡಾ ಅವರಿಗೆ ಪತ್ರ ಬರೆದು ಶೋನಲ್ಲಿ ಕಾಣಿಸಿಕೊಂಡ ಪಾದರಕ್ಷೆಗಳು ಭಾರತದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ ಎಂದು ಹೇಳಿತ್ತು. MACCIA ಅಧ್ಯಕ್ಷ ಲಲಿತ್ ಗಾಂಧಿ, "ಕೊಲ್ಹಾಪುರಿ ಚಪ್ಪಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಇದು ಕೇವಲ ಚಪ್ಪಲಿ ಅಲ್ಲ, ಕೊಲ್ಹಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಕುಶಲಕರ್ಮಿಗಳಿಗೆ ಜೀವನೋಪಾಯದ ಮೂಲವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ಸರಿಯಾದ ಗೌರವ ಸಿಗಬೇಕೆಂದು ನಾವು ಬಯಸುತ್ತೇವೆ" ಎಂದು ಹೇಳಿದ್ದರು. ಈ ವಿವಾದದ ಬಗ್ಗೆ ಅನೇಕ ಕುಶಲಕರ್ಮಿಗಳು ಮತ್ತು ನಾಯಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಸಂಸದ ಧನಂಜಯ್ ಮಹಾದಿಕ್ ಕೂಡ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

44
ಕೊಲ್ಹಾಪುರಿ ಚಪ್ಪಲಿಗಳ ಗುರುತೇನು?

ಕೊಲ್ಹಾಪುರಿ ಚಪ್ಪಲ್‌ಗಳು ಮುಂಭಾಗದಲ್ಲಿ ತೆರೆದಿರುವ, ಟಿ-ಆಕಾರದ ಪಟ್ಟಿಯನ್ನು ಹೊಂದಿರುವ ಮತ್ತು ಚರ್ಮದಿಂದ ಮಾಡಲ್ಪಟ್ಟ ಕರಕುಶಲ ಚಪ್ಪಲಿಗಳಾಗಿವೆ. ಅಧಿಕೃತ ಕೊಲ್ಹಾಪುರಿ ಚಪ್ಪಲ್‌ಗಳು ದೀರ್ಘಕಾಲ ಬಾಳಿಕೆ ಬರುವ, ಆರಾಮದಾಯಕ ಮತ್ತು ಸುಂದರವಾದ ಡಿಸೈನ್ ಹೊಂದಿವೆ. ಈ ಚಪ್ಪಲಿಗಳನ್ನು ಹೆಚ್ಚಾಗಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ತಯಾರಿಸಲಾಗುತ್ತದೆ ಮತ್ತು ಕರ್ನಾಟಕದಲ್ಲಿಯೂ ಕಂಡುಬರುತ್ತದೆ.

Read more Photos on
click me!

Recommended Stories