ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮದುವೆ ಹಳೆಯ ಫೋಟೋ
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ (Nita Ambani) 1985 ರಲ್ಲಿ ವಿವಾಹವಾದರು. ನೀತಾ ಅಂಬಾನಿ ಸಾಂಪ್ರದಾಯಿಕ ಗುಜರಾತಿ ಶೈಲಿಯ ಡ್ರೇಪ್ ಲೆಹೆಂಗಾ ಧರಿಸಿದ್ದರು.
ಸಾಂಪ್ರದಾಯಿಕ ವಧುವಾಗಿ ಕಂಗೊಳಿಸಿದ ನೀತಾ ಅಂಬಾನಿ
ನೀತಾ ಅಂಬಾನಿ ಕೆಂಪು ಮತ್ತು ಬಿಳಿ ಬ್ರೈಡಲ್ ಲೆಹೆಂಗಾವನ್ನು ಧರಿಸಿದ್ದರು. ಇದು ಟ್ರೆಡಿಶನಲ್ ಡ್ರೆಸ್ ಆಗಿದ್ದು, ನೀತಾ ಅಂಬಾನಿ ಮುದ್ದಾಗಿ ಕಾಣಿಸಿಕೊಂಡಿದ್ದರು.
ಆನಂದ್ ಪಿರಮಾಲ್ ಮತ್ತು ಇಶಾ ಅಂಬಾನಿ ವಿವಾಹ ದಿನ
ಇಶಾ ಅಂಬಾನಿ (Isha Ambani)ಮತ್ತು ಆನಂದ್ ಪಿರಮಾಲ್ 2018 ರಲ್ಲಿ ವಿವಾಹವಾದರು. ತನ್ನ ತಾಯಿಯಂತೆಯೇ, ಇಶಾ ಕೂಡ ಕೆಂಪು ಮತ್ತು ಬಿಳಿ 'ಪನೇಟರ್' ಸಂಪ್ರದಾಯದ ಬ್ರೈಡಲ್ ಲೆಹೆಂಗಾದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು.
ವಿಶ್ವದ ಅತ್ಯಂತ ದುಬಾರಿ ಲೆಹೆಂಗಾ ಧರಿಸಿದ್ದ ಇಶಾ ಅಂಬಾನಿ
ಅಬು ಜಾನಿ ಸಂದೀಪ್ ಖೋಸ್ಲಾ ಡಿಸೈನ್ ಮಾಡಿದಂತಹ ಲೆಹೆಂಗಾವನ್ನು ಇಶಾ ಅಂಬಾನಿ ಧರಿಸಿದ್ದರು. ಇದರ ಮೌಲ್ಯ ಬರೋಬ್ಬರಿ 90 ಕೋಟಿ ರೂ. ಇಶಾ ಅಂಬಾನಿ ತನ್ನ ಮದುವೆಯ ದಿನದಂದು ತನ್ನ ತಾಯಿಯ ಮದುವೆಯ ಸೀರೆಯನ್ನು ದುಪಟ್ಟಾವಾಗಿ ಧರಿಸಿದ್ದರು.
ಶ್ಲೋಕಾ ಮೆಹ್ತಾ ಮತ್ತು ಆಕಾಶ್ ಅಂಬಾನಿ ಮದುವೆ
ಶ್ಲೋಕಾ ಮೆಹ್ತಾ(Shloka Mehta) ಮತ್ತು ಆಕಾಶ್ ಅಂಬಾನಿ 2019 ರಲ್ಲಿ ವಿವಾಹವಾದರು. ವೋಗ್ ಗೆ ನೀಡಿದ ಸಂದರ್ಶನದಲ್ಲಿ, ಇಶಾ ಅಂಬಾನಿ ಹೇಳಿದಂತೆ "ಆಕಾಶ್ ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದರಂತೆ, ಆದರೆ ಇಶಾ ಹಾಗೂ ಆನಂದ್ ಪಿರಮಾಲ್ ಮದುವೆ ಮೊದಲು ಆಗಬೇಕು ಎನ್ನುವ ಕಾರಣಕ್ಕಾಗಿ ಆಕಾಶ್ ಅಂಬಾನಿ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಎನ್ನಲಾಗಿದೆ.
ಬ್ರೈಡಲ್ ಲೆಹೆಂಗಾದಲ್ಲಿ ಮಿಂಚಿದ ಶ್ಲೋಕಾ ಮೆಹ್ತಾ
ಶ್ಲೋಕಾ ಮೆಹ್ತಾ ಕೂಡ ಎಜೆಎಸ್ಕೆ ವಧು! ವಧುವಿನ ಲೆಹೆಂಗಾ ಜಡೌ ಹ್ಯಾಂಡ್ ಎಂಬ್ರಾಯಿಡರಿ ಹೊಂದಿರುವ ಲೆಹೆಂಗಾ ಆಗಿದ್ದು. ಶ್ಲೋಕಾ ಎರಡು ದುಪಟ್ಟಾಗಳನ್ನು ಧರಿಸಿದ್ದರು. ಶ್ಲೋಕಾ ತಲೆಯ ಮೇಲೆ ಚಿನ್ನದ ಕಸೂತಿ ಮಾಡಿದಂತಹ ಕೆಂಪು ದುಪಟ್ಟಾ ಸುಂದರವಾಗಿ ಕಾಣಿಸುತ್ತಿತ್ತು.
ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅದ್ಧೂರಿ ಮದುವೆ
ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ (Anant Ambani) 2024 ರಲ್ಲಿ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಹೊಂದಿರುವ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಇವರ ಮದುವೆಯ ಆಚರಣೆಗಳು ಹಲವು ದಿನಗಳವರೆಗೆ ನಡೆದಿತ್ತು.
ರಾಧಿಕಾ ಮರ್ಚೆಂಟ್ ಮದುವೆಯ ದಿನ ಪಿತ್ರಾರ್ಜಿತ ಆಭರಣ ಧರಿಸಿದ್ದರು
ರಾಧಿಕಾ ಮರ್ಚೆಂಟ್(Radhika Merchant) ಅವರಿಗೂ ಎಜೆಎಸ್ಕೆ ಲೆಹೆಂಗಾ ಧರಿಸಿದ್ದರು. ರಾಧಿಕ ತಮ್ಮ ಅಜ್ಜಿ, ತಾಯಿ ಮತ್ತು ಸಹೋದರಿ ತಮ್ಮ ಮದುವೆಗಳಿಗೆ ಧರಿಸಿದ್ದ ಕುಟುಂಬದ ಆಭರಣಗಳನ್ನು ಧರಿಸಿ ಸುಂದರವಾಗಿ ಕಾಣಿಸುತ್ತಿದ್ದರು. ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಅವರ ವಧುವಿನ ಲೆಹೆಂಗಾ ಸ್ಪರ್ಶದಂತೆ, ರಾಧಿಕಾ ಕೂಡ ಪನೇತಾರ್ ಲುಕ್ ಅನ್ನು ಆರಿಸಿಕೊಂಡರು. ಪನೇತಾರ್' - ಕೆಂಪು ಮತ್ತು ಬಿಳಿ ಬಟ್ಟೆಗಳಿಂದ ಮಾಡಿದಂತಹ ಗುಜರಾತಿ ಸಂಪ್ರದಾಯ ವಧುವಿನ ಲೆಹೆಂಗಾವಾಗಿದೆ.