ನ್ಯೂಯಾರ್ಕ್ ನಲ್ಲಿ ನೀತಾ ಅಂಬಾನಿ ಜಲ್ವಾ, ಉಟ್ಟ ಸೀರೆ ತಯಾರಾಗಲು 2 ವರ್ಷ ಬೇಕಾಯಿತಂತೆ

Published : Apr 23, 2026, 12:34 PM IST

Nita Ambani : ನ್ಯೂಯಾರ್ಕ್ ಟೈಮ್ಸ್ 100 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ನೀತಾ ಅಂಬಾನಿ ಗಮನ ಸೆಳೆದಿದ್ದಾರೆ. ಅವರ ಲುಕ್ ಎಲ್ಲರನ್ನು ಆಕರ್ಷಿಸಿದೆ. ಅವರು ಧರಿಸಿದ್ದ ಸೀರೆ ವಿಶೇಷತೆ ಇಲ್ಲಿದೆ. 

PREV
17
ನೀತಾ ಅಂಬಾನಿ

ನೀತಾ ಅಂಬಾನಿ ಉದ್ಯಮಿ ಮಾತ್ರವಲ್ಲ, ಸ್ಟೈಲ್ ಗೂ ಹೆಸರುವಾಸಿ. ಪ್ರತಿಬಾರಿಯೂ ಡಿಫರೆಂಟ್ ಶೈಲಿಯಲ್ಲಿ ಕಾಣಿಸಿಕೊಳ್ಳುವ ನೀತಾ ಅಂಬಾನಿ ಎಲ್ಲರ ಗಮನ ಸೆಳೆಯುತ್ತಾರೆ. ಅವರ ಪ್ರತಿಯೊಂದು ಉಡುಪು ಭಾರತೀಯ ಸಂಸ್ಕೃತಿ ಮತ್ತು ಕರಕುಶಲತೆಯನ್ನು ಪ್ರತಿನಿಧಿಸುತ್ತವೆ. ಈಗ ನೀತಾ ಅಂಬಾನಿ ತಮ್ಮ ಹೊಸ ಸೀರೆ ಲುಕ್ ಮೂಲಕ ಸುದ್ದಿ ಮಾಡಿದ್ದಾರೆ. ಈ ಬಾರಿ, ಅವರು ತಮ್ಮ ಸೀರೆಯಿಂದ ಜಗತ್ತನ್ನು ಬೆರಗುಗೊಳಿಸಿದ್ದಾರೆ.

27
ನ್ಯೂಯಾರ್ಕ್ ಟೈಮ್ಸ್ 100 ಶೃಂಗಸಭೆ

ಇತ್ತೀಚೆಗೆ, ನೀತಾ ಅಂಬಾನಿ ನ್ಯೂಯಾರ್ಕ್ ಟೈಮ್ಸ್ 100 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಧರಿಸಿದ್ದ ಉಡುಪು ಎಲ್ಲರ ಮೆಚ್ಚುಗೆ ಗಳಿಸಿದೆ. ಪಾಶ್ಚಿಮಾತ್ಯ ಉಡುಪುಗಳ ಹೊಳಪು ಮತ್ತು ಗ್ಲಾಮರ್ ನಡುವೆ, ಅವರ ಭಾರತೀಯ ಸೀರೆ ಎಲ್ಲರ ಗಮನ ಸೆಳೆದಿದೆ. ನೀತಾ ಅಂಬಾನಿ ಧರಿಸಿದ್ದ ಸೀರೆ ಸಾಮಾನ್ಯದ್ದಲ್ಲ.

37
ಜಮ್ದಾನಿ ಸೀರೆ ವಿಶೇಷತೆ

ಸಾರಿ ವಿಶ್ವಾದ್ಯಂತ ವಿಶೇಷ ಮನ್ನಣೆ ಗಳಿಸಿದೆ. ವಿಶೇಷ ಸಂದರ್ಭಗಳಲ್ಲಿ ಸೀರೆಯನ್ನು ಧರಿಸುವ ನೀತಾ ಅಂಬಾನಿ ಈ ಕಾರ್ಯಕ್ರಮಕ್ಕೂ ಸೀರೆಯಲ್ಲಿ ಬಂದಿದ್ರು. ನೀತಾ ಅಂಬಾನಿ ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಜಮ್ದಾನಿ ಸೀರೆಯುಟ್ಟಿದ್ದರು. ಈ ಸೀರೆ ಬಿರಣ್ ಕುಮಾರ್ ಬಸಕ್ ವಿನ್ಯಾಸಗೊಳಿಸಿದ್ದಾರೆ.ಈ ಸೀರೆಯ ದೊಡ್ಡ ವಿಶೇಷತೆ ಅಂದ್ರೆ ಅದರ ನಿರೂಪಣಾ ವಿನ್ಯಾಸ. ಇದರಲ್ಲಿ ಹಸುಗಳು, ಮಹಿಳೆಯರು, ಪಾರಿವಾಳಗಳು, ಮರಗಳು ಮತ್ತು ಇನ್ನೂ ಅನೇಕ ಸಂಗತಿಗಳನ್ನು ನೋಡ್ಬಹುದು. ನೀತಾ ಅಂಬಾನಿ ಧರಿಸಿದ್ದ ಸೀರೆಯಲ್ಲಿ ಭಾರತದ ಚಿತ್ರಣವಿದೆ. ಬುಡಕಟ್ಟು ಜನಾಂಗ, ಮಾನವ ಆಕೃತಿಗಳು, ಪ್ರಾಣಿ ಮತ್ತು ಪ್ರಕೃತಿಯ ಅಂಶಗಳು ಸೀರೆಯಲ್ಲಿ ಸೇರಿವೆ.

47
ಸೀರೆ ತಯಾರಿ ಸಮಯ

ನೀತಾ ಅಂಬಾನಿ ಧರಿಸಿದ್ದ ಈ ಜಮ್ದಾನಿ ಸೀರೆಯನ್ನು ಬಿರಣ್ ಕುಮಾರ್ ಬಸಕ್ ಎಂಬುವವರು ಕೈಯಿಂದ ನೇಯ್ದಿದ್ದಾರೆ. ಈ ಸೀರೆ ಪೂರ್ಣಗೊಳಿಸಲು ಅವರಿಗೆ 24 ತಿಂಗಳು ಅಥವಾ ಎರಡು ವರ್ಷ ಬೇಕಾಗಿದೆ. ಪ್ರತಿ ವಾರಕ್ಕೂ ವೇಗವಾಗಿ ಫ್ಯಾಷನ್ ಬದಲಾಗುತ್ತಿರುವ ಸಮಯದಲ್ಲಿಇಷ್ಟೊಂದು ಸಮಯ ತೆಗೆದುಕೊಂಡು ಸೀರೆ ತಯಾರಿಸಿದ್ದು ಎಲ್ಲರ ಗಮನ ಸೆಳೆದಿದೆ.

57
ಮೀನಿನ ಗುರುತು

ನೀತಾ ಅಂಬಾನಿ ಸೀರೆ ಪಲ್ಲುವಿನಲ್ಲಿ ಮೀನಿನ ಚಿತ್ರವಿದೆ. ಇದು ಕೇವಲ ವಿನ್ಯಾಸದ ಅಂಶವಲ್ಲ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ಸಾಂಸ್ಕೃತಿಕ ಅಂಶಗಳು ಉಡುಪನ್ನು ಇನ್ನಷ್ಟು ವಿಶೇಷವಾಗಿಸುತ್ತವೆ.

67
ನೀತಾ ಅಂಬಾನಿ ದೇಸಿ ಅವತಾರ

ಈಗಿನ ದಿನಗಳಲ್ಲಿ ಇಂಥ ಸೀರೆಗೆ ಬಹು ಬೇಡಿಕೆ ಇದೆ. ಸರಳ ಸುಂದರಿ ನೀತಾ ಅಂಬಾನಿ ಈ ಸೀರೆಯಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣ್ತಿದ್ದರು. ಬಿಂದಿ ಮತ್ತು ತೆರೆದ ಕೂದಲಿ ಅವರ ದೇಸಿ ಲುಕ್ ಗೆ ಮೆರಗು ನೀಡಿತ್ತು. ತಮ್ಮ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುವ ನೀತಾ ಅಂಬಾನಿ ಈ ಬಾರಿಯೂ ಅದ್ರಲ್ಲಿ ಗೆದ್ದಿದ್ದಾರೆ.

77
ಕನಿಷ್ಠ ಆಭರಣ

ನೀತಾ ಅಂಬಾನಿ ಈ ಸೀರೆಯನ್ನು ಕನಿಷ್ಠ ಆಭರಣಗಳ ಜೊತೆ ಮ್ಯಾಚ್ ಮಾಡಿದ್ರು. ಸೀರೆಯೇ ಸಾಕಷ್ಟು ಗ್ರ್ಯಾಂಡ್ ಆಗಿದ್ರಿಂದ ಅದಕ್ಕೆ ಹೆಚ್ಚಿನ ಆಭರಣ ಅಗತ್ಯವಿರಲಿಲ್ಲ. ಮುತ್ತಿನ ಶ್ರೀ ಪದರದ ಹಾರ, ಪಚ್ಚೆ ಕಿವಿಯೋಲೆ ಮತ್ತು ಪಚ್ಚೆ-ಲೇಪಿತ ಬಳೆಗಳು ಮತ್ತು ಉಂಗುರಗಳನ್ನು ಅವರು ಧರಿಸಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories