240 ಕೋಟಿ ಖಾಸಗಿ ವಿಮಾನದಿಂದ ಕೋಟ್ಯಂತರ ರೂಪಾಯಿ ಆಭರಣಗಳವರೆಗೆ ! Nita Ambani ಐಷಾರಾಮಿ ಕಲೆಕ್ಷನ್ ಇದು

Published : Oct 14, 2026, 12:23 PM IST

ಅಂಬಾನಿ ಕುಟುಂಬದ ಜೀವನಶೈಲಿ ಯಾವಾಗಲೂ ಸುದ್ದಿಯಲ್ಲಿರುತ್ತೆ. ಅದರಲ್ಲೂ ರಿಲಯನ್ಸ್ ಫೌಂಡೇಶನ್‌ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ದುಬಾರಿ ಫ್ಯಾಷನ್ ಕಲೆಕ್ಷನ್, ಕಾರುಗಳು ಮತ್ತು ಐಷಾರಾಮಿ ವಸ್ತುಗಳು ಜನರ ಗಮನ ಸೆಳೆಯುತ್ತವೆ. ನೀತಾ ಅಂಬಾನಿ ಬಳಿ ಇರುವ ಕೆಲ ಐಷಾರಾಮಿ ವಸ್ತುಗಳ ಪಟ್ಟಿ ಇಲ್ಲಿದೆ.

PREV
16
Airbus A319 ಖಾಸಗಿ ವಿಮಾನ

ನೀತಾ ಅಂಬಾನಿ ಅವರ ಐಷಾರಾಮಿ ಜೀವನಶೈಲಿಯ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದು Airbus A319 ಖಾಸಗಿ ವಿಮಾನ. 2007ರಲ್ಲಿ ನೀತಾ ಅಂಬಾನಿ ಅವರ ಬರ್ತ್‌ ಡೇ ಸಂದರ್ಭದಲ್ಲಿ ಪತಿ ಮುಖೇಶ್ ಅಂಬಾನಿ ಈ ವಿಮಾನವನ್ನು ಉಡುಗೊರೆಯಾಗಿ ನೀಡಿದ್ದರು.ಇದರ ಮೌಲ್ಯ ಆಗ 240 ಕೋಟಿ ರೂಪಾಯಿಯಿತ್ತು. ಈ ವಿಮಾನದ ವಿಶೇಷತೆ ಕೇವಲ ಅದರ ಬೆಲೆಯಲ್ಲಿಲ್ಲ. ವಿಮಾನದ ಒಳಗೆ ಕಚೇರಿ ವ್ಯವಸ್ಥೆ, ಮಾಸ್ಟರ್ ಬೆಡ್ರೂಮ್, ಅಟ್ಯಾಚ್ಡ್ ಬಾತ್ರೂಮ್, ಡೈನಿಂಗ್ ವ್ಯವಸ್ಥೆ ಮತ್ತು ಸ್ಕೈ ಬಾರ್ನಂತಹ ಐಷಾರಾಮಿ ಸೌಲಭ್ಯಗಳಿವೆ. ಇದರ ಜೊತೆಗೆ ಸ್ಯಾಟಲೈಟ್ ಟಿವಿ, ಮ್ಯೂಸಿಕ್ ಸಿಸ್ಟಮ್, ಗೇಮಿಂಗ್ ವ್ಯವಸ್ಥೆ ಮತ್ತು ವೈರ್ಲೆಸ್ ಕಮ್ಯುನಿಕೇಷನ್ ಸೌಲಭ್ಯಗಳೂ ಇವೆ ಎನ್ನಲಾಗಿದೆ.

26
ಎಮರಾಲ್ಡ್ ನೆಕ್ಲೇಸ್‌

ನೀತಾ ಅಂಬಾನಿ ಅವರ ಐಷಾರಾಮಿ ಆಭರಣಗಳ ಕಲೆಕ್ಷನ್ನಲ್ಲಿ ಮತ್ತೊಂದು ದುಬಾರಿ ಆಭರಣ ಎಲ್ಲರ ಗಮನ ಸೆಳೆದಿದೆ. ಅದುವೇ ಸುಮಾರು ₹400 ಕೋಟಿಯಿಂದ ₹500 ಕೋಟಿ ಮೌಲ್ಯದ್ದು ಎನ್ನಲಾದ ಎಮರಾಲ್ಡ್ ಡೈಮಂಡ್ ನೆಕ್ಲೇಸ್. 2024ರ ಮಾರ್ಚ್ನಲ್ಲಿ ಗುಜರಾತ್ನ ಜಾಮ್ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಈ ಆಕರ್ಷಕ ಹಾರವನ್ನು ಧರಿಸಿದ್ದರು.

36
ರೋಲ್ಸ್‌-ರಾಯ್ಸ್ ಕಲಿನನ್ ಕಾರು

ನೀತಾ ಅಂಬಾನಿ ಅವರ ಕಾರುಗಳ ಕಲೆಕ್ಷನ್ನಲ್ಲಿರುವ ಮತ್ತೊಂದು ಐಷಾರಾಮಿ ವಾಹನ ರೋಲ್ಸ್‌-ರಾಯ್ಸ್ ಕಲಿನನ್ Black Badge. 2023ರ ದೀಪಾವಳಿ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಅವರು ನೀತಾ ಅಂಬಾನಿ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಮೌಲ್ಯ ಸುಮಾರು 10 ಕೋಟಿ ಎಂದು ಅಂದಾಜಿಸಲಾಗಿದೆ. ರೋಲ್ಸ್‌-ರಾಯ್ಸ್ ಎಂದರೆ ಐಷಾರಾಮಿ ಕಾರುಗಳ ಜಗತ್ತಿನಲ್ಲಿ ಪ್ರಸಿದ್ಧವಾದ ಬ್ರಿಟಿಷ್ ಬ್ರ್ಯಾಂಡ್. ಅದರ Cullinan ಮಾದರಿ ಒಂದು ಲಕ್ಸುರಿ SUV ಆಗಿದೆ. ಈ ಕಾರಿನಲ್ಲಿ 6.75 ಲೀಟರ್ V12 ಟ್ವಿನ್-ಟರ್ಬೊ ಎಂಜಿನ್ ಇದೆ. Black Badge ಆವೃತ್ತಿಯು ಶಕ್ತಿಶಾಲಿ ಎಂಜಿನ್ ಮತ್ತು ವಿಶೇಷ ವಿನ್ಯಾಸದ ಮೂಲಕ ಗಮನ ಸೆಳೆಯುತ್ತದೆ. ನೀತಾ ಅಂಬಾನಿ ಅವರ ಕಾರಿನ ಬಣ್ಣ ಮತ್ತು ಕಸ್ಟಮೈಸೇಷನ್ ಕೂಡ ಸುದ್ದಿಯಾಗಿತ್ತು. ವರದಿಗಳ ಪ್ರಕಾರ, ಈ Cullinan ಕಾರಿಗೆ ಆಕರ್ಷಕ ಕಿತ್ತಳೆ ಬಣ್ಣದ Tuscan Sunshade ಫಿನಿಶ್ ನೀಡಲಾಗಿದೆ. ಕಾರಿನ ನಿಖರವಾದ ಬೆಲೆ ಕಸ್ಟಮೈಸೇಷನ್ ಮತ್ತು ಇತರ ಆಯ್ಕೆಗಳನ್ನು ಅವಲಂಬಿಸಿ ಬದಲಾಗುತ್ತದೆ.

46
ಹರ್ಮೆಸ್ ಹಿಮಾಲಯ ಬಿರ್ಕಿನ್ ಹ್ಯಾಂಡ್ಬ್ಯಾಗ್

ನೀತಾ ಅಂಬಾನಿ ಅವರ ಫ್ಯಾಷನ್ ಕಲೆಕ್ಷನ್ನಲ್ಲಿ ಹೆಚ್ಚು ಚರ್ಚೆಗೆ ಬಂದಿರುವ ವಸ್ತುಗಳಲ್ಲಿ ಹರ್ಮೆಸ್ ಹಿಮಾಲಯ ಬಿರ್ಕಿನ್ ಹ್ಯಾಂಡ್ಬ್ಯಾಗ್ ಕೂಡ ಒಂದು. ಮಾಧ್ಯಮ ವರದಿಗಳ ಪ್ರಕಾರ, ಈ ಬ್ಯಾಗ್ನ ಮೌಲ್ಯ 2.6 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಬ್ಯಾಗ್ ಇಷ್ಟೊಂದು ದುಬಾರಿಯಾಗಿರುವುದಕ್ಕೆ ಅದರ ಬ್ರ್ಯಾಂಡ್ ಮಾತ್ರ ಕಾರಣವಲ್ಲ. ಇದರ ಅಪರೂಪದ ವಿನ್ಯಾಸ, ತಯಾರಿಕೆಗೆ ಬಳಸುವ ವಸ್ತುಗಳು ಮತ್ತು ಕೆಲವು ವಿಶೇಷ ಆವೃತ್ತಿಗಳಲ್ಲಿ ಬಳಸಿರುವ ವಜ್ರಗಳೂ ಪ್ರಮುಖ ಕಾರಣಗಳಾಗಿವೆ. ಹರ್ಮೆಸ್ ಹಿಮಾಲಯ ಬಿರ್ಕಿನ್ ಹ್ಯಾಂಡ್ಬ್ಯಾಗ್ ನ ವಿಶೇಷತೆ ಅದರ ಬಣ್ಣದಲ್ಲಿದೆ. ಬಿಳಿ ಮತ್ತು ಬೂದು ಬಣ್ಣಗಳು ಕ್ರಮೇಣ ಬದಲಾಗುವ ವಿನ್ಯಾಸವು ಹಿಮಾಲಯದ ಹಿಮದಿಂದ ಪ್ರೇರಣೆ ಪಡೆದಿದೆ. ನೀತಾ ಅಂಬಾನಿ ಅವರ ಬ್ಯಾಗ್ ಬಗ್ಗೆ ಬಂದ ವರದಿಗಳ ಪ್ರಕಾರ ಇದಕ್ಕೆ 18 ಕ್ಯಾರೆಟ್ ಬಿಳಿ ಚಿನ್ನದ ಬಿಡಿಭಾಗಗಳು ಮತ್ತು 240ಕ್ಕೂ ಹೆಚ್ಚು ವಜ್ರಗಳನ್ನು ಸೇರಿಸಲಾಗಿದೆ.

56
ನೊರಿಟೇಕ್ (Noritake) ಟೀ ಸೆಟ್

ನೀತಾ ಅಂಬಾನಿ ಅವರ ಹೆಸರಿನೊಂದಿಗೆ ಕೇಳಿಬರುವ ಮತ್ತೊಂದು ಕುತೂಹಲಕಾರಿ ವಸ್ತು ಎಂದರೆ ನೊರಿಟೇಕ್ ಟೀ ಸೆಟ್. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಇದರ ಬೆಲೆ ಸುಮಾರು 1.5 ಕೋಟಿ ಎನ್ನಲಾಗಿದೆ. ನೊರಿಟೇಕ್ ಜಪಾನ್ನ ಪ್ರಸಿದ್ಧ ಟೇಬಲ್ವೇರ್ ಬ್ರ್ಯಾಂಡ್. ಇದು ಪಿಂಗಾಣಿ ಪಾತ್ರೆಗಳು, ಟೀ ಕಪ್ಗಳು, ಡಿನ್ನರ್ ಸೆಟ್ಗಳು ಮತ್ತು ಅಲಂಕಾರಿಕ ಪಾತ್ರೆಗಳಿಗೆ ಹೆಸರುವಾಸಿಯಾಗಿದೆ. ಸಾಮಾನ್ಯ ಟೀ ಸೆಟ್ಗಳಿಗೆ ಹೋಲಿಸಿದರೆ, ವಿಶೇಷ ವಿನ್ಯಾಸ, ದುಬಾರಿ ಅಲಂಕಾರ ಮತ್ತು ಚಿನ್ನ ಅಥವಾ ಪ್ಲಾಟಿನಂ ಲೇಪನದಂತಹ ವಿವರಗಳು ಕೆಲವು ಪ್ರೀಮಿಯಂ ಸೆಟ್ಗಳ ಮೌಲ್ಯವನ್ನು ಹೆಚ್ಚಿಸಬಹುದು. ವರದಿಗಳಲ್ಲಿ ಉಲ್ಲೇಖವಾಗಿರುವ ನೀತಾ ಅಂಬಾನಿ ಅವರ ಟೀ ಸೆಟ್ನ ಕಪ್ಗಳಲ್ಲಿ ಚಿನ್ನ ಮತ್ತು ಪ್ಲಾಟಿನಂ ಲೇಪನವಿದೆ.

66
ಮೊಘಲ್ ಕಾಲದ ತೋಳುಬಂಧಿ

ನೀತಾ ಅಂಬಾನಿ ಅವರ ಐಷಾರಾಮಿ ಆಭರಣಗಳ ಕಲೆಕ್ಷನ್ನಲ್ಲಿ ಇತಿಹಾಸದ ಜೊತೆ ನಂಟು ಹೊಂದಿರುವ ಒಂದು ಅಪರೂಪದ ಆಭರಣವೂ ಇದೆ. ಅದುವೇ ಮೊಘಲ್ ಕಾಲದ ಬಾಜೂಬಂದ್ (Bajuband). ಇದರ ಮೌಲ್ಯ ₹200 ಕೋಟಿಗೂ ಹೆಚ್ಚು ಎಂದು ಮಾಧ್ಯಮ ವರದಿಗಳಲ್ಲಿ ಅಂದಾಜಿಸಲಾಗಿದೆ. ಈ ಆಭರಣದ ವಿಶೇಷತೆ ಏನೆಂದರೆ, ಇದು ಮೂಲತಃ ಕೈಗೆ ಧರಿಸುವ ತೋಳುಬಂಧಿಯಾಗಿರಲಿಲ್ಲ. ಮೊಘಲ್ ಚಕ್ರವರ್ತಿ ಷಹಜಹಾನ್ ತಲೆಗೆ ಕಟ್ಟುತ್ತಿದ್ದ ತಲಪಾಗೆಯಲ್ಲಿ ಇದನ್ನು ಧರಿಸುತ್ತಿದ್ದರು ಎಂದು ವರದಿಯಾಗಿದೆ. 2024ರ ಮಾರ್ಚ್ನಲ್ಲಿ ಮುಂಬೈನಲ್ಲಿ ನಡೆದ 71ನೇ ಮಿಸ್ ವರ್ಲ್ಡ್ ಫೈನಲ್ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಈ ಅಪರೂಪದ ಆಭರಣವನ್ನು ಧರಿಸಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories