ಐರನ್ ಮಾಡುವಾಗ ಸುಟ್ಟಿದ್ದಲ್ಲ, ಈ ಫ್ಯಾಶನ್ ಡಿಸೈನ್ ಡ್ರೆಸ್‌ಗೆ 1 ಲಕ್ಷ ರೂಪಾಯಿ ಬೆಲೆ

Published : Feb 19, 2026, 09:11 PM IST

ಐರನ್ ಮಾಡುವಾಗ ಸುಟ್ಟಿದ್ದಲ್ಲ, ತಪ್ಪಾಗಿ ಐರನ್ ಬಾಕ್ಸ್ ಇಟ್ಟಿದ್ದೂ ಇಲ್ಲ. ಇದು ಈಗನ ಫ್ಯಾಶನ್ ಡಿಸೈನ್. ಈ ಬರ್ನ್ ಸಿಂಬಲ್ ಶರ್ಟ್ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. ನೀವು ಡ್ರೆಸ್‌ಗೆ ಐರನ್ ಮಾಡುವಾಗ ಈ ರೀತಿ ಸುಟ್ಟಿದ್ದರೆ ಬಿಸಾಡಬೇಡಿ ಅದರ ಮೌಲ್ಯ ಊಹೆಗೂ ಮೀರಿದೆ.

PREV
15
ಇದು ಫ್ಯಾಶನ್

ಹರಿದ ಜೀನ್ಸ್, ಹರಿದ ಡ್ರೆಸ್, ಗೋಣಿ ಚೆಲ್ ಡ್ರೆಸ್ ರೀತಿಯ ಹಲವು ಫ್ಯಾಶನ್ ಟ್ರೆಂಡ್ ಆಗಿದೆ. ಇದನ್ನು ಎಲ್ಲಾ ಕಡೆ ನೋಡಿರುತ್ತೀರಿ. ಇದೀಗ ಡ್ರೆಸ್ ಹಳೆದಾಯ್ತು, ಅಥವಾ ಬಟನ್ ಕಿತ್ತೊಯ್ತು, ಕಲರ್ ಫೇಡ್ ಆಯ್ತು ಅಂತಾ ಬಿಸಾಡಬೇಡಿ. ಕಾರಣ ಯಾವಾಗ ಯಾವ ಫ್ಯಾಶನ್ ಟ್ರೆಂಡ್ ಆಗುತ್ತೆ ಅನ್ನೋದ ಯಾರಿಗೂ ಗೊತ್ತಿಲ್ಲ. ಕಾರಣ ಇದೀಗ ಐರನ್ ಬಾಕ್ಸ್ ಇಟ್ಟು ಸುಟ್ಟಂತೆ ಇರುವ ಈ ಡ್ರೆಸ್ ಟ್ರೆಂಡ್ ಆಗಿದೆ. ಇದು ಅಚಾನಕ್ಕಾಗಿ ಸುಟ್ಟಿದ್ದಲ್ಲ, ಇದು ಫ್ಯಾಶನ್. ಈ ಸುಟ್ಟ ಐರಾನ್ ಬಾಕ್ಸ್ ಡಿಸೈನ್ ಡ್ರೆಸ್‌ಗೆ 1 ಲಕ್ಷ ರೂಪಾಯಿ ಬೆಲೆ.

25
ವೆಟೆಮೆಂಟ್ಸ್ ಲಕ್ಷುರಿ ಶರ್ಟ್

ವೆಟೆಮಂಟ್ಸ್ ಸ್ವಿಸ್ ಬ್ರ್ಯಾಂಡೆಡ್ ಡ್ರೆಸ್ ಬ್ರ್ಯಾಂಡ್. ಇದೀಗ ಈ ವೆಟೆಮಂಟ್ಸ್ ಹೊಸ ಡ್ರೆಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪುರುಷರ ಶರ್ಟ್ ಇದಾಗಿದೆ. ಇದರ ಜೇಬಿನ ಮೇಲೆ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟಂತೆ ಡಿಸೈನ್ ಮಾಡಲಾಗಿದೆ. ಈ ರೀತಿ ಸುಟ್ಟ ಐರನ್ ಬಾಕ್ಸ್ ಡಿಸೈನ್ ಲೋಗೋ ಇರುವ ಡ್ರೆಸ್ ಬೆಲೆ $1,139. ಅಂದರೆ ಸರಿಸುಮಾರು ಭಾರತೀಯ ರೂಪಾಯಿಗಳಲ್ಲಿ 1 ಲಕ್ಷ ರೂಪಾಯಿ.

35
ಐಡಿಯಾ ಇಲ್ಲದಿದ್ದರೆ ಕೊಡ್ತೇವೆ ಎಂದ ನೆಟ್ಟಿಗರು

ಫ್ಯಾಶನ್ ಕಂಪನಿಗಳು ಹೊಸ ಹೊಸ ಐಡಿಯಾ ಇಲ್ಲದಿದ್ದರೆ ನಾವು ಕೊಡುತ್ತೇವೆ. ಈ ರೀತಿಯ ಫ್ಯಾಶನ್‌ಗೆ ಅರ್ಥವೇ ಇಲ್ಲ. ನಿಮಗೆ ಹೊಸ ಫ್ಯಾಶನ್ ಐಡಿಯಾ ಇಲ್ಲದೆ ರೀತಿ ಅಸಂಬದ್ಧ ಡಿಸೈನ್ ಮಾಡಿ ಲಕ್ಷ ಲಕ್ಷ ರೂಪಾಯಿ ಕೀಳಬೇಡಿ ಎಂದು ಸಲಹೆ ನೀಡಿದ್ದಾರೆ. ಬಿಳಿ ಶರ್ಟ್‌ನಲ್ಲಿ ಈ ರೀತಿಯ ಡಿಸೈನ್ ಮಾಡಿ 1 ಲಕ್ಷ ಕಿತ್ತುಕೊಳ್ಳುತ್ತಿದ್ದರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

45
ಲಾಂಡ್ರಿಯಲ್ಲಿ ನಡೆದ ಘಟನೆಯೇ

ಶರ್ಟ್ ಹೊಲಿದ ಸಿಬ್ಬಂದಿಗಳು ಐರನ್ ಮಾಡುವಾಗ ಅಚನಕ್ಕಾಗಿ ಸುಟ್ಟಿದೆ. ಅದನ್ನೇ ಫ್ಯಾಶನ್ ಎಂದು ಜಗತ್ತಿನ ಮುಂದೆ ಹೇಳುತ್ತಿದ್ದಾರೆ. ಈ ರೀತಿಯ ಫ್ಯಾಶನ್ ಟ್ರೆಂಡ್ ಮಾಡಲು ಒಂದಷ್ಟು ಮಂದಿಗೆ ದುಡ್ಡು ನೀಡಲಾಗಿರುತ್ತೆ. ಲಕ್ಷ ಲಕ್ಷ ರೂಪಾಯಿ ಕಿತ್ತುಕೊಳ್ಳುವ ದುಡ್ಡಿನಲ್ಲಿ ಪ್ರಮೋಶನ್ ಮಾಡಿ ಟ್ರೆಂಡ್ ಮಾಡುತ್ತಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

55
ಜೆನ್‌ಝಿ ಜಮಾನದಲ್ಲಿ ಎಲ್ಲವು ಫ್ಯಾಶನ್

ಜೆನ್‌ಝಿ , ಮಿಲೆನಿಯಲ್ಸ್ ಜಮಾನದಲ್ಲಿ ಎಲ್ಲವೂ ಫ್ಯಾಶನ್. ಹೀಗಾಗಿ ಹರಿದರೂ ಫ್ಯಾಶನ್, ಸುಟ್ಟರೂ ಫ್ಯಾಶನ್. ವಿಶೇಷ ಅಂದರೆ ಈ ರೀತಿಯ ಡ್ರೆಸ್‌ಗೆ ಬೆಲೆ ಎಷ್ಟಾದರೂ ಸರಿ ಭಾರಿ ಬೇಡಿಕೆಯೂ ವ್ಯಕ್ತವಾಗುತ್ತದೆ.

ಜೆನ್‌ಝಿ ಜಮಾನದಲ್ಲಿ ಎಲ್ಲವು ಫ್ಯಾಶನ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories