ವೃತ್ತಿಯಲ್ಲಿ ರೂಪದರ್ಶಿಯಾಗಿರುವ ಎಡೋರ್ಡೊ ಸ್ಯಾಂಟಿನ್, ಇಟಲಿಯ ಅತ್ಯಂತ ಹ್ಯಾಂಡ್ ಸಮ್ ಹುಡುಗರಲ್ಲಿ ಒಬ್ಬರು ಎನ್ನಬಹುದು. ಇದೀಗ ಅವರು ತಮ್ಮ ಮಾಡೆಲಿಂಗ್ ಕ್ಷೇತ್ರ ಬಿಟ್ಟು ಪಾದ್ರಿಯಾಗಲು ಸಜ್ಜಾಗುವ ಮೂಲಕ ಸುದ್ದಿಯಾಗಿದ್ದಾರೆ.
ಫ್ಯಾಷನ್ ಗ್ರೂಪ್ ಎಬಿಇ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಎಡೋರ್ಡೊ ಸ್ಯಾಂಟಿನಿ (Edoardo Santini) 2019 ರಲ್ಲಿ ಇಟಲಿಯ ಅತ್ಯಂತ ಸುಂದರ ವ್ಯಕ್ತಿಯ (Most handsome Man) ಟೈಟಲ್ ಪಡೆದಿದ್ದರು. ಜೊತೆಗೆ ಮಾಡೆಲಿಂಗ್ ಮತ್ತು ನಟನಾ ವೃತ್ತಿಯಲ್ಲಿ ಗುರುತಿಸಿಕೊಂಡಿದ್ದ ಈ ಹುಡುಗ ಇದೀಗ ತಮ್ಮ ವಿಶಿಷ್ಠ ನಿರ್ಧಾರದಿಂದ ಸುದ್ದಿಯಾಗಿದ್ದಾರೆ.
27
ಎಡೋರ್ಡೊ ಇತ್ತೀಚೆಗೆ ತನ್ನ 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಮತ್ತು ಅದನ್ನು ಘೋಷಿಸಲು ಇನ್ಸ್ಟಾಗ್ರಾಮ್ ವೀಡಿಯೊವನ್ನು (Instagram Video) ಹಂಚಿಕೊಂಡಿದ್ದಾರೆ. ಹಂಚಿಕೊಂಡ ವಿಷಯ ಸದ್ಯ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿದೆ. ಅದೇನೆಂದು ತಿಳಿಯಲು ಮುಂದೆ ಓದಿ.
37
ಈ ಮೋಸ್ಟ್ ಹ್ಯಾಂಡ್ಸಮ್ ಯುವಕ ಇದೀಗ ನಟನೆ ಮತ್ತು ಮಾಡೆಲಿಂಗ್ ಬಿಟ್ಟು ಪಾದ್ರಿಯಾಗುವುದಾಗಿ ಘೋಷಿಸುವ ಮೂಲಕ ಇಟಲಿಯ ಮಾಡೆಲಿಂಗ್ ಪ್ರಪಂಚದಾದ್ಯಂತ ಸಂಚಲನ ಮೂಡಿಸಿದ್ದಾನೆ. ನಿಜವಾಗಿಯೂ ಈ ರೀತಿ ಮಾಡಲು ಸಾಧ್ಯವೇ ಎಂದು ಜನ ಕೇಳ್ತಿದ್ದಾರೆ.
47
ಮಾಡೆಲ್ (Model) ಆಗಿರುವ ಎಡೊರ್ಡೋ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾನು ಫ್ಲಾರೆನ್ಸ್ ಬಳಿಯ ಸೆಮಿನರಿಗೆ ಸೇರಿದ್ದೇನೆ ಎಂದು ಘೋಷಿಸಿದರು. ಜೊತೆಗೆ '21 ನೇ ವಯಸ್ಸಿನಲ್ಲಿ, ನನ್ನ ತಂದೆ ನನ್ನ ತಾಯಿಯನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಂಡರು ಏಕೆಂದರೆ ಅವರು ಗರ್ಭಿಣಿಯಾಗಿದ್ದರು ಮತ್ತು ನನ್ನ ಅಮ್ಮ, 21 ನೇ ವಯಸ್ಸಿನಲ್ಲಿ ತಾಯಿಯಾದರು. ನಾನು, 21 ನೇ ವಯಸ್ಸಿನಲ್ಲಿ, ದೇವರ ಇಚ್ಛೆಯಂತೆ, ಪಾದ್ರಿಯಾಗುವ (priest) ಮಾರ್ಗ ಆಯ್ದುಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
57
ಎಲ್ಲಾ ಆಕರ್ಷಕ ಕ್ಷೇತ್ರವನ್ನು ಬಿಟ್ಟು ಪಾದ್ರಿಯಾಗುವ ತಮ್ಮ ನಿರ್ಧಾರವನ್ನು ತಿಳಿಸಿದ ಎಡೊರ್ಡೋ "ನಾನು ಮಾಡೆಲಿಂಗ್ (modelling) ಕೆಲಸ, ನಟನೆ ಮತ್ತು ನೃತ್ಯವನ್ನು ತ್ಯಜಿಸಲು ನಿರ್ಧರಿಸಿದ್ದೇನೆ, ಆದರೆ ನಾನು ನನ್ನ ಎಲ್ಲಾ ಪ್ಯಾಶನ್ ಬಿಡುವುದಿಲ್ಲ; ನಾನು ಅವುಗಳನ್ನು ವಿಭಿನ್ನವಾಗಿ ಬದುಕುತ್ತೇನೆ, ಅವುಗಳನ್ನು ದೇವರಿಗೆ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
67
ಎಡೋರ್ಡೊ ಅವರು ಚರ್ಚ್ ನಲ್ಲಿ ಮೊಣಕಾಲೂರಿ ನಿಂತಿರುವ ಚಿತ್ರಗಳನ್ನು ಒಳಗೊಂಡ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಶೀರ್ಷಿಕೆ ಹೀಗಿದೆ, 'ಪಾದ್ರಿಯಾಗುವುದರ) ಬಗ್ಗೆ ನನಗೆ ತುಂಬಾ ಪ್ರಶ್ನೆಗಳಿದ್ದವು, ಹಲವು ಸಮಯದಿಂದ ನಾನು ಅದರ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದೆನು. ಕಳೆದ ವರ್ಷ, ನಾನು ಮೊದಲ ಹೆಜ್ಜೆ ಇಟ್ಟೆ, ಆದರೆ ನನ್ನ ನಡೆಯ ನಿಜವಾದ ಕಾರಣವನ್ನು ನಾನು ಕೆಲವರಿಗೆ ಹೇಳಿದ್ದೆ, ಆದರೆ ಪಾದ್ರಿಯಾಗಲು ನನಗೆ ಇನ್ನಷ್ಟು ಸಮಯ ಬೇಕಿತ್ತು. ಈ ವರ್ಷ, ನನ್ನ 21ನೇ ಹುಟ್ಟುಹಬ್ಬದ ಮುಂಜಾನೆ, ನಾನು ಪಾದ್ರಿಯಾಗಲು ಸಿದ್ಧನಿದ್ದೆನೆ ಎನ್ನುವ ಭರವಸೆ ನನಗೆ ದೊರೆತಿದೆ ಎಂದು ಬರೆದುಕೊಂಡಿದ್ದಾರೆ.
77
ಎಡೋರ್ಡೊ ಈ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ ನಂತರ, ಅವರ ಇನ್ ಸ್ಟಾಗ್ರಾಂ ಫಾಲೋವರ್ಸ್ ಅವರ ನಿರ್ಧಾರವನ್ನು ಶ್ಲಾಘಿಸಿದರು. ವಾವ್ ಎಡೋರ್ಡೊ! ಮುಂದುವರಿಯಿರಿ, ಯೇಸು ನಿಮ್ಮೊಂದಿಗೆ ಇದ್ದರೆ, ನೀವು ಎಲ್ಲವನ್ನೂ ಗೆಲ್ಲುವಿರಿ! ನಾವು ನಿಮ್ಮೊಂದಿಗೆ ಪ್ರಾರ್ಥನೆಯಲ್ಲಿ ಇರುತ್ತೇವೆ. ಎಂದು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.