2024 ರ ಹೊಸ ವರ್ಷದ ಇನ್ನೇನು ಕೊನೆಗೊಳ್ಳಲಿದೆ. ಹೊಸ ವರ್ಷವನ್ನು (new year party) ಆಚರಿಸಲು ಪ್ರತಿಯೊಬ್ಬರೂ ತಮ್ಮದೇ ಆದ ಪ್ಲ್ಯಾನ್ ಹೊಂದಿದ್ದಾರೆ. ಈ ಸಂಜೆಯನ್ನು ಸುಂದರವಾಗಿಸಲು ಜನರು ಈಗಾಗಲೇ ರೆಡಿಯಾಗಿದ್ದಾರೆ. ಸ್ಟೈಲಿಶ್ ಮತ್ತು ಗ್ಲಾಮ್ ಲುಕ್ ಪಡೆಯಲು ಮಹಿಳೆಯರು ಟ್ರೆಂಡಿ ಉಡುಪುಗಳನ್ನು ಧರಿಸುತ್ತಾರೆ. ಅದೇ ಸಮಯದಲ್ಲಿ, ಹುಡುಗರು ಸಹ ತಮ್ಮನ್ನು ಸುಂದರವಾಗಿಸಲು ಸಾಕಷ್ಟು ಪ್ರಯತ್ನಿಸುತ್ತಾರೆ.
ಫ್ಯಾಷನ್ ಟ್ರೆಂಡ್ (fashion trend) ಎಲ್ಲಾ ಸಮಯದಲ್ಲೂ ಬದಲಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಹದಿಹರೆಯದವರಿಂದ ಹಿಡಿದು 35 ವರ್ಷದ ಯುವಕರವರೆಗೆ, ಹೊಸ ವರ್ಷದ ಪಾರ್ಟಿ ಆಚರಣೆಯಲ್ಲಿ ಏನು ಧರಿಸಬೇಕು, ಏನು ಧರಿಸಬಾರದು ಎಂದು ನೀವು ಯೋಚನೆ ಮಾಡ್ತ ಇದ್ದರೆ, ಇಲ್ಲಿದೆ ನಿಮಗಾಗಿ ಫ್ಯಾಷನ್ ಟಿಪ್ಸ್.
ಪುರುಷರಿಗೆ, ಡೆನಿಮ್ ಜೀನ್ಸ್ (denim jeans) ಯಾವಾಗಲೂ ಪರ್ಫೆಕ್ಟ್ ಮತ್ತು ಆರಾಮದಾಯಕ ಆಯ್ಕೆಯಾಗಿದೆ. ಹಾಗಾಗಿ ಹೊಸ ವರ್ಷದ ಮುನ್ನಾದಿನದ ಪಾರ್ಟಿಯಲ್ಲಿ ನೀವು ಜೀನ್ಸ್ ಧರಿಸಬಹುದು, ಇದಲ್ಲದೆ, ನೀವು ಚಿನೋಸ್ ಸಹ ಧರಿಸಬಹುದು. ಇದು ತುಂಬಾ ಕೂಲ್ ಮತ್ತು ಆರಾಮದಾಯಕ ಲುಕ್ ನೀಡುವ ಪ್ಯಾಂಟ್ ಆಗಿದೆ. ಸ್ಲಿಮ್ಮರ್ ಫಿಟ್ ಚಿನೋಸ್ ಪ್ಯಾಂಟ್ ಸಹ ಚೆನ್ನಾಗಿರುತ್ತೆ. ಯಾರು ಬೇಕಾದರೂ ಇದನ್ನು ಧರಿಸಬಹುದು. ಇದನ್ನು ಲೆದರ್ ಜಾಕೆಟ್, ಟಿ-ಶರ್ಟ್ ಜೊತೆ ಪ್ರಯತ್ನಿಸಿ. ನೀವು ಡ್ಯಾಶಿಂಗ್ ಆಗಿ ಕಾಣುತ್ತೀರಿ.
ಪಾರ್ಟಿಯಲ್ಲಿ, ನಿಮ್ಮ ನೋಟವು ಸಂಭಾವಿತ ವ್ಯಕ್ತಿಯಂತೆ ಇರಬೇಕೆಂದು ನೀವು ಬಯಸಿದರೆ, ನೀವು ವೆಲ್ವೆಟ್ ಬ್ಲೇಜರ್ (velvet blazer)ಮತ್ತು ಶರ್ಟ್ ಧರಿಸಬಹುದು. ನೀವು ಆಕ್ಸ್ ಫರ್ಡ್ ಶರ್ಟ್ ಹೊಂದಿದ್ದರೆ ತುಂಬಾ ಚೆನ್ನಾಗಿರುತ್ತದೆ. ಇದನ್ನು ಬೂದು ಅಥವಾ ಕಪ್ಪು ಬಣ್ಣದ ಪ್ಯಾಂಟ್ ಜೊತೆ ಕ್ಯಾರಿ ಮಾಡಬಹುದು. ನಿಮ್ಮ ನೆಚ್ಚಿನ ಅಕ್ಸೆಸರಿಗಳನ್ನು ಧರಿಸುವ ಮೂಲಕ ನೀವು ಸ್ಟೈಲಿಶ್ ಆಗಿ ಕಾಣಬಹುದು.
ಹೊಸ ವರ್ಷದ ಸ್ವಾಗತದಲ್ಲಿ ನೀವು ಪಾರ್ಟಿಯನ್ನು ಹೊರಗೆ ಆಚರಿಸಲು ಹೋಗದಿದ್ದರೆ ಮತ್ತು ಮನೆಯಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದರೆ, ಸ್ಮಾರ್ಟ್ ಕ್ಯಾಶುಯಲ್ ವೇರ್ ಆಯ್ಕೆಯು ನಿಮಗೆ ಉತ್ತಮವಾಗಿದೆ. ನೀವು ಆಕ್ಸ್ಫರ್ಡ್ ಶರ್ಟ್ಗಳು, ಸೂಟ್ ಜಾಕೆಟ್ಗಳು, ಬ್ಲೇಜರ್ಗಳು, ಚಿನೋಗಳನ್ನು ಧರಿಸಬಹುದು. ಕೂದಲಿಗೆ ಲೋಹದ ಗಡಿಯಾರ, ಸುಗಂಧ ದ್ರವ್ಯ, ಜೆಲ್ ಹಚ್ಚುವ ಮೂಲಕ, ನೀವು ಹಾಟ್ ಮತ್ತು ಡ್ಯಾಶಿಂಗ್ ಲುಕ್ ಪಡೆಯಬಹುದು.
ಇದು ತುಂಬಾ ಕೋಲ್ಡ್ ಇರೋ ಸ್ಥಳದಲ್ಲಿ ಅಂದರೆ ಗಿರಿಧಾಮ, ಕ್ಲಬ್ ಪಾರ್ಟಿ, ಬೀಚ್ ಅಥವಾ ಪೂಲ್ ಪಾರ್ಟಿ ಮಾಡಲು ಹೊರಟರೆ, ನೀವು ನಿಮ್ಮನ್ನು ಸೇಫ್ ಆಗಿರಿಸಬೇಕು. ನೀವು ಜೀನ್ಸ್ ಮೇಲೆ ಕಾರ್ಡಿಗನ್ ಧರಿಸಬಹುದು. ಫಂಕಿ, ಕೂಲ್, ಮಲ್ಟಿಕಲರ್ ಕಾರ್ಡಿಗನ್, ಸ್ವೆಟರ್ ಗಳು ಪರ್ಫೆಕ್ಟ್ ಪಾರ್ಟಿ ಉಡುಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಣಿಗಳು, ಸಕ್ವಿನ್ಡ್, ಹೊಳೆಯುವ, ನಕ್ಷತ್ರಗಳಿಂದ ಕೂಡಿದ ಕಾರ್ಡಿಗನ್ ಗಳು ಸಹ ಟ್ರೆಂಡ್ ನಲ್ಲಿವೆ, ಇದನ್ನು ನೀವು ಪ್ಯಾಂಟ್, ಜೀನ್ಸ್, ಲೆದರ್ ಪ್ಯಾಂಟ್ ಜೊತೆ ಧರಿಸಬಹುದು. ಇದು ನಿಮಗೆ ಬೆಚ್ಚನೆ ಅನುಭವ ನೀಡುತ್ತೆ.
ಜೀನ್ಸ್ ಜೊತೆ, ನೀವು ಲಿನಿನ್ ಶರ್ಟ್ ಗಳೊಂದಿಗೆ ಪ್ರಿಂಟೆಡ್ ಬ್ಲೇಜರ್ (printed blazer) ಗಳನ್ನು ಧರಿಸಬಹುದು. ಲಾಂಗ್ ಬ್ಲೇಜರ್ ಕೂಡ ಸ್ಮಾರ್ಟ್ ಲುಕ್ ನೀಡುತ್ತದೆ. ನಿಮ್ಮ ನೆಚ್ಚಿನ ಅಕ್ಸೆಸರಿಗಳನ್ನು ನೀವು ಕ್ಯಾರಿ ಮಾಡಬಹುದು. ಝರಿ ವರ್ಕ್, ಸೀಕ್ವೆನ್ಸ್ ವರ್ಕ್ ಬ್ಲೇಜರ್ ಗಳು, ಜಾಕೆಟ್ ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ.
ನೀವು ತುಂಬಾ ಕ್ಯಾಶುಯಲ್ ಲುಕ್ (casual look) ಬಯಸಿದರೆ ಸ್ವೆಟ್ಶರ್ಟ್ ಮತ್ತು ಜೀನ್ಸ್ ಧರಿಸಬಹುದು. ಇದರ ಜೊತೆಗೆ ನೀವು ಬೂಟುಗಳಲ್ಲಿ ಕಪ್ಪು ಲೋಫರ್ ಗಳನ್ನು ಧರಿಸಿದರೆ, ಅದು ಕೂಲ್ ಆಗಿ ಕಾಣುತ್ತದೆ. ನೀವು ಬಯಸಿದರೆ, ಸ್ಕಾರ್ಫ್, ಮಫ್ಲರ್, ಟೋಪಿಗಳನ್ನು ಧರಿಸಬಹುದು. ಕ್ಲಬ್ ಪಾರ್ಟಿಗೆ ಈ ಲುಕ್ ಅತ್ಯುತ್ತಮವಾಗಿರುತ್ತದೆ.
ನೀವು ಕುರ್ತಾ ಧರಿಸಲು ಬಯಸಿದರೆ, ರೇಷ್ಮೆ ಕುರ್ತಾವನ್ನು ಜೀನ್ಸ್ ನೊಂದಿಗೆ ಕಂಬೈನ್ ಮಾಡಬಹುದು. ಈ ಪಾರ್ಟಿ ಉಡುಗೆಗಳ ಹೊರತಾಗಿ, ನೀವು ಹೊಳೆಯುವ, ರೇಷ್ಮೆಯಂತಹ ಶರ್ಟ್, ವೇಸ್ಟ್ಕೋಟ್, ಪ್ಯಾಂಟ್ ಅನ್ನು ಕಂಬೈನ್ ಮಾಡಬಹುದು. ಡೆನಿಮ್ ನೊಂದಿಗೆ ಕಪ್ಪು ಲೆದರ್ ಫಿಟ್ ಟಿ-ಶರ್ಟ್ ಗಳು, ಚೆಕ್ ಶರ್ಟ್ ಗಳು ಹೊಸ ವರ್ಷದ ಮುನ್ನಾದಿನದ ಪಾರ್ಟಿ ಉಡುಗೆಗೆ ಉತ್ತಮ ಆಯ್ಕೆಗಳಾಗಿವೆ.